ರಾಮನಗರ: ಶ್ರೀಗಂಧ ಬೆಳೆಗಾರರ ಹಿತದೃಷ್ಟಿಯಿಂದ ಪ್ರತ್ಯೇಕ "ಶ್ರೀಗಂಧ ಮಂಡಳಿ " ಸ್ಥಾಪನೆ ಮಾಡುವಂತೆ ಸಂಸತ್ ನಲ್ಲಿ ಒತ್ತಾಯಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ಸಂಸತ್‌ನಲ್ಲಿ ಒತ್ತಾಯಿಸಿ ಶ್ರೀಗಂಧ ಬೆಳೆಗಾರರ ಪರವಾಗಿ ಧ್ವನಿ ಎತ್ತಿದರು.
ರಾಮನಗರ: ಶ್ರೀಗಂಧ ಬೆಳೆಗಾರರ ಹಿತದೃಷ್ಟಿಯಿಂದ ಪ್ರತ್ಯೇಕ "ಶ್ರೀಗಂಧ ಮಂಡಳಿ " ಸ್ಥಾಪನೆ ಮಾಡುವಂತೆ ಸಂಸತ್ ನಲ್ಲಿ ಒತ್ತಾಯಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ಸಂಸತ್‌ನಲ್ಲಿ ಒತ್ತಾಯಿಸಿ ಶ್ರೀಗಂಧ ಬೆಳೆಗಾರರ ಪರವಾಗಿ ಧ್ವನಿ ಎತ್ತಿದರು.
ಕರ್ನಾಟಕವು "ಶ್ರೀಗಂಧದ ನಾಡು " ಎಂದೇ ಪ್ರಸಿದ್ದಿ ಪಡೆದಿದೆ. ಭಾರತದಲ್ಲಿ ಉತ್ಪಾದನೆಯಾಗುವ ಶ್ರೀಗಂಧದ ಪೈಕಿ ಸುಮಾರು 65 ಶೇಕಡಾ ಉತ್ಪಾದನೆ ಕರ್ನಾಟಕದಿಂದಲೇ ಬರುತ್ತಿರುವುದು ನಮ್ಮ ರಾಜ್ಯದ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ ಎಂದು ಹೇಳಿದರು.ಪ್ರಸ್ತುತ ಶ್ರೀಗಂಧ ಬೆಳೆ ನಿರ್ವಹಣೆ, ಕಠಾವು ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯವೂ ತನ್ನದೇ ಆದ ನೀತಿ-ನಿಯಮಗಳನ್ನು ಹೊಂದಿರುವುದರಿಂದ, ಶ್ರೀಗಂಧ ಬೆಳೆಯುವ ರೈತರು ಅರಣ್ಯ ಇಲಾಖೆ ಹಾಗೂ ಗೃಹ ಇಲಾಖೆಯಿಂದ ಅನಗತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ, NITI ಆಯೋಗದ ಶಿಫಾರಸ್ಸಿನಂತೆ ಕಾಫಿ ಮಂಡಳಿ ಮಾದರಿಯಲ್ಲಿ ರಾಷ್ಟ್ರ ಮಟ್ಟದ "ಶ್ರೀಗಂಧ ಮಂಡಳಿ " (Sandalwood Board) ಸ್ಥಾಪಿಸುವುದು ಅನಿವಾರ್ಯ ಎಂದು ಸದನಕ್ಕೆ ಮನವರಿಕೆ ಮಾಡಿಕೊಟ್ಟರು.
ಶ್ರೀಗಂಧ ಮಂಡಳಿ ಸ್ಥಾಪನೆಯಿಂದಾಗಿ ಶ್ರೀಗಂಧ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ಏಕರೂಪದ ನಿಯಮಗಳು ಜಾರಿಗೆ ಬರಲಿದ್ದು, ಇದರಿಂದ ರೈತರಿಗೆ ಶ್ರೀಗಂಧ ಬೆಳೆಸಲು ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಅಲ್ಲದೇ, ತಮ್ಮ ಉತ್ಪನ್ನವನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಾರಾಟ ಮಾಡುವ ಅವಕಾಶ, ಕಟ್ಟುನಿಟ್ಟಿನ ಕಳ್ಳತನ ತಡೆ ಕ್ರಮಗಳು, ಸಂಸ್ಥಾತ್ಮಕ ಸಾಲ ಸೌಲಭ್ಯ ಶ್ರೀಗಂಧ ರಫ್ತು, ಆಮದು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಸೇರಿದಂತೆ ಅನೇಕ ಸೌಲಭ್ಯಗಳು ರೈತರಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು.ಶ್ರೀಗಂಧ ಮಂಡಳಿ ಸ್ಥಾಪನೆಯಿಂದ ಶ್ರೀಗಂಧ ಬೆಳೆಗಾರರಿಗೆ ಮಹತ್ತರ ಅನುಕೂಲವಾಗಲಿದ್ದು, ಅವರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ ಸರ್ಕಾರದ ಗಮನ ಸೆಳೆದರು.
16ಕೆಆರ್ ಎಂಎನ್ 1.ಜೆಪಿಜಿಸಂಸತ್ತಿನಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿದರು.