ಬಿಜೆಪಿಗೆ ಈ ಚುನಾವಣೆಯಲ್ಲಿ ಭಾರಿ ಸೋಲು: ಅಂಬಣ್ಣ

| Published : Apr 25 2024, 01:06 AM IST

ಬಿಜೆಪಿಗೆ ಈ ಚುನಾವಣೆಯಲ್ಲಿ ಭಾರಿ ಸೋಲು: ಅಂಬಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಯಾವುದೇ ಅಭಿವೃದ್ಧಿ ಕಾರ್ಯಕೈಗೊಂಡಿಲ್ಲ, ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಹೀಗಾಗಿ ಸಂವಿಧಾನ ಬದಲಾವಣೆ ಮಾಡುವ ಅಜಂಡಾ ಇಟ್ಟುಕೊಂಡಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಭಾರಿ ಸೋಲು ಕಾಣುತ್ತದೆ ಎಂದು ಕೆಪಿಸಿಸಿ ಸ್ಟಾರ ಪ್ರಚಾರಕರು ಮತ್ತು ಆದಿಜಾಂಬವ ಸಮಾಜದ ಹಿರಿಯ ಮುಖಂಡ ಅಂಬಣ್ಣ ಅರೋಲಿಕರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿಪ್ರಧಾನಿ ನರೇಂದ್ರ ಮೋದಿ ಯಾವುದೇ ಅಭಿವೃದ್ಧಿ ಕಾರ್ಯಕೈಗೊಂಡಿಲ್ಲ, ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಹೀಗಾಗಿ ಸಂವಿಧಾನ ಬದಲಾವಣೆ ಮಾಡುವ ಅಜಂಡಾ ಇಟ್ಟುಕೊಂಡಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಭಾರಿ ಸೋಲು ಕಾಣುತ್ತದೆ ಎಂದು ಕೆಪಿಸಿಸಿ ಸ್ಟಾರ ಪ್ರಚಾರಕರು ಮತ್ತು ಆದಿಜಾಂಬವ ಸಮಾಜದ ಹಿರಿಯ ಮುಖಂಡ ಅಂಬಣ್ಣ ಅರೋಲಿಕರ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಚುನಾವಣೆ ಅಂಬೇಡ್ಕರ್‌ ಸಂವಿಧಾನ ಮತ್ತು ಆರ್‌ಎಸ್‌ಎಸ್ ಸಂವಿಧಾನ ನಡುವಿನ ಸಂಘರ್ಷದ ನಡುವೆ ಚುನಾವಣೆ ನಡೆಯಲಿದೆ. ಮೊದಲಿನಿಂದಲೂ ಅಂಬೇಡ್ಕರ್‌ ಬರೆದ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡು ಬರದ ಬಿಜೆಪಿ ಪದೇ ಪದೇ ಸಂವಿಧಾನ ಬದಲಾವಣೆ ಮಾಡುವ ನೀತಿ ಹೊಂದಿದ್ದಾರೆ. ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡಿರುವ ನಾಯಕರ ಮೇಲೆ ಏನು ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಉಳಿಸುವ ಮತ್ತು ಅಂಬೇಡ್ಕರ್‌ ತತ್ವಸಿದ್ಧಾಂತದ ಮೇಲೆ ನಡೆಯುವ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಪ್ರಿಯಾಂಕ ಜಾರಕಿಹೊಳಿ ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಏಳುಕೋಟೆಪ್ಪ ಪಾಟೀಲ, ತೋಳಿ ಭರಮಣ್ಣ ಉಪಸ್ಥಿರಿದ್ದರು.