ಶಿರಾದಲ್ಲಿ ಕ್ಷೀರ ಕ್ರಾಂತಿ: ಎಸ್‌ ಆರ್‌ ಗೌಡ

| Published : Jan 16 2025, 12:45 AM IST

ಸಾರಾಂಶ

ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ ಕೂಡ ಹಾಲು ಉತ್ಪಾದಕರ ಸಂಘ ಸ್ಥಾಪನೆ ಮಾಡಿ, ಕ್ಷೀರ ಕ್ರಾಂತಿ ಮಾಡಬೇಕೆಂಬ ನನ್ನ ಪರಿಕಲ್ಪನೆಗೆ ಹಾಲು ಉತ್ಪಾದಕ ಬಂಧುಗಳು ಶಕ್ತಿ ತುಂಬಿದ್ದೀರಿ ಹಾಲು ಉತ್ಪಾದಕರ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ತುಮಕೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಎಸ್. ಆರ್ .ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದಕ್ಕೆ ಭೇಟಿ ನೀಡಿ ಶ್ರೀ ನಂಜಾವಧೂತ ಸ್ವಾಮೀಜಿಗಳ ಆಶೀರ್ವಾದ ಪಡೆದು ಮಾತನಾಡಿದರು. ಹೈನುಗಾರಿಕೆ ಮತ್ತಷ್ಟು ಅಭಿವೃದ್ಧಿ ಕಾಣಬೇಕು, ಹಾಲು ಉತ್ಪಾದಕರು ಆರ್ಥಿಕ ಸಮೃದ್ಧಿ ಕಾಣಬೇಕು, ಹಾಲು ಉತ್ಪಾದಕರು ಆರ್ಥಿಕ ಸಮೃದ್ಧಿ ಕಾಣಬೇಕೆಂಬುದೇ ನನ್ನ ಧ್ಯೇಯೋದ್ದೇಶ ಎಂದರು.

ನೂತನ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡರಿಗೆ ಅಭಿನಂದಿಸಿ ಮಾತನಾಡಿದ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಗುಣಮಟ್ಟದ ಹಾಲು ಗ್ರಾಹಕರಿಗೆ ನೀಡುವ ಮೂಲಕ ಮಾದರಿಯಾಗಿರುವ ಕೆಎಂಎಫ್ , ಹಾಲು ಉತ್ಪಾದಕರಿಗೆ ಉತ್ತಮ ಪ್ರೋತ್ಸಾಹ ನೀಡುವ ಮೂಲಕ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಹೈನುಗಾರಿಕೆ ಬಡ ರೈತ ಕುಟುಂಬಗಳಿಗೆ ವರದಾನವಾಗಿದೆ. ಶಿರಾ ತಾಲೂಕಿನಲ್ಲಿ ಹಾಲು ಉತ್ಪಾದನೆ ಮತ್ತಷ್ಟು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬುಕ್ಕಾಪಟ್ಟಣ ಮುದ್ದುಗಣೇಶ್, ಡೈರಿ ರಂಗನಾಥ್, ಗುಣ್ಣಯ್ಯ, ನಾದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಮೆಹರ್ ತಾಜ್ ಬಾಬು, ಮೇಘಶ್ರೀ ನವೀನ್, ಹೆಂದೊರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀದೇವಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕುಮಾರ್, ಸಿದ್ದನಹಳ್ಳಿ ಮಂಜುನಾಥ್, ಅರುಣ್ ಗೌಡ, ಶಿವಣ್ಣ, ಗಿರೀಶ್, ಆದರ್ಶ, ಜಯಮ್ಮ ಸೇರಿದಂತೆ ಹಲವರು ಹಾಜರಿದ್ದರು.