ಅರಸೀಕೆರೆ: ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಮದರ್ ಪ್ರಾಮಿಸ್ ಚಿತ್ರವು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ರತ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮದ ನಡುವೆ ಮೊದಲ ಪ್ರದರ್ಶನ ಆರಂಭವಾಯಿತು.
ಚಿತ್ರದ ಬಿಡುಗಡೆ ಅಂಗವಾಗಿ ವಿಶೇಷ ಪೂಜೆ ಹಾಗೂ ಶುಭಾಶಯ ಸಮಾರಂಭ ಆಯೋಜಿಸಲಾಗಿದ್ದು, ಡಾಲಿ ಧನಂಜಯ ಅವರ ಅಭಿಮಾನಿಗಳು ಹೂವಿನ ಮಳೆಗರೆದು, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಡಾಲಿ ಧನಂಜಯ ಅವರ ತಂದೆ ಅಡವಿಸ್ವಾಮಿ, ಕುಟುಂಬ ಸಮೇತ ಕುಳಿತು ನೋಡುವಂತಿರುವ, ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರವಾಗಿ ''''''''ಮದರ್ ಪ್ರಾಮಿಸ್'''''''' ಮೂಡಿಬಂದಿದ್ದು, ಎಲ್ಲ ವರ್ಗದ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ''''''''ಮದರ್ ಪ್ರಾಮಿಸ್'''''''' ಚಿತ್ರದಲ್ಲಿಯೂ ಭಾವನಾತ್ಮಕ ಕಥಾಹಂದರ ಹಾಗೂ ಉತ್ತಮ ಸಂದೇಶದ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಅಭಿಮಾನಿಗಳು ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ಮಾತನಾಡಿ, ಅರಸೀಕೆರೆ ತಾಲೂಕು ಕನ್ನಡ ಚಿತ್ರರಂಗಕ್ಕೆ ಜಗ್ಗೇಶ್, ಬಾಲಣ್ಣ, ಅಭಿಜಿತ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರನ್ನು ನೀಡಿದೆ. ಅದೇ ಸಾಲಿನಲ್ಲಿ ಡಾಲಿ ಧನಂಜಯ ಕೂಡ ತಮ್ಮ ಅದ್ಭುತ ಅಭಿನಯದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವುದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಚಿತ್ರವನ್ನು ಅರಸೀಕೆರೆಯವರೇ ಆದ ಶಿವಯ್ಯ ಅವರ ಪುತ್ರ ಹರ್ಷ ನಿರ್ಮಿಸಿರುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ. ಚಿತ್ರವು ವಾಣಿಜ್ಯ ಯಶಸ್ಸಿನ ಜೊತೆಗೆ ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಲಿ ಎಂದು ಅವರು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಕಾಟಿಕೆರೆ ಉಮೇಶ್, ನಿರ್ಮಾಪಕ ಹರ್ಷ, ತಾಪಂ ಮಾಜಿ ಸದಸ್ಯ ಕಾಂತರಾಜು, ತೋಂಟಾರಾಧ್ಯ, ಡಾಲಿ ಧನಂಜಯ ಬ್ರಿಗೇಡ್‌ನ ಹಿತೇಂದ್ರ, ಸ್ವಾಮಿ, ತೇಜಸ್, ಸಿದ್ದೇಶ್, ಪೃಥ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅರಸೀಕೆರೆಯಲ್ಲಿ ಮದರ್ ಪ್ರಾಮಿಸ್ ಸಿನಿಮಾ ಅದ್ಧೂರಿ ಪ್ರದರ್ಶನ
ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರವಾಗಿ ''ಮದರ್ ಪ್ರಾಮಿಸ್'' ಮೂಡಿಬಂದಿದ್ದು, ಎಲ್ಲ ವರ್ಗದ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ''ಮದರ್ ಪ್ರಾಮಿಸ್'' ಚಿತ್ರದಲ್ಲಿಯೂ ಭಾವನಾತ್ಮಕ ಕಥಾಹಂದರ ಹಾಗೂ ಉತ್ತಮ ಸಂದೇಶದ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಅಭಿಮಾನಿಗಳು ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.