ಸಾರಾಂಶ
ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಗಲಾಟೆಯಾದ ಬೆನ್ನಲ್ಲೇ ಸೌಹಾರ್ದತೆಯ ವಿಡಿಯೋ ವೈರಲ್ ಆಗಿದ್ದು, ಕೊಪ್ಪ ಗ್ರಾಮದಲ್ಲಿ ಹಿಂದೂಗಳೊಂದಿಗೆ ಸೇರಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದ ಮುಸ್ಲಿಮರು ಗಣೇಶೋತ್ಸವದಲ್ಲಿ ಭಾಗಿಯಾಗಿ ಜನರಿಗೆ ಸಿಹಿ ಹಂಚಿ ಸಂಭ್ರಮ ಪಟ್ಟರು.
ಮದ್ದೂರು: ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿ ಒಂದೆಡೆ ಕೋಮು ಸಂಘರ್ಷಕ್ಕೆ ಕಾರಣರಾದರೆ, ಮತ್ತೊಂದೆಡೆ ತಾಲೂಕಿನ ಕೊಪ್ಪದಲ್ಲಿ ಮುಸಲ್ಮಾನರು ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಂಡು ಸೌಹಾರ್ದತೆಗೆ ಸಾಕ್ಷಿಯಾದರು. ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಗಲಾಟೆಯಾದ ಬೆನ್ನಲ್ಲೇ ಸೌಹಾರ್ದತೆಯ ವಿಡಿಯೋ ವೈರಲ್ ಆಗಿದ್ದು, ಕೊಪ್ಪ ಗ್ರಾಮದಲ್ಲಿ ಹಿಂದೂಗಳೊಂದಿಗೆ ಸೇರಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದ ಮುಸ್ಲಿಮರು ಗಣೇಶೋತ್ಸವದಲ್ಲಿ ಭಾಗಿಯಾಗಿ ಜನರಿಗೆ ಸಿಹಿ ಹಂಚಿ ಸಂಭ್ರಮ ಪಟ್ಟರು. ಯಾರೇ ಎಷ್ಟೇ ದ್ವೇಷ ಬಿತ್ತಿದರೂ ಹಿಂದೂ- ಮುಸ್ಲಿಂ ಭಾವೈಕ್ಯತೆ ಕಡಿಮೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಕೊಪ್ಪದಲ್ಲಿ ಹಿಂದೂ ಮುಸ್ಲಿಮರು ಸೇರಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದು ಉದಾಹಾರಣೆಯಾಗಿ ವಿಡಿಯೋ ವೈರಲ್ ಆಗಿರುವುದು ಸಾಕ್ಷಿಯಾಗಿದೆ.