ಸಾರಾಂಶ
ರಕ್ತ ಕೇಂದ್ರದ ಯೊಜನೆಗಳಿಗೆ ಕೊಡುಗೈ ದಾನಿಯಾಗಿರುವ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಅವರು ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ 1 ಇವಿ ಸ್ಕೂಟರ್ ಮತ್ತು 4 ಸೆಲ್ಫಿ ಸ್ಟ್ಯಾಂಡ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಹುಬ್ಬಳ್ಳಿ:
ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಹೆಸರು ಚಿರಪರಿಚಿತವಾಗಿದೆ. ಇದೀಗ ಅಗತ್ಯವಿರುವ ರೋಗಿಗಳಿಗೆ ತಕ್ಷಣ ರಕ್ತವನ್ನು ತಲುಪಿಸುವ ರಕ್ತದೂತ ಸೇವಾ ಘಟಕ ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತಕೇಂದ್ರ ಮತ್ತೊಂದು ನೂತನ ರಕ್ತದೂತ ಸೇವಾ ವಾಹನದ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಕ್ತ ಕೇಂದ್ರದ ಯೊಜನೆಗಳಿಗೆ ಕೊಡುಗೈ ದಾನಿಯಾಗಿರುವ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಅವರು ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ 1 ಇವಿ ಸ್ಕೂಟರ್ ಮತ್ತು 4 ಸೆಲ್ಫಿ ಸ್ಟ್ಯಾಂಡ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಹಿಂದೆಂಯೂ ಸಹ 2 ಇವಿ ಸ್ಕೂಟರ್ ಮತ್ತು ಬಸ್‍ಗೆ ಹಣದ ಸಹಾಯ ಮಾಡಿದ್ದರು. ರಕ್ತದಾನ ಶಿಬಿರಗಳಿಗೆ ಮತ್ತು ಅನೇಕ ಬಾರಿ ರಕ್ತ ಕೇಂದ್ರಕ್ಕೆ ಸಹಾಯ ಮತ್ತು ಸಹಕಾರ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಈ ನೂತನ ಸೇವಾ ಘಟಕದ ಕಟ್ಟಡ ದಾನಿ ವೀರೇಂದ್ರ ಛೇಡಾ ಅವರ ಕೊಡುಗೆ ಶ್ಲಾಘನೀಯ. ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಅವರು ಪೂರ್ಣ ಸಮಯಕೊಟ್ಟು ನಿಸ್ವಾರ್ಥತೆಯಿಂದ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.ಟಿವಿಎಸ್ ಇವಿ ದ್ವಿಚಕ್ರ ವಾಹನ ಮತ್ತು ಸೆಲ್ಫಿ ಸ್ಟ್ಯಾಂಡ್ ಕೊಡುಗೆ ನೀಡಿದ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸೇವಾ ಕಾರ್ಯ ಮೆಚ್ಚುವಂಥದ್ದು. ಅಗತ್ಯವಿರುವ ರೋಗಿಗಳಿಗೆ ಶುಲ್ಕವಿಧಿಸದೆ ಉಚಿತವಾಗಿ ರಕ್ತ ಪೂರೈಸುತ್ತಿದೆ. ಆದರೆ, ತ್ವರಿತವಾಗಿ ರಕ್ತ ಪೂರೈಸುವಲ್ಲಿ ಸಾಕಷ್ಟು ಅಡಚಣೆಯಾಗುತ್ತಿತ್ತು. ಇದನ್ನು ಗಮನಿಸಿ ಇದೀಗ ರಕ್ತದೂತ ಸೇವೆ ಆರಂಭಿಸಿದೆ. ಇದು ಸ್ತುತ್ಯಾರ್ಹಕಾರ್ಯವಾಗಿದೆ ಎಂದರು.
ಈ ವೇಳೆ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್.ಎಸ್. ಸಂಗೊಳ್ಳಿ, ಉದ್ಯಮಿ ಮತ್ತು ರಕ್ತ ಕೇಂದ್ರ ಕಟ್ಟಡ ದಾನಿ ವೀರೇಂದ್ರ ಛೇಡಾ, ಉಪ ಮೇಯರ್ ಸಂತೋಷ್ ಚವ್ಹಾಣ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ಪ್ರಕಾಶ ಕ್ಯಾರಕಟ್ಟಿ, ಶರಣು ಅಂಗಡಿ, ರಕ್ತ ಕೇಂದ್ರದ ತಾಂತ್ರಿಕ ಮೇಲ್ವಿಚಾರಕ ನವೀನ ಚಿಕ್ಕಮಠ, ಶಿಬಿರ ಆಯೋಜಕ ಸಿದ್ದು ಅಂಗಡಿ, ರಕ್ತಕೇಂದ್ರದ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.ಇಲ್ಲಿಗೆ ಸಂಪರ್ಕಿಸಿ
ಆಸ್ಪತ್ರೆಯ ರೋಗಿಗಳಿಗೆ ರಕ್ತದ ಅವಶ್ಯಕತೆ ಕಂಡುಬಂದಲ್ಲಿ ರಕ್ತದೂತ 9353623822, ರಕ್ತಕೇಂದ್ರ 7019279109 ನಂ: 0836-2358838, 297052, ಬೀರಪ್ಪ ಕುರಿ 9740433384, ದತ್ತಮೂರ್ತಿ ಕುಲಕರ್ಣಿ 9448380485, 7019004295, ನವೀನ ಚಿಕ್ಕಮಠ 9513101679 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))