ಹುಬ್ಬಳ್ಳಿ-ಬಾಗಲಕೋಟೆ ಮಾರ್ಗವಾಗಿ ಮುಂಬಯಿ ರೈಲು ಪ್ರಾರಂಭಿಸಿ

| Published : Nov 04 2025, 04:15 AM IST

ಹುಬ್ಬಳ್ಳಿ-ಬಾಗಲಕೋಟೆ ಮಾರ್ಗವಾಗಿ ಮುಂಬಯಿ ರೈಲು ಪ್ರಾರಂಭಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ, ಬಾಗಲಕೋಟೆ ಮಾರ್ಗದಿಂದ ಸಾಗುವುದರಿಂದ ಕರ್ನಾಟಕದ ಆರು ಜಿಲ್ಲೆಗಳಿಗೆ ಸಂಪರ್ಕ ಸಿಗುವುದು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶೀಘ್ರದಲ್ಲಿ ಪ್ರಾರಂಭವಾಗುವ ಬೆಂಗಳೂರು ಮುಂಬಯಿ ಸೂಪರ್ ಫಾಸ್ಟ್ ಹೊಸ ರೈಲು ಹುಬ್ಬಳ್ಳಿಯಿಂದ ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಸೊಲ್ಲಾಪುರ ಮಾರ್ಗವಾಗಿ ಪ್ರಾರಂಭಿಸಲು ಪ್ರಯತ್ನಿಸಬೇಕು ಎಂದು ರೈಲ್ವೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದಿನ್ ಖಾಜಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರನ್ನು ಒತ್ತಾಯಸಿದರು.

ಸಂಸದರ ಬಾಗಲಕೋಟ ಕಚೇರಿಯಲ್ಲಿ ಭೇಟಿಯಾದ ಖಾಜಿ, ಗದಗ, ಬಾಗಲಕೋಟೆ ಮಾರ್ಗದಿಂದ ಸಾಗುವುದರಿಂದ ಕರ್ನಾಟಕದ ಆರು ಜಿಲ್ಲೆಗಳಿಗೆ ಸಂಪರ್ಕ ಸಿಗುವುದು ಮತ್ತು ಎರಡು ರಾಜಧಾನಿಗಳ ಸಂಪರ್ಕದಿಂದ ವ್ಯಾಪಾರಕ್ಕೆ ಉತ್ತೇಜನ ನೀಡಿದಂತಾಗುವುದು. ಇದರಲ್ಲಿ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಗದಗ, ಹಾವೇರಿ ಸಂಸದರನ್ನು ಸೇರಿಸಿಕೊಂಡು ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಪ್ರಾರಂಭ ಮಾಡಬೇಕಾಗುತ್ತೆ ಎಂದು ತಿಳಿಸಿದರು. ಅದರಂತೆ ಬಿಜಾಪುರ ತಿರುಪತಿ, ಬಿಜಾಪುರ ಗುಂಠಕಲ, ಬಳ್ಳಾರಿ ಮುಂಬಯಿ ಹೊಸ ರೈಲುಗಳು ಸಾಪ್ತಹಿಕವಿದ್ದ ಶಿರಡಿ ರೈಲು ದಿನನಿತ್ಯ ಪ್ರಾರಂಭಿಸಲು ರೈಲ್ವೆ ಮಂತ್ರಿಗಳ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು. ಈ ವೇಳೆ ಜಯಂತ ಕುರಂದವಾಡ ಹಾಗೂ ಗಿರೀಶ ಬಾಂಡಗೆ, ಮೈನುದ್ದೀನ ಖಾಜಿ ಇದ್ದರು.