ಸಾರಾಂಶ
ಸೂಲಿಬೆಲೆ: ಸಮಾಜಕ್ಕೆ ಸತ್ಪ್ರಜೆಗಳನ್ನು ತಯಾರುಗೊಳಿಸುವ ಕೆಲಸ ಶಿಕ್ಷಕರದ್ದು ಎಂದು ನ್ಯೂ ಆಕ್ಸ್‌ಫರ್ಡ್ ಶಾಲೆಯ ಅಧ್ಯಕ್ಷೆ ಸುಮಲತಾ ನಾಗೇಶ್ ಹೇಳಿದರು.
ಸೂಲಿಬೆಲೆ: ಸಮಾಜಕ್ಕೆ ಸತ್ಪ್ರಜೆಗಳನ್ನು ತಯಾರುಗೊಳಿಸುವ ಕೆಲಸ ಶಿಕ್ಷಕರದ್ದು ಎಂದು ನ್ಯೂ ಆಕ್ಸ್‌ಫರ್ಡ್ ಶಾಲೆಯ ಅಧ್ಯಕ್ಷೆ ಸುಮಲತಾ ನಾಗೇಶ್ ಹೇಳಿದರು. ಸೂಲಿಬೆಲೆಯ ನ್ಯೂ ಆಕ್ಸ್‌ಫರ್ಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ ಸಂಸ್ಕಾರ ಕಲಿಸುವುದು ಮುಖ್ಯ. ಗುರುಹಿರಿಯರನ್ನು ಗೌರವದಿಂದ ಕಾಣುವಂತೆ ತಿಳಿಸಿಕೊಡಬೇಕು ಎಂದರು. ಮಂಜುನಾಥ ಏಜುಕೇಷನ್ ಟ್ರಸ್ಟಿನ ಜಿ.ಎಂ.ನಾಗೇಶ್ ಮಾತನಾಡಿ, ಇಂದು ಗುರುಗಳಿಗೆ ಸಮಾಜದಲ್ಲಿ ಗೌರವ ಸ್ಥಾನವಿದೆ ಇದನ್ನು ವಿದ್ಯಾರ್ಥಿಗಳು ಮುಂದುವರೆಸಿಕೊಂಡು ಸಾಗಬೇಕು ಎಂದರು. ಇದೇ ವೇಳೆ ಶಾಲಾ ಶಿಕ್ಷಕ ವೃಂದಕ್ಕೆ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸತ್ಕರಿಸಲಾಯಿತು. ಮುಖ್ಯಶಿಕ್ಷಕಿ ರಾಧ, ಸಹ ಶಿಕ್ಷಕಿಯರು ಹಾಜರಿದ್ದರು.