ಮೂಲ್ಕಿ: ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 8ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ತೋರಣ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತ ನಡೆಯಿತು.
ಬುಧವಾರ ಬೆಳಗ್ಗೆ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ದೆ ಗುಡ್ಡೆ ಹಾಗೂ ಶ್ರೀಪತಿ ಭಟ್, ವಿದ್ವಾನ್ ವೆಂಕಟೇಶ ತಂತ್ರಿ ಎಡಪದವು ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಪ್ರಾರ್ಥನೆ, ಋತ್ವಿಜರ ಸ್ವಾಗತ, ಮಹಾ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ, ನಾಂದಿ, ಆರಣಿ ಮಂಥನ, ದ್ವಾದಶ ನಾರಿಕೇಳ ಗಣಯಾಗ, ತೋರಣ ಮುಹೂರ್ತ ನಡೆಯಿತು.ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ನೆರವೇರಿಸಿ ಆಶೀರ್ವಚನ ನೀಡಿದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಅರ್ಚಕ ವಾಸುದೇವ ಭಟ್, ಸಸಿಹಿತ್ತು ಕದಿಕೆ ಮೊಗವೀರ ಸಭಾದ ಅಧ್ಯಕ್ಷ ಗಿರೀಶ್ ಶ್ರಿಯಾನ್, ಲೀಲಾಧರ ಬಂಗೇರ ಸಸಿಹಿತ್ತು ಪಟೇಲರ ಮನೆ, ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕ ಶ್ರೀಕಾಂತ್ ರಾವ್, ಮೋಹನ್ ಶೆಟ್ಟಿಗಾರ್ ಸಸಿಹಿತ್ಲು, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಆಡಳಿತ ಮೊಕೇಸರ ಚಂದ್ರಶೇಖರ್ ಬೆಲ್ವಡ, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್ ಶ್ರಿಯಾನ್, ಪಾಕ ಶಾಸ್ತ್ರಜ್ಞ ವೆಂಕಟೇಶ್ ಭಟ್ ಪಾವಂಜೆ ಸಮಿತಿ ಪದಾಧಿಕಾರಿಗಳಾದ ಕಸ್ತೂರಿ ಪಂಜ, ಈಶ್ವರ ಕಟೀಲ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ರಮೇಶ್ ಬಂಗೇರ, ಸುರೇಶ್ ಬಂಗೇರ, ದಿವಾಕರ ಸಾಮಾನಿ, ಸುನಿಲ್ ಆಳ್ವ, ಗುರುರಾಜ್ ಮಲ್ಲಿಗೆಯಂಗಡಿ, ಉಮೇಶ್ ಪಂಜ, ಕಿರಣ್ ಗುರಿಕಾರ, ದಯಾನಂದ ಮಾಡ ಎಕ್ಕಾರು, ದೊಡ್ಡಯ್ಯ ಮೂಲ್ಯ ಕಟೀಲು ಉಪಸ್ಥಿತರಿದ್ದರು.ಹೊರೆಕಾಣಿಕೆ: ಹೊರೆ ಕಾಣಿಕೆ ಭವ್ಯ ಶೋಭಾ ಯಾತ್ರೆಯು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನದಿಂದ ಹೊರಟು ಮುಕ್ಕ ಮೂಲಕ ಶ್ರೀ ಸಸಿಹಿತ್ಲು ಭಗವತೀ ಕ್ಷೇತ್ರಕ್ಕೆ ಆಗಮಿಸಿತು. ಪಾವಂಜೆಯಲ್ಲಿ ಶೋಭಾ ಯಾತ್ರೆಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರದ ಯಾಜೀ ನಿರಂಜನ್ ಭಟ್ ಚಾಲನೆ ನೀಡಿದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ, ಮುಕ್ಕ ಶ್ರೀ ಸತ್ಯ ಧರ್ಮ ದೇವಿ ದೇವಸ್ಥಾನದ ಗಣೇಶ್ ಐತಾಳ್, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಎಸ್.ಜಿ. ಮಯ್ಯ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಬಿಜೆಪಿ ನಾಯಕರಾದ ಸುದರ್ಶನ್ ಮೂಡುಬಿದಿರೆ, ಭುವನಾಭಿರಾಮ ಉಡುಪ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್ ಶ್ರಿಯಾನ್, ದೇವಳದ ಮೊಕ್ತೇಸರ ಚಂದ್ರಶೇಖರ ಬೆಲ್ಚಡ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ರಮೇಶ್ ಬಂಗೇರ, ಚಂದ್ರಶೇಖರ ನಾಣಿಲ್, ಜಯಕೃಷ್ಣ ಕೋಟ್ಯಾನ್, ಉಮೇಶ್ ಪಂಜ, ದಿವಾಕರ ಸಾಮಾನಿ, ಅಭಿಲಾಶ್ ಶೆಟ್ಟಿ ಕಟೀಲು, ವಿನೋದ್ ಸಾಲ್ಯಾನ್ ಬೆಳ್ಳಾಯರು, ರಾಜೇಶ್ ಕೆರೆ ಕಾಡು, ಲಕ್ಷ್ಮಣ ಸಾಲ್ಯಾನ್ ಪುನರೂರು, ಶೋಭೆಂದ್ರ ಸಸಿಹಿತ್ಲು, ಕಿರಣ್ ಗುರಿಕಾರ, ಗಣೇಶ್ ಕದಿಕೆ ಭಂಡಾರ ಮನೆ, ಸುಶೀಲ್ ಬಂಗೇರ ಮುಲ್ಕಿ, ವಿನೋದ್ ಬೊಳ್ಳೂರು, ರಾಜೇಂದ್ರ ಪ್ರಸಾದ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಬಳಿಕ ವಿವಿಧ ಬಿರುದಾವಳಿಗಳೊಂದಿಗೆ ಬೃಹತ್ ಹೊರೆ ಕಾಣಿಕೆ ಮೆರವಣಿಗೆ ದೇವಳಕ್ಕೆ ಆಗಮಿಸಿತು.