ಸಾರಾಂಶ
ಯಲಬುರ್ಗಾ:
ಚರಿತ್ರೆ ತಿಳಿಯದವರು ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯ ಹಾಗೂ ಹೈ-ಕ ವಿಮೋಚನೆಗಾಗಿ ತ್ಯಾಗ, ಬಲಿದಾನಗೈದ ಮಹನೀಯರ ಸ್ಮರಣೆ ಅಗತ್ಯ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.ತಾಲೂಕಿನ ಕರಮುಡಿ ಗ್ರಾಮದಲ್ಲಿ ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮುಂಬೈ ಹಾಗೂ ಹೈ-ಕ ಮಧ್ಯಭಾಗದಲ್ಲಿ ಲಡಾಯಿ ಪ್ರಾರಂಭವಾದಾಗ ಕೆಲವರು ಯುದ್ಧದಲ್ಲಿ ಮಡಿದಿದ್ದಾರೆ. ಅವರ ಸ್ಮರಣಾರ್ಥ ಲಡಾಯಿ ಸ್ಮಾರಕ ಮಾಡಿ ಅದನ್ನು ಜೀವಂತಿಕೆ ಇಡಬೇಕಾದ ಅವಶ್ಯಕತೆ ತುರ್ತಾಗಿ ಆಕಬೇಕಾಗಿದೆ ಎಂದರು.ಲಡಾಯಿ ಸ್ಮಾರಕ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಬಸವರಾಜ ರಾಯರಡ್ದಿ ಗಮನಕ್ಕೆ ತರಲಾಗುವುದು. ಹೈ-ಕ ವಿಮೋಚನೆಯಲ್ಲಿ ಈ ಭಾಗದ ಕರಮುಡಿಯ ಶಂಕ್ರಪ್ಪ ನಿಂಗೋಜಿ, ವೀರಪ್ಪ ಮಾನಶೆಟ್ಟಿ ಹಾಗೂ ಅನೇಕ ಸ್ಥಳೀಯರು ಸ್ವಾತಂತ್ರ್ಯ ಸಂಗ್ರಾಮ ಹಾಗೂ ಹೈ-ಕ ವಿಮೋಚನಾ ಹೋರಾಟಕ್ಕಾಗಿ ತಮ್ಮ ಜೀವನ ಸವೆಸಿದ್ದಾರೆ ಎಂದು ಹೇಳಿದರು.
ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕೆ ವಿನಃ ಪ್ರಚೋದನೆಗೆ ಅವಕಾಶ ಕೊಡಬಾರದು. ರಜಾಕಾರನ್ನು ಮುಸ್ಲಿಂ ಜನಾಂಗಕ್ಕೆ ತಳಕು ಹಾಕಬಾರದು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಜನಾಂಗವನ್ನು ನಿಂದಿಸುವ ಕೆಲಸ ಅಕ್ಷಮ್ಯ ಅಪರಾಧ ಎಂದ ಅವರು, ರಾಜ್ಯದಲ್ಲಿ 8 ಲಕ್ಷ ಜನ, 150 ರಾಷ್ಟ್ರಾದ್ಯಾಂತ ಸ್ಕೌಟ್ ಹಾಗೂ ಗೈಡ್ಸ್‌ನಲ್ಲಿ ಇದ್ದಾರೆ. ಅಂತಹ ಸಂಸ್ಥೆಗೆ ರಾಜ್ಯ ಮುಖ್ಯ ಆಯುಕ್ತನಾಗಿರುವುದು ನನ್ನ ಭಾಗ್ಯ ಎಂದರು.ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎಚ್.ಎಂ. ಸಿದ್ರಾಮಸ್ವಾಮಿ, ಶಿಕ್ಷಕ ಬಸವರಾಜ ಕೊಂಡಗುರಿ, ಸಂಪನ್ಮೂಲ ವ್ಯಕ್ತಿ ಭೀಮಪ್ಪ ಹವಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ದಿ, ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತೆ ಸಿ. ಮಂಜುಳಾ, ಮಲ್ಲೇಶ್ವರಿ ˌಮಲ್ಲಿಕಾರ್ಜುನ ಚೌಕಿಮಠ, ನಿಂಗೋಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶಶಿಕಾಂತ ನಿಂಗೋಜಿ, ಬಿ.ಎಸ್. ವೀರಾಪುರ, ರಾಮಣ್ಣ ಪ್ರಭಣ್ಣವರ, ಕೆ.ಎಸ್. ಕುರಿ, ಸ. ಶರಣಪ್ಪ ಪಾಟೀಲ, ಬಸವವಾಜ ಕಿಳ್ಳಿಕ್ಯಾತರ, ಶಿವಪುತ್ರಪ್ಪ ಮಲಿಗೋಡದ, ನಿಖಿಲ್ ಗೊಂಗಡಶೆಟ್ಟಿ, ರಾಮಣ್ಣ ಮಾನಶೆಟ್ಟಿ, ಡಾ. ಪ್ರಕಾಶ, ಡಾ. ರವಿ ನಿಂಗೋಜಿ, ವೀರೇಶ ಪತ್ತಾರ, ವೀರೇಶ ಹೊನ್ನೂರ ಸೇರಿದಂತೆ ಮತ್ತಿತರರು ಇದ್ದರು.೧೭ವೈಎಲ್‌ಬಿ೦೩ಕರಮುಡಿಯಲ್ಲಿ ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))