ಸಾರಾಂಶ
ಕೊಪ್ಪಳ:
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆ 30ನೇ ಸ್ಥಾನ ಪಡೆಯುವ ಮೂಲಕ ಕಳೆದ ವರ್ಷಕ್ಕಿಂತ (32) ಎರಡು ಸ್ಥಾನ ಮೇಲೇರಿದೆ. ಉತ್ತಮ ಫಲಿತಾಂಶ ಬರಲಿದೆ ಎಂಬ ಭರವಸೆ ಹುಸಿಯಾಗಿದೆ. ಪರೀಕ್ಷೆಗೆ ಹಾಜರಾದ 21,610ರಲ್ಲಿ 12386 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 57.32 ಫಲಿತಾಂಶ ಬಂದಿದೆ. 9224 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.2023ರಲ್ಲಿ 16ನೇ ಸ್ಥಾನದಲ್ಲಿದ್ದ ಜಿಲ್ಲೆ, 2024ರಲ್ಲಿ 32ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರೀ ಫಲಿತಾಂಶವನ್ನು ಟಾಪ್ ಟೆನ್ ಒಳಗೆ ತರಬೇಕೆಂದು ಶಿಕ್ಷಣ ಇಲಾಖೆ ಪಣ ತೊಟ್ಟಿತ್ತು, ಆದರೆ, ಫಲಿತಾಂಶದಲ್ಲಿ ಎರಡು ಸ್ಥಾನ ಮಾತ್ರ ಹೆಚ್ಚಳವಾಗಿದೆ. ಜಿಲ್ಲೆಯ ೭೩ ಪರೀಕ್ಷಾ ಕೇಂದ್ರಗಳಲ್ಲಿ ಮಾ. ೨೧ರಿಂದ ಏಪ್ರಿಲ್ 4ರ ವರೆಗೆ ಪರೀಕ್ಷೆ ನಡೆದಿದ್ದವು.ಪರೀಕ್ಷೆ ಬರೆದ ೧೧,೪೮೩ ವಿದ್ಯಾರ್ಥಿನಿಯರ ಪೈಕಿ ೭೩೬೨ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು ಶೇ. ೬೪.೨೧ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ೧೦೪೧೩ ಬಾಲಕರ ಪೈಕಿ ೫೦೨೫ ಬಾಲಕರಷ್ಟೆ ಪಾಸಾಗಿದ್ದಾರೆ. ಈ ಮೂಲಕ ಶೇ. ೪೮.೨೬ ಫಲಿತಾಂಶ ಆಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಸರಕಾರಿ ಶಾಲೆಗಳಿಂದ ಹಾಜರಾದ ೧೫೭೯೦ರ ಪೈಕಿ ೮೭೮೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. ೫೫.೬೬ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳ ಪೈಕಿ ೨೬೫೦ರಲ್ಲಿ ೧೨೫೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. ೪೭.೪೭ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳಿಂದ ಪರೀಕ್ಷೆಗೆ ಕುಳಿತಿದ್ದ ೩೪೫೬ರ ಪೈಕಿ ೨೩೪೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೬೭.೭೧ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದ ವ್ಯಾಪ್ತಿಯ ೪೬೪೦ರ ಪೈಕಿ ೨೫೨೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ, ಪರೀಕ್ಷೆ ಬರೆದ ೧೭೨೫೬ ಗ್ರಾಮೀಣ ವಿದ್ಯಾರ್ಥಿಗಳ ಪೈಕಿ ೯೮೬೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಳೆದ ಬಾರಿ ಪರೀಕ್ಷೆ ಬರೆದಿದ್ದ ಪ್ರತಿ ವಿದ್ಯಾರ್ಥಿಗೆ ೨೦ ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಆದರೆ, ಈ ಬಾರಿ ನೀಡಿಲ್ಲ. ಶೇ. ೬೦.೮೭ ಫಲಿತಾಂಶ ಪಡೆಯುವ ಮೂಲಕ ಯಲಬುರ್ಗಾ ತಾಲೂಕು ಜಿಲ್ಲೆಗೆ ಮೊದಲ ಸ್ಥಾನ, ಗಂಗಾವತಿ ಶೇ. ೫೭.೮೪, ಕೊಪ್ಪಳ ಶೇ. ೫೨, ಕುಷ್ಟಗಿ ಶೇ. ೫೬.೩೨ರಷ್ಟು ಫಲಿತಾಂಶ ಪಡೆದುಕೊಂಡಿದೆ.ಫಲ ನೀಡದ ಪ್ರಯತ್ನ:ಈ ಬಾರಿ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇ. ೨ರಷ್ಟು ಮಾತ್ರ ಫಲಿತಾಂಶ ಸುಧಾರಣೆ ಕಂಡಿದೆ. ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಶಾಲೆಯ ಶಿಕ್ಷಕರು ನಡೆಸಿದ ಪ್ರಯತ್ನಗಳು ಟಾಪ್ ಟೆನ್ ಒಳಗೆ ಬರುವ ನಿರೀಕ್ಷೆಯನ್ನು ಹುಸಿಗೊಳಿಸಿವೆ.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಸುಧಾರಣೆ ಕಂಡು ಬಂದಿದೆ. ಈ ಬಾರಿ ಗ್ರೇಸ್ ಮಾರ್ಕ್ಸ್ ನೀಡಿಲ್ಲ. ಆದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಉತ್ತೀರ್ಣರಾಗುವಂತೆ ಮಾಡಿದ್ದೇವೆ.ಶ್ರೀಶೈಲ ಬಿರಾದಾರ, ಡಿಡಿಪಿಐ, ಕೊಪ್ಪಳ