ಲೋಕಾಪುರ: ಕಾಡರಕೊಪ್ಪ ರಸ್ತೆಯ ಶಂಭುಲಿಂಗಾನಂದ ಮಠದ ಆಡಳಿತ ಮಂಡಳಿ, ಹಿರಿಯ ನಾಗರಿಕರ ಸೇವಾ ಸಂಘ ಹಾಗೂ ನಿವೃತ್ತ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀಮದ್ ಭಗವದ್ಗೀತಾ ಅಭಿಯಾನವನ್ನು ಜೂ.29ರಂದು ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪಂಡಿತ ದಯಾನಂದ ಮಹಾಸರಸ್ವತಿ ಸ್ವಾಮೀಜಿ, ಕಾಡರಕೊಪ್ಪ, ಅಧ್ಯಕ್ಷತೆ ಶಿವಾನಂದ ಸ್ವಾಮೀಜಿ, ಲಕ್ಷಾನಟ್ಟಿ, ನೇತೃತ್ವ ಕೃಷ್ಣಾನಂದ ಶರಣರು, ಶಂಕರಾಚಾರ್ಯ ಅವಧೋತ ಆಶ್ರಮ, ಖಜ್ಜಿಡೋಣಿ ಉಪನ್ಯಾಸಕರಾಗಿ ಮಹಾಂತ ಸ್ವಾಮೀಜಿ, ಬಸವ ಬೃಂದಾವನ, ಶಿರೋಳ, ಜ್ಞಾನಾನಂದ ಸ್ವಾಮೀಜಿ, ಬೀಳಗಿ, ಮಾತೋಶ್ರೀ ಸರಸ್ವತಿ ಅಮ್ಮನವರು ವಹಿಸಲಿದ್ದಾರೆ.

ಪ್ರತಿ ತಿಂಗಳ ಕೊನೆಯ ಸೋಮವಾರದ ಸಂಜೆ 6 ರಿಂದ 9 ಗಂಟೆಯವರೆಗೆ ಶಂಭುಲಿಂಗಾನಂದ ಮಠದ ಕಾಡರಕೊಪ್ಪ ರಸ್ತೆ, ಲೋಕಾಪುರ ಇಲ್ಲಿ ನಡೆಸುವುದೆಂದು ಸಂಕಲ್ಪ ಮಾಡಲಾಗಿದೆ. ಕಾರಣ ಲೋಕಾಪುರ ಹಾಗೂ ಸುತ್ತಲಿನ ಗ್ರಾಮಗಳ ಮಠಾಧೀಶರು, ಸಮಸ್ತ ಭಕ್ತರು ಈ ಕಾರ್ಯಕ್ರಮಕ್ಕೆ ಪ್ರತಿ ತಿಂಗಳೂ ಆಗಮಿಸಿ ಸದುಪಯೋಗ ಪಡಿಸಿಕೊಳ್ಳ ಕೋರಲಾಗಿದೆ. ಕಾರ್ಯಕ್ರಮದ ಮುಗಿದ ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ವಿ.ಬಿ.ಮಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.