ಚಿರತೆ ಹಾವಳಿಗೆ ಮುಧೋಳ ನಾಯಿ ಬಲಿ

| Published : May 02 2025, 11:45 PM IST

ಸಾರಾಂಶ

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸುಮಾರು ಕೇವಲ ೧೦೦ ಅಡಿಯ ದೂರದ ಕೃಷ್ಣಮೂರ್ತಿ ಅವರ ಮನೆಯಲ್ಲಿ ಮಧ್ಯರಾತ್ರಿ ೧-೨೫ಕ್ಕೆ ಈ ಘಟನೆ ನಡೆದಿದೆ. ಎಂದಿನಂತೆ ಮುಂಜಾನೆ ಬಾಗಿಲು ತೆಗೆದು ಮನೆಯಿಂದ ಹೊರಗಡೆ ಬಂದ ಕೃಷ್ಣಮೂರ್ತಿಯರು ನೋಡಿದಾಗ ನಾಯಿ ಇಲ್ಲದೆ ರಕ್ತ ಚೆಲ್ಲಿದ್ದು ಕಂಡು ಗಾಬರಿಯಿಂದ ಸಿಸಿಟಿವಿ ಪರೀಕ್ಷೆ ನಡೆಸಿದಾಗ ಚಿರತೆಯೊಂದು ನಾಯಿಯನ್ನು ಎಳೆದೊಯ್ದಿರುವುದು ಗೊತ್ತಾಗಿದೆ. ತದನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಕೂಡ ಸ್ಥಳಕ್ಕೆ ಬಾರದೆ ಅಲ್ಲಿ ಬೋನ್ ಕೂಡ ಇಟ್ಟಿಲ್ಲ. ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದು ಕುಟುಂಬದವರು ಭಯಭೀತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಮಾದೀಹಳ್ಳಿ ಹೋಬಳಿಯ ಹಗರೆ ಗ್ರಾಮದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಮುಧೋಳ ನಾಯಿಯ ಬಾಯಿಗೆ ಕಚ್ಚಿ ಎಳೆದೊಯ್ದಿರುವ ಘಟನೆ ನಡೆದಿದೆ.

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸುಮಾರು ಕೇವಲ ೧೦೦ ಅಡಿಯ ದೂರದ ಕೃಷ್ಣಮೂರ್ತಿ ಅವರ ಮನೆಯಲ್ಲಿ ಮಧ್ಯರಾತ್ರಿ ೧-೨೫ಕ್ಕೆ ಈ ಘಟನೆ ನಡೆದಿದೆ. ಎಂದಿನಂತೆ ಮುಂಜಾನೆ ಬಾಗಿಲು ತೆಗೆದು ಮನೆಯಿಂದ ಹೊರಗಡೆ ಬಂದ ಕೃಷ್ಣಮೂರ್ತಿಯರು ನೋಡಿದಾಗ ನಾಯಿ ಇಲ್ಲದೆ ರಕ್ತ ಚೆಲ್ಲಿದ್ದು ಕಂಡು ಗಾಬರಿಯಿಂದ ಸಿಸಿಟಿವಿ ಪರೀಕ್ಷೆ ನಡೆಸಿದಾಗ ಚಿರತೆಯೊಂದು ನಾಯಿಯನ್ನು ಎಳೆದೊಯ್ದಿರುವುದು ಗೊತ್ತಾಗಿದೆ. ತದನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಕೂಡ ಸ್ಥಳಕ್ಕೆ ಬಾರದೆ ಅಲ್ಲಿ ಬೋನ್ ಕೂಡ ಇಟ್ಟಿಲ್ಲ. ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದು ಕುಟುಂಬದವರು ಭಯಭೀತರಾಗಿದ್ದಾರೆ.

ಮನೆ ಮಾಲೀಕ ಕೃಷ್ಣಮೂರ್ತಿ ಮಾತನಾಡಿ, ನಾವು ಮನೆಯಲ್ಲಿ ಮುಧೋಳ ನಾಯಿ ಸಾಕಿದ್ದೆವು. ಇಲ್ಲಿಂದ ಸುಮಾರು ೧೦೦ ಅಡಿ ದೂರದಲ್ಲಿ ಹಗರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ಇಲ್ಲಿ ಸುತ್ತಮುತ್ತಲು ಫಾರೆಸ್ಟ್ ಇರುವುದರಿಂದ ಕಾಡು ಪ್ರಾಣಿಗಳಿಗೆ ಅಲೆದಾಡಲು ಸುಲಭವಾಗಿದೆ. ಅಲ್ಲದೆ ಆಸ್ಪತ್ರೆ ಕೂಡ ಇಲ್ಲೇ ಇದೆ, ರಾತ್ರಿ ವೇಳೆ ತಿರುಗಾಡುವವರು ಜೀವ ಭಯದಲ್ಲೇ ಆಚೆ ಹೋಗಬೇಕಾಗಿದೆ.ಇದನ್ನು ಮನಗಂಡು ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಚಿರತೆಯನ್ನು ಹಿಡಿಯುವ ಕೆಲಸ ಮಾಡಬೇಕು ಎಂದು ಜನರು ಆಗ್ರಹಿಸಿದರು.