ಸಾರಾಂಶ
ಮಸ್ಕಿ ತಾಲೂಕಿನ ಹೂವಿನಭಾವಿ, ಅಂಕುಶದೊಡ್ಡಿ ಮುಂತಾದ ಗ್ರಾಮಗಳಲ್ಲಿ ಶುಕ್ರವಾರ ಶಾಲಾ ಕೊಠಡಿ , ಸಿಸಿ ರಸ್ತೆ, ಬಿಸಿಯೂಟ ಕೊಠಡಿ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ
ಮಸ್ಕಿ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 12 ಗ್ರಾಮಗಳಲ್ಲಿ ಶಾಲಾ ಕಟ್ಟಡ ಹಾಗೂ ರಸ್ತೆ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ₹6 ಕೋಟಿ ವೆಚ್ಚದ ಕಾಮಗಾರಿಗಳಿಗೆ ಖಾದಿ ಗ್ರಾಮೋದ್ಯೋಗ ನಿಗಮದ ಮಂಡಳಿ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ತಾಲೂಕಿನ ಹೂವಿನಭಾವಿ, ಅಂಕುಶದೊಡ್ಡಿ ಮುಂತಾದ ಗ್ರಾಮಗಳಲ್ಲಿ ಶುಕ್ರವಾರ ಶಾಲಾ ಕೊಠಡಿ , ಸಿಸಿ ರಸ್ತೆ, ಬಿಸಿಯೂಟ ಕೊಠಡಿ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೂಲಕ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಹಣ ನೀಡುತ್ತಿದೆ. ಆ ಹಣ ಕ್ಷೇತ್ರದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ನಿರುಪಾದೆಪ್ಪ ವಕೀಲ, ಆದನಗೌಡ ದಳಪತಿ ಸಂತೆಕೆಲ್ಲೂರು ಸೇರಿದಂತೆ ವಿವಿಧ ಗ್ರಾಮಗಳು ಮುಖಂಡರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಂಜನಿಯರ್ ಗಳು ಭಾಗವಹಿಸಿದ್ದರು.