ಸರ್ಕಾರಿ ನೌಕರರ ಎದುರು ಸಾಕಷ್ಟು ಸವಾಲುಗಳಿವೆ: ಸಿ.ಎಸ್. ಷಡಾಕ್ಷರಿ

| Published : Nov 16 2025, 02:30 AM IST

ಸರ್ಕಾರಿ ನೌಕರರ ಎದುರು ಸಾಕಷ್ಟು ಸವಾಲುಗಳಿವೆ: ಸಿ.ಎಸ್. ಷಡಾಕ್ಷರಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದು ನಿಂತಿರುವುದರಿಂದ ಶೇ. ೪೦ರಷ್ಟು ಜನರಿಗೆ ಉದ್ಯೋಗದ ಕೊರತೆ ಉಂಟಾಗಿದೆ.

ತಾಲೂಕಾ ಶಾಖೆ ನೂತನ ಕಟ್ಟಡ ಉದ್ಘಾಟನೆ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಮುಂಡಗೋಡ

ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದು ನಿಂತಿರುವುದರಿಂದ ಶೇ. ೪೦ರಷ್ಟು ಜನರಿಗೆ ಉದ್ಯೋಗದ ಕೊರತೆ ಉಂಟಾಗಿದೆ. ಇದೆಲ್ಲದರ ನಡುವೆ ಸರ್ಕಾರಿ ನೌಕರರ ಎದುರು ಸಾಕಷ್ಟು ಸವಾಲುಗಳಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಶನಿವಾರ ಸಂಜೆ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ನಿರ್ಮಾಣ ಮಾಡಲಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಶಾಖೆ ನೂತನ ಕಟ್ಟಡ ಉದ್ಘಾಟನೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ ೨.೭೦ ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ಅದರ ಹೊರೆ ಇರುವ ನೌಕರರ ಮೇಲೆ ಬಿಳುತ್ತಿದ್ದು, ಕೆಲಸ ಮಾಡಲಾಗದ ಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವಲ್ಲಿ ಇಂದಿನ ಸರ್ಕಾರ ಮಾತ್ರವಲ್ಲದ್ದೇ ಹಿಂದಿನ ಸರ್ಕಾರಗಳು ಕೂಡ ಉದಾಸೀನ ಮನೋಭಾವ ತೋರುತ್ತ ಬಂದಿವೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಎಲ್ಲ ಕೆಲಸವನ್ನು ಯಂತ್ರಗಳು ಮಾಡಲಾಗುವುದಿಲ್ಲ. ಪ್ರತಿಯೊಂದಕ್ಕೂ ಮಾನವನ ಶ್ರಮ ಬೇಕೆ ಬೇಕು ಹಾಗಾಗಿ ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಯಾವ ಶಾಸಕರು, ಜನಪ್ರತಿನಿಧಿಗಳು ಹಾಗೂ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತವೆಯೋ ಅವರ ಜೊತೆಗೆ ನೌಕರರ ಸಂಘ ಪಕ್ಷಾತೀತವಾಗಿರುತ್ತದೆ ಎಂದು ಹೇಳಿದರು.

ಇಲ್ಲಿಯ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಕಾರ್ಯಾಂಗ ಮತ್ತು ಶಾಸಕಾಂಗ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರಿ ನೌಕರರು ಸಾಮಾನ್ಯ ಜನರೊಂದಿಗಿನ ಸಂಬಂಧ ಬಹುಮುಖ್ಯ. ಸರ್ಕಾರಿ ನೌಕರರು ಸರಕಾರದ ಒಂದು ಭಾಗವಾಗಿದ್ದು, ಸರ್ಕಾರಕ್ಕೆ ಗೌರವ ಸಿಗುವಂತೆ ಕೆಲಸ ಮಾಡಬೇಕು ಎಂದರು

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹಾಗೂ ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಕಾರ್ಯದರ್ಶಿ ಗಣೇಶ ಗಬ್ಬೂರ, ತಹಸೀಲ್ದಾರ ಶಂಕರ ಗೌಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ, ಸಂಜೀವಕುಮಾರ ನಾಯ್ಕ, ಕಿರಣ ನಾಯ್ಕ, ಎಸ್. ಬಸವರಾಜ, ಮಲ್ಲಿಕಾರ್ಜುನ ಬಳ್ಳಾರಿ, ದಯಾನಂದ ನಾಯ್ಕ, ಕೃಷ್ಣ ಹಿರೇಹಳ್ಳಿ, ಸೋಮಶೇಖರ, ರಾಘವೇಂದ್ರ ಗಿರಡ್ಡಿ ಮುಂತಾದವರಿದ್ದರು. ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸುಭಾಸ ಡೋರಿ ಸ್ವಾಗತಿಸಿದರು. ಕೆ.ಕೆ. ಕರುವಿನಕೊಪ್ಪ, ಬಸವರಾಜ ಬೆಂಡ್ಲಗಟ್ಟಿ, ಪೂಜಾರ ನಿರೂಪಿಸಿದರು. ಇದೇ ಸಂದರ್ಭ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.