ರಾಕೇಶ ಹತ್ಯೆ: ಆರೋಪಿಗೆ ಉಗ್ರ ಶಿಕ್ಷೆ ನೀಡಲು ಒತ್ತಾಯ

| Published : Apr 25 2024, 01:06 AM IST

ರಾಕೇಶ ಹತ್ಯೆ: ಆರೋಪಿಗೆ ಉಗ್ರ ಶಿಕ್ಷೆ ನೀಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿಯಲ್ಲಿ ನಡೆದಿರುವ ದಲಿತ ಯುವಕನ ಹತ್ಯೆ ಖಂಡಿಸಿ ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳು ಹಾಗೂ ಮಾದಿಗ ಪರ ಸಂಘಟನೆಯ ಮುಖಂಡರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಗೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಯಾದಗಿರಿಯಲ್ಲಿ ನಡೆದಿರುವ ದಲಿತ ಯುವಕ ರಾಕೇಶ್‌ ಹತ್ಯೆ ಖಂಡಿಸಿ ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳು ಹಾಗೂ ಮಾದಿಗ ಪರ ಸಂಘಟನೆಯ ಮುಖಂಡರು ಹುಣಸಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಆರೋಪಿಗಳಿಗೆ ಉಗ್ರ ಶಿಕ್ಷ ನೀಡಲು ಒತ್ತಾಯಿಸಿದರು.

ದಲಿತ ಯುವ ಮುಖಂಡ ನಾಗರಾಜ ದೊಡ್ಡಮನಿ ಮಾತನಾಡಿ, ಶಹಾಪೂರ ಪೇಟದ ರಾಕೇಶ ಎಂಬ ದಲಿತ ಯುವಕನ ಹತ್ಯೆಯಾಗಿದೆ. ರೊಟ್ಟಿ ತರಲು ಹೋಗಿದ್ದ ರಾಕೇಶನನ್ನ ಫಯಾಜ್ ಹಾಗೂ ಸಂಗಡಿಗರು ಹತ್ಯೆ ಮಾಡಿ ಜಿಲ್ಲಾದ್ಯಂತ ಭಯದ ವಾತವರಣ ನಿರ್ಮಾಣ ಮಾಡಿದ್ದಾರೆ ಎಂದರು.

ಬಸವರಾಜ ಕಟ್ಟಿಮನಿ ಕಾಮನಟಗಿ ಮಾತನಾಡಿ, ರಾಕೇಶ ಕುಟುಂಬಕ್ಕೆ 25 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಒದಗಿಸಬೇಕು ಹಾಗೂ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯ ತಿಪ್ಪಣ್ಣ ಕಡಿಮನಿ, ಅಬ್ಲಪ್ಪ ಹಳ್ಳಿ, ನಂದಪ್ಪ ಪೀರಾಪೂರ, ಲೋಹಿತ ದೊಡ್ಡಮನಿ, ಸಿದ್ದಣ್ಣ ಮೇಲಿನಮನಿ, ಪರಮಣ್ಣ ಕಟ್ಟಿಮನಿ, ಪವಾಡೆಪ್ಪ ಕಕ್ಕೇರಾ, ಮುದಕಪ್ಪ ಆನೇಕಿ, ವಿರೇಶ ಗುಳಬಾಳ, ಪರಮಣ್ಣ ಕನ್ನಳ್ಳಿ, ಸಂತೋಷ ದೇವರಮನಿ, ಸುರೇಶ ದೊಡ್ಡಮನಿ, ಭೀಮಣ್ಣ ಹೆಬ್ಬಾಳ, ಬಸವರಾಜ ದೊಡ್ಡಮನಿ, ಕಾಶಿನಾಥ ಹಾದಿಮನಿ ಗೋಪಾಲ್ ಕಟ್ಟಿಮನಿ, ತಿಪ್ಪಣ್ಣ ಬೇವಿನಗಿಡ ಸೇರಿದಂತೆ ಇತರರಿದ್ದರು.