ಆತ್ಮಭೂಷಣ್‌

ಮಂಗಳೂರು: ಬಹುನಿರೀಕ್ಷಿತ ಬೆಂಗಳೂರು-ಮಡ್ಗಾಂವ್‌ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಓಡಾಟ ಆರಂಭಕ್ಕೆ ಸಿಂಗಲ್‌ ಹಳಿ ಬದಲು ದ್ವಿಹಳಿ ಇಲ್ಲದೇ ಇರುವುದು ಪ್ರಮುಖ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ.

ಬೆಂಗಳೂರು(ಯಶವಂತಪುರ) -ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರದ ತಾತ್ಕಾಲಿಕ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಆ ವೇಳಾಪಟ್ಟಿ ಪ್ರಕಾರ ವಂದೇ ಭಾರತ್‌ ರೈಲು ಮಂಗಳೂರಿಗೆ ಆಗಮಿಸದೆ ಹೊರವಲಯ ಪಡೀಲ್‌ ಮೂಲಕ ಸಂಚರಿಸಲಿದೆ. ಇದರಿಂದಾಗಿ ಉದ್ದೇಶಿತ ರೈಲು ಮಂಗಳೂರಿನ ಜಂಕ್ಷನ್‌ ಮತ್ತು ಸೆಂಟ್ರಲ್‌ ನಿಲ್ದಾಣ ಸಂಪರ್ಕಿಸದೆ ಸಂಚರಿಸಲಿರುವುದು ಮಂಗಳೂರಿಗರ ನಿರಾಶೆಗೆ ಕಾರಣವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸ್ಟಾಪ್‌ ಇಲ್ಲ:

ಪ್ರಸ್ತಾವಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ ಬಳಿಕ ಸುಬ್ರಹ್ಮಣ್ಯ ಮಾರ್ಗ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಇದೆ. ಅಲ್ಲಿಂದ ಪಡೀಲ್‌, ತೋಕೂರು(ನಿಲುಗಡೆ ಇಲ್ಲ) ಮೂಲಕ ನೇರವಾಗಿ ಮಡ್ಗಾಂವ್‌ ತಲುಪಲಿದೆ. ಈ ರೈಲು ಮಾರ್ಗದಲ್ಲಿ ಬರುವ ಮಂಗಳೂರು ಜಂಕ್ಷನ್‌ ಅಥವಾ ಸೆಂಟ್ರಲ್‌, ಉಡುಪಿ ಹಾಗೂ ಕಾರವಾರಗಳಲ್ಲಿ ನಿಲುಗಡೆ ಪ್ರಸ್ತಾಪಿಸಿಲ್ಲ. ಸಾಮಾನ್ಯವಾಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಜಿಲ್ಲಾ ಕೇಂದ್ರಗಳ ಮೂಲಕ ಹಾದುಹೋಗುವಾಗ ಅಲ್ಲಿ ಕನಿಷ್ಠ ನಿಲುಗಡೆಗೆ ಅವಕಾಶ ಇರುತ್ತದೆ. ಆದರೆ ಈ ವೇಳಾಪಟ್ಟಿಯಲ್ಲಿ ದ.ಕ. ಜಿಲ್ಲೆಯ ಸುಬ್ರಹ್ಮಣ್ಯ ಮಾರ್ಗ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಪ್ರಸ್ತಾಪಿಸಲಾಗಿದೆ. ಇದು ಮೂರು ಜಿಲ್ಲೆಗಳ ರೈಲ್ವೆ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಮೂರು ಜಿಲ್ಲೆಗಳ ಸಂಸದರು ಈ ಬಗ್ಗೆ ರೈಲ್ವೆ ಇಲಾಖೆಗೆ ಒತ್ತಡ ತಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಿಲುಗಡೆಗೆ ಪ್ರಯತ್ನಿಸಬೇಕು ಎಂಬ ಕೂಗು ಕೇಳಿಬಂದಿದೆ. ಸಿಂಗಲ್‌ ಲೈನ್‌ ಅಡ್ಡಿ?:

ಮುಖ್ಯವಾಗಿ ಬೆಂಗಳೂರಿನಿಂದ ಮಡ್ಗಾಂವ್‌ ವರೆಗೆ ಸಿಂಗಲ್‌ ಲೈನ್‌ ಇದೆ. ಡಬಲ್‌ ಲೈನ್‌ ಕಾರ್ಯಗತಗೊಳ್ಳದೆ ಹಾಸನ-ಮಂಗಳೂರು ಮಾರ್ಗದಲ್ಲಿ ಸರಕು ರೈಲು ಹೊರತು ಪಡಿಸಿ ಬೇರೆ ಹೊಸ ರೈಲು ಸಂಚಾರಕ್ಕೆ ಎಚ್‌ಎಂಆರ್‌ಡಿಸಿ(ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ) ಅನುಮತಿ ನೀಡುವುದಿಲ್ಲ. ಈಗಾಗಲೇ ಈ ಮಾರ್ಗದಲ್ಲಿ ಸರಕು ಸಾಗಾಟ ರೈಲುಗಳು ಓಡಾಟ ನಡೆಸುತ್ತಿವೆ. ಹಾಗಾಗಿ ಎಚ್‌ಎಂಆರ್‌ಡಿಸಿ ಆದಾಯ ಬಿಟ್ಟು ಹೆಚ್ಚುವರಿ ಪ್ರಯಾಣಿಕ ರೈಲು ಓಡಾಟಕ್ಕೆ ಅನುಮತಿಸುವುದು ಕಷ್ಟ ಸಾಧ್ಯ. ಬೆಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ರೈಲಿನ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾದರೂ ಓಡಾಟ ನಡೆಸುತ್ತದೆಯೇ ಎಂಬ ಅನುಮಾನ ರೈಲ್ವೆ ಹೋರಾಟಗಾರರನ್ನು ಕಾಡತೊಡಗಿದೆ.

ರೈಲ್ವೆ ನೀಡುವ ಕಾರಣ: ಈ ಬಗ್ಗೆ ತಮ್ಮನ್ನು ಸಂಪರ್ಕಿಸಿದ ರೈಲ್ವೆ ಸಂಘಟನೆಗಳಿಗೆ ಅಧಿಕಾರಿಗಳು ಬೇರೆಯೇ ಕಾರಣ ನೀಡುತ್ತಿದ್ದಾರೆ. ಮಂಗಳೂರು ಜಂಕ್ಷನ್‌ ಮತ್ತು ಸೆಂಟ್ರಲ್‌ ಹೊರತುಪಡಿಸಿದರೆ ಬೇರೆ ಯಾವ ನಿಲ್ದಾಣಗಳಲ್ಲೂ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಇಲ್ಲ. ಮಂಗಳೂರು ಜಂಕ್ಷನ್‌ ಅಥವಾ ಸೆಂಟ್ರಲ್‌ಗೆ ಆಗಮಿಸಿದರೆ ನೀರು ತುಂಬಿಸಲು ವ್ಯರ್ಥ ಸಮಯ ಪೋಲಾಗುತ್ತದೆ ಎಂಬುದು. ವಾಸ್ತವದಲ್ಲಿ ಹಾಲಿ ಸಂಚರಿಸುತ್ತಿರುವ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಹಾಸನ ಹಾಗೂ ಮಡ್ಗಾಂವ್‌ನಲ್ಲಿ ನೀರು ತುಂಬಿಸಿದ ಬಳಿಕ ಬೇರೆ ಎಲ್ಲಿಯೂ ನೀರು ತುಂಬಿಸುವ ಅನಿವಾರ್ಯತೆ ಇರುವುದಿಲ್ಲ. ಇದನ್ನು ಹೊರತುಪಡಿಸಿದರೆ ವಂದೇ ಭಾರತ್‌ ಅಥವಾ ಅಮೃತ್‌ ಭಾರತ್‌ ರೈಲುಗಳು ಎರಡೂ ಕಡೆ ತುದಿಗಳಲ್ಲಿ ಎಂಜಿನ್‌ ಹೊಂದಿರುವುದರಿಂದ ಮಂಗಳೂರು ಜಂಕ್ಷನ್‌ಗೆ ಬಂದುಹೋದರೂ ಎಂಜಿನ್‌ ತಿರುಗಿಸುವ ಪ್ರಮೇಯ ಇಲ್ಲ. ಹಾಗಾಗಿ ಹೆಚ್ಚೇನೂ ವಿಳಂಬಿಸದರೆ ಬಂದು ಹೋಗಬಹುದು ಎನ್ನುವುದು ರೈಲ್ವೆ ಸಂಘಟನೆಗಳ ಅಭಿಪ್ರಾಯ.

ಸುಬ್ರಹ್ಮಣ್ಯ ಮಾರ್ಗ ಟರ್ಮಿನಲ್‌ ನಿಲ್ದಾಣವಾದರೂ ಅಲ್ಲಿ ಬೇಕಾದಷ್ಟು ನೀರಿಲ್ಲ. ಉಳಿದಂತೆ ಮುರುಡೇಶ್ವರ ಹಾಗೂ ಕಾರವಾರದ ನಡುವೆ ಯಾವುದಾದರೂ ನಿಲ್ದಾಣಗಳಲ್ಲಿ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಆಗಬೇಕು. ಬೇರೆ ಯಾವ ನಿಲ್ದಾಣಗಳಲ್ಲೂ ರೈಲಿಗೆ ಬೇಕಾಗುವಷ್ಟು ನೀರು ತುಂಬಿಸುವ ಸೌಲಭ್ಯ ಸಿಕ್ಕಿಲ್ಲ ಎನ್ನುವುದು ರೈಲ್ವೆ ಮೂಲಗಳ ಮಾಹಿತಿ.

ಬೆಂಗಳೂರು-ಮಡ್ಗಾಂವ್‌ ನಡುವೆ ವಯಾ ಪಡೀಲ್‌ ಮೂಲಕ ವಂದೇ ಭಾರತ್‌ ರೈಲು ಓಡಾಟಕ್ಕೆ ಆಕ್ಷೇಪ ಇಲ್ಲ, ಆದರೆ ಮಂಗಳೂರು-ಬೆಂಗಳೂರು ನಡುವೆ ಇನ್ನೊಂದು ವಂದೇ ಭಾರತ್‌ ರೈಲು ಆರಂಭಿಸುವ ಮೂಲಕ ಮಂಗಳೂರಿಗರಿಗೂ ವಂದೇ ಭಾರತ್‌ನಲ್ಲಿ ಸಂಚರಿಸಲು ರೈಲ್ವೆ ಇಲಾಖೆ ಅವಕಾಶ ಕಲ್ಪಿಸಲಿ.

ಹನುಮಂತ ಕಾಮತ್‌, ಸಂಚಾಲಕರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ

-----------

ಕನ್ನಡಪ್ರಭ ವಾರ್ತೆ ಮಂಗಳೂರುಬಹುನಿರೀಕ್ಷಿತ ಬೆಂಗಳೂರು-ಮಡ್ಗಾಂವ್‌ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಓಡಾಟ ಆರಂಭಕ್ಕೆ ಸಿಂಗಲ್‌ ಹಳಿ ಬದಲು ದ್ವಿಹಳಿ ಇಲ್ಲದೇ ಇರುವುದು ಪ್ರಮುಖ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ.