ಕಿಕ್ಕೇರಿ:

ನಾಡಪ್ರಭು ಕೆಂಪೇಗೌಡರ ಕೆರೆಕಟ್ಟೆ, ಪರಿಸರ ಪ್ರೇಮ, ಸಾಂಸ್ಕೃತಿಕ ವೈಚಾರಿಕತೆಯನ್ನು ಜನಮನದಲ್ಲಿ ಮೈಗೂಡಿಸಿಕೊಂಡಲ್ಲಿ ನಾಡು ಸುಂದರವಾಗಲಿದೆ ಎಂದು ವಿಶ್ರಾಂತ ಪ್ರಾಂಶುಪಾಲ ಚಂದ್ರಮೋಹನ್ ತಿಳಿಸಿದರು.

ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಜರುಗಿದ ಕೆಂಪೇಗೌಡರ ಜಯಂತಿಯಲ್ಲಿ ಮಾತನಾಡಿ, ತಮ್ಮ 50 ವರ್ಷದ ಅಧಿಕಾರಾವಧಿಯಲ್ಲಿ ಕೇವಲ ಸಾಮಂತ ದೊರೆಯಾಗಿ ನಗರಕಟ್ಟಿ ಮರಗಿಡ ಬೆಳಸುವ ಜೊತೆಗೆ 347 ದೊಡ್ಡಕೆರೆ, 1200ಕ್ಕೂ ಹೆಚ್ಚು ಸಣ್ಣಕೆರೆಕಟ್ಟೆ, ಕಲ್ಯಾಣಿ, ರಾಜಕಾಲುವೆ ನಿರ್ಮಿಸಿದರು ಎಂದರು.

ಗಿಡಮರ ನೆಟ್ಟು ಉದ್ಯಾನನಗರಿಯಾಗಿ ಯಲಹಂಕ ನಗರಕ್ಕೆ ಸೇರಿದ್ದ ಗ್ರಾಮವನ್ನು ಬೆಂಗಳೂರು ನಗರವಾಗಿಸಿದರು. ವರ್ತಕ, ವೃತ್ತಿ ಕಸುಬುದಾರರಿಗೆ ಅವರ ಹೆಸರಿನ ಪೇಟೆ ನಿರ್ಮಿಸಿ ಆಶ್ರಯದಾತರಾದರು. ರಾಜಾಳ್ವಿಕೆಯಲ್ಲಿ ಪಾಳೇಗಾರರಾಗಿ ಕೋಟೆ, ಪೇಟೆ, ಕೆರೆ, ಕೊತ್ತಲ, ಗುಡಿ, ಗೋಪುರ, ಉದ್ಯಾನವನ ನಗರ ನಿರ್ಮಿಸಿ ನಾಡಪ್ರಭುವಾದ ಇವರ ಸ್ಮರಣೆಕಿರಿಯ ಮನಸ್ಸಿನಲ್ಲಿ ಮೂಡಿಸಬೇಕಿದೆ ಎಂದರು.

ಕೆಪಿಎಸ್ ಶಾಲೆ ಎನ್‌ಸಿಸಿ ಯೋಜನಾಧಿಕಾರಿ ಎಸ್.ಎಂ.ಬಸವರಾಜು ಮಾತನಾಡಿ, ಪ್ರಜಾಪಾಲಕನಾಗಿ ಎಲ್ಲರನ್ನು ತಮ್ಮ ಮಕ್ಕಳಂತೆ ಕಂಡ ಮಹಾನ್ ಪ್ರಭುಕೆಂಪೇಗೌಡರು. ರಾಜಪ್ರಭುತ್ವದಲ್ಲಿ ಗ್ರಾಪಂ ವ್ಯವಸ್ಥೆಯನ್ನು ಪಾಲನೆ ಮಾಡುತ್ತ ಯಾವುದೇ ಮೂಲೆಯಲ್ಲಿ ಸಮಸ್ಯೆ ಇದ್ದರೆ ಅಲ್ಲಿನ ಮುಖಂಡರನ್ನು ಕರೆಯಿಸಿ ಸಮಾಲೋಚನೆ ನಡೆಸಿ ನ್ಯಾಯ ಒದಗಿಸುತ್ತಿದ್ದ ದೂರದೃಷ್ಟಿಯ ಹರಿಕಾರರಾಗಿದ್ದರು ಎಂದು ನೆನೆದರು.


ಕೆಂಪೇಗೌಡರ ಭಾವಚಿತ್ರಕ್ಕೆಗಣ್ಯರು ಪುಷ್ಪಾರ್ಚನೆ ಮಾಡಿದರು. ಜೈಕಾರ ಹಾಕಿ ನಮಿಸಿದರು. ಸಿಹಿ ಹಂಚಿ ಸಂಭ್ರಮವನ್ನು ಮೆರೆದರು.

ಈ ವೇಳೆ ಕೆಪಿಸಿಸಿ ಸದಸ್ಯ ಸುರೇಶ್, ಜಿಪಂ ಮಾಜಿ ಉಪಾಧ್ಯಕ್ಷಕೆ.ಎಸ್. ಪ್ರಭಾಕರ್, ಗ್ರಾಪಂ ಕಾರ್ಯದರ್ಶಿ ಕೆ.ಪಿ.ಮಧುಕರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕೆ.ವೈ.ಹರೀಶ್, ಸಿಪಾಯಿ ಲೋಕೇಶ್, ತಾಲೂಕು ಪತ್ರಕರ್ತ ಸಂಘ ಅಧ್ಯಕ್ಷ ಕೆ.ವೈ.ಆನಂದ್, ಶಿಕ್ಷಕ ಎಸ್.ಎಂ. ಬಸವರಾಜು, ಮುಖಂಡರಾದ ಸತ್ಯ, ಶೇಖರ್, ಮಧು, ಕಾಯಿ ಮಂಜೇಗೌಡ, ಮಣೀಶ್, ಕೇಶವಮೂರ್ತಿ, ಅಕ್ಷಯ್, ಕೆ.ವಿ. ಅರುಣ್‌ಕುಮಾರ್, ಕಾಯಿ ಸುರೇಶ್, ಚಂದ್ರು, ನಾಗರಾಜು, ಪುಟ್ಟೇಗೌಡ, ಶಿವರಾಮೇಗೌಡ, ಕಡಹೆಮ್ಮಿಗೆರಮೇಶ್, ಉಮೇಶ್, ಜಾಣೇಗೌಡ, ಕೋಟಹಳ್ಳಿ ಕುಮಾರ್, ಸಿದ್ದಿಖ್ ಪಾಷ ಇದ್ದರು.