ಸಾರಾಂಶ
ಶಿರಾಲಿಯಲ್ಲಿ ವೈಷ್ಣವಿ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆಕನ್ನಡಪ್ರಭ ವಾರ್ತೆ ಭಟ್ಕಳ
ಶಿರಾಲಿಯಲ್ಲಿ ಹೊಸದಾಗಿ ಆರಂಭಿಸಲಾದ ವೈಷ್ಣವಿ ಸೌಹಾರ್ದ ಸಹಕಾರಿ ಸಂಘವನ್ನು ಉಜಿರೆ ಶ್ರೀರಾಮಕ್ಷೇತ್ರದ 1008 ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಹೊಸದಾಗಿ ಆರಂಭಗೊಂಡ ಸಹಕಾರಿ ಸಂಘ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿ ಉತ್ತಮವಾಗಿ ಬೆಳೆಯಲಿ. ಕೃಷ್ಣ ನಾಯ್ಕರು ಎಲ್ಲರ ಸಹಕಾರದಿಂದ ಶಿರಾಲಿಯಲ್ಲಿ ಹೊಸ ಸೌಹಾರ್ದ ಸಹಕಾರಿ ಸಂಘ ಸ್ಥಾಪಿಸಿದ್ದಾರೆ. ಈ ಸಹಕಾರ ಸಂಘದಿಂದ ಎಲ್ಲರಿಗೂ ಅನುಕೂಲವಾಗಲಿ ಎಂದು ಶುಭ ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ,ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ನಾಮಧಾರಿ ಸಮಾಜದ ಅಧ್ಯಕ್ಷ ಆರ್.ಕೆ. ನಾಯ್ಕ, ಭಟ್ಕಳ ಹವ್ಯಕ ವಲಯದ ಅಧ್ಯಕ್ಷ ಎಂ.ವಿ. ಹೆಗಡೆ, ದೇವಡಿಗ ಸಮಾಜದ ಅಧ್ಯಕ್ಷ ಲಕ್ಷ್ಮಣ ಡಿ. ಕೋಟದಮಕ್ಕಿ, ಉದ್ಯಮಿ ಶ್ರೀನಿವಾಸ ಪ್ರಭು, ಜಿಎಸ್ಬಿ ಸಮಾಜದ ಅಧ್ಯಕ್ಷ ಅಶೋಕ ಪೈ ಮುಂತಾದವರಿದ್ದರು. ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ನಾಮಧಾರಿ ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಇದ್ದರು. ಇದೇ ಸಂದರ್ಭದಲ್ಲಿ ಸಂಘದಿಂದ ಪಡೆದ ಸಾಲದಿಂದ ಖರೀದಿಸಿದ ಕಾರನ್ನು ಶ್ರೀಗಳು ಹಸ್ತಾಂತರಿಸಿದರು.ಭಟ್ಕಳ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೆಮ್ 25 ಫೆಸ್ಟ್ ಯಶಸ್ವಿ:
ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಪಿಯುಸಿ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಒಂದು ದಿನದ ಸ್ಟೆಮ್ 2025 ಫೆಸ್ಟ್ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಅಂಜುಮನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಇಶಾಕ್ ಶಾಬಂದ್ರಿ, ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅಂಜುಮನ್ ಸಂಸ್ಥೆ ಇಂದಿನ ದಿನಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಶಿಕ್ಷಣ ನೀಡುತ್ತಿದೆ. ಇಂತಹ ಫೆಸ್ಟ್ ನಿಂದ ಸೈನ್ಸ್ ವಿದ್ಯಾರ್ಥಿಗಳು ಜ್ಞಾನ ವೃದ್ಧಿಸಿಕೊಳ್ಳಲು ಮತ್ತು ಹೊಸ ಹೊಸ ಆವಿಷ್ಕಾರದಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಉಪಸ್ಥಿತರಿದ್ದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಜುಕಾಕೊ, ಕಾರ್ಯದರ್ಶಿ ಮೊಹ್ಮದ್ ಅನ್ಸಾರ್ ದಾಮ್ದಾ, ಅಧ್ಯಕ್ಷತೆ ವಹಿಸಿದ್ದ ಮೊಹ್ಮದ್ ಸಾಧಿಕ ಫಿಲ್ಲೂರ್ ಮಾತನಾಡಿದರು. ಪ್ರಾಂಶುಪಾಲ ಡಾ. ಫಝಲುರ್ ರೆಹಮಾನ್ ಪ್ರಾಸ್ತಾವಿಕ ಮಾತನಾಡಿದರು. ರಜಿಸ್ಟ್ರಾರ್ ಜಾಹೀದ್ ಖರೂರಿ ಸ್ಟೆಮ್ 25ರ ಮಹತ್ವದ ಬಗ್ಗೆ ವಿವರಿಸಿದರು. ಸಂಯೋಜಕ ಶ್ರೀಶೈಲ ಭಟ್ ಸ್ವಾಗತಿಸಿದರು. ನಾದೀರ್ ಅಹ್ಮದ್ ವಂದಿಸಿದರು. ಸ್ಟೆಮ್ ನಲ್ಲಿ ವಿವಿಧ ಪ್ರದೇಶದ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))