ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ ಕ್ರೀಡೋತ್ಸವ 25ರಂದು

| Published : Feb 23 2024, 01:46 AM IST

ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ ಕ್ರೀಡೋತ್ಸವ 25ರಂದು
Share this Article
  • FB
  • TW
  • Linkdin
  • Email

ಸಾರಾಂಶ

24ನೇ ವರ್ಷದ ಕ್ರೀಡೋತ್ಸವ 25ರಂದು ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿ, ಸ್ಥಳೀಯ ಪರುಷರಿಗೆ ಕಬಡ್ಡಿ ಪಂದ್ಯಾಟ, ಸ್ಥಳೀಯ ಮಹಿಳೆಯರಿಗೆ ಥ್ರೋಬಾಲ್ ಹಾಗೂ ಮಕ್ಕಳಿಗೆ ವಿವಿಧ ಗ್ರಾಮೀಣ ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ 24ನೇ ವರ್ಷದ ಕ್ರೀಡೋತ್ಸವ 25ರಂದು ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿ, ಸ್ಥಳೀಯ ಪರುಷರಿಗೆ ಕಬಡ್ಡಿ ಪಂದ್ಯಾಟ, ಸ್ಥಳೀಯ ಮಹಿಳೆಯರಿಗೆ ಥ್ರೋಬಾಲ್ ಹಾಗೂ ಮಕ್ಕಳಿಗೆ ವಿವಿಧ ಗ್ರಾಮೀಣ ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳ ಆಯೋಜಿಸಲಾಗಿದೆ ಎಂದು ಫ್ರೆಂಡ್ಸ್ ಯೂತ್ ಕ್ಲಬ್‌ನ ಅಧ್ಯಕ್ಷ ಬಿ.ಎ.ವಸಂತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

25ರಂದು ಬೆಳಗ್ಗೆ 10ಕ್ಕೆ ರಸ್ತೆ ಓಟ ಉದ್ಘಾಟನೆಯನ್ನುಉದ್ಯಮಿ ಪಿ.ಸಿ.ಮೋಹನ್, ಡಯಾನ, ಕಲ್ಲೂರು ಕಾಫಿ ಬೆಳೆಗಾರ ಎಂ.ಕೆ.ಸುನೀತ್, ನಾಕೂರು ಶಿರಂಗಾಲ ಕಾಫಿ ಬೆಳೆಗಾರ ಕೆ.ಎಸ್.ಅಭಿಷೇಕ್, ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆಯನ್ನು ಪೂರ್ವಾಹ್ನ 11ಕ್ಕೆ ಉದ್ಯಮಿ ಕೆ.ಎನ್.ಲೋಕೇಶ್, ಬೆಂಗಳೂರಿನ ಟಾರ್ಗೆಟ್ ಟೆನ್ನಿಸ್ ಆಕಾಡೆಮಿ ಕೆಂಪ್ಸ್ಕುಮಾರ್, ಸುಂಟಿಕೊಪ್ಪ ಉದ್ಯಮಿ ಅನೂಪ್ ಶೆಟ್ಟಿ, ಕೊಡಗರಳ್ಳಿ ಕಾಫಿಬೆಳೆಗಾರ ರಫೀಕ್, ನಾಕೂರು ಕಾಫಿ ಬೆಳೆಗಾರ ಎಲ್.ಎಂ.ಮಂಜುನಾಥ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಬಿಜು, ಕುಶಾಲನಗರ ಉದ್ಯಮಿ ಜಾಫರ್ ಸಾಧಿಕ್, ನಾಕೂರು ಶಿರಂಗಾಲ ಟ್ಯಾಕ್ಸಿ ಮಾಲೀಕ ಬಿ.ಎಸ್.ಮಣಿ ನೆರವೇರಿಸುವರು.

ವಾಲಿಬಾಲ್ ಪ್ರಥಮ ಸೆಮಿಫೈನಲ್ಸ್ ಪಂದ್ಯಾವಳಿಯ ಉದ್ಘಾಟನೆಯನ್ನು ಸಂಜೆ 3ಕ್ಕೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೋತಿನ, ಬೆಂಗಳೂರು ಟಿ.ಎ.ಎಫ್.ಎಲ್.ಆಂಡ್ ಪಿ.ಟಿ.ಸಿ.ಎ,ಜರ್ಮನಿ ಟೆನ್ನಿಸ್ ಅಕಾಡೆಮಿ ಬಿ.ಎಸ್.ಚಂದ್ರಶೇಖರ್, ನಾಕೂರು ಕಾಫಿ ಬೆಳೆಗಾರ ವಿ.ಕೆ.ವಿಜಯಕುಮಾರ್, ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಅತ್ತೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜರ್ಮಿ ಡಿಸೋಜ, ನಾಕೂರು ಕಾಫಿ ಬೆಳೆಗಾರ ಅಜಿತ್ ಅಪ್ಪಚ್ಚು, ನಾಕೂರು ಶಿರಂಗಾಲ ಗ್ರಾ.ಪಂ.ಉಪಾಧ್ಯಕ್ಷ ಬಿ.ಇ.ಸತೀಶ್, ಸುಂಟಿಕೊಪ್ಪ ಉದ್ಯಮಿ ಚಂದ್ರ ನೆರವೇರಿಸುವರು.

ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಪೂರ್ವಾಹ್ನ 11ಕ್ಕೆ ಕಾಫಿ ಬೆಳೆಗಾರ ಕೆ.ಎಂ.ನಂಜಪ್ಪ, ನಾಕೂರು ಕಾಫಿಬೆಳೆಗಾರ ಕರವಂಡ ಸಾಬು ಚಂಗಪ್ಪ, ಹಾರಂಗಿ ಕಾವೇರಿ ಮೀನುಗಾರರ ಸಂಘದ ಅಧ್ಯಕ್ಷ ಕೆ.ಎಸ್.ಮಹಮದ್, ನಾಕೂರು ಉದ್ಯಮಿಗಳಾದ ರಾಜೇಶ್ ಮತ್ತು ಚಂದು, ನಾಕೂರು ಶಿರಂಗಾಲದ ಎಲ್.ಎಂ. ಮಂಜುನಾಥ್, ಕಾಫಿ ಬೆಳೆಗಾರ ದಾಸಂಡ ಕಿರಣ್, ಉದ್ಯಮಿ ವಿವಿನ್, ಕೊಳೆಂಬೆ ರವಿಕುಮಾರ್, ಉದ್ಯಮಿ ಪಿ.ಸಿ.ಮೋಹನ್ ನಿರ್ವಹಿಸಲಿದ್ದಾರೆ.

ವಾಲಿಬಾಲ್ ಪೈನಲ್ ಪಂದ್ಯಾಟವನ್ನು ಸಂಜೆ 5 ಗಂಟೆಗೆ ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಸಿ.ಜಗನ್ನಾಥ್, ಉದ್ಯಮಿ ಮಂಜು, ಕಾಫಿ ಬೆಳೆಗಾರ ಎ.ಆರ್.ಪಾಪ್ಪಣ್ಣ ಮತ್ತು ನಿಲ್ಲಮ್ಮ ಪೆಮ್ಮಯ್ಯ, ಜರ್ಮನಿ ಟೆನ್ನಿಸ್ ಆಕಾಡೆಮಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ, ಟಿಂಬರ್ ಬಾಯ್ಸ್ ತಂಡದ ಗಣೇಶ್ ಮತ್ತು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್ ಉದ್ಘಾಟಿಸಲಿದ್ದಾರೆ.

ಸಮಾರೋಪ ಸಮಾರಂಭ:

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಅಧ್ಯಕ್ಷತೆ ವಹಿಸುವರು. ಬಹುಮಾನ ವಿತರಣೆಯನ್ನು ಮಾಜಿ.ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ನಾಕೂರು ನಿವೃತ್ತ ಕರ್ನಲ್ ಎ.ಇ.ಗಣಪತಿ, ಕಾಫಿ ತೋಟದ ಮಾಲೀಕ ಜಿ.ಜಿ.ರಾಜೇಂದ್ರ, ನಾಕೂರು ಸೌತ್ ಇಂಡಿಯಾ ಕಾಫಿ ಕಂ... ಕೋಮಲ್ ಸಾಬ್ಲೆ ಮತ್ತು ಅಕ್ಷಯ್ ದಶರಥ್, ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರ ಅಯ್ಯುಡ ವೇಣು ಉತ್ತಪ್ಪ,ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್, ಸುಂಟಿಕೊಪ್ಪ ಕಾಂಗ್ರೆಸ್ ಯುವ ಘಟಕದ ಅನೂಪ್ ಕುಮಾರ್, ಸುಂಟಿಕೊಪ್ಪ ಟಿಂಬರ್ ವ್ಯಾಪರಿ ವಿಲಿಯಂ, ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ರಾಜ್ಯ ಉಪಾಧ್ಯಕ್ಷ ಟಿ.ಕೆ.ಸಾಯಿಕುಮಾರ್, ಉದ್ಯಮಿ ಜೆ.ಎನ್.ಲೋಕೇಶ್, ಕಾನ್‌ಬೈಲ್ ಕಾಫಿ ಬೆಳೆಗಾರ ನೀಲಮ್ಮ ಪೆಮ್ಮಯ್ಯ, ಜಂಗಲ್ ಕ್ಯಾಂಪ್ ರೇಸಾರ್ಟ್ ಮಂಜು, ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಎ.ಆರ್. ಪಾಪ್ಪಣ, ಬಿ.ಎಸ್.ಚಂದ್ರಶೇಖರ, ವಿ.ಕೆ.ವಿಜಯಕುಮಾರ್, ಕೆ.ಎಂ.ಈರಪ್ಪ, ಗೌತಮ್, ಸೋಮಶೇಖರ್, ಜರ್ಮಿ ಡಿಸೋಜ, ಬಿ.ಜಿ.ರಮೇಶ್, ಗಣೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೋತಿನ, ಎಂಎಂ.ಸೋಮಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಂಜೆ 7ಕ್ಕೆ ಡ್ಯಾನ್ಸ್‌ ಮೇಳವನ್ನು ಅಡಿಕೇರ ಶಾಂತಪ್ಪ ಮತ್ತು ಅಡಿಕೇರ ಧರ್ಮಪ್ಪ, ನಿಲಮ್ಮ ಪೆಮ್ಮಯ್ಯ, ಚೆನ್ನಮ್ಮ ಮತ್ತು ಲಿಲಿ ಸೊಮ್ಮಯ್ಯ ಉದ್ಘಾಟಿಸುವರು ಎಂದು ಪ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಬಿ.ಎ.ವಸಂತ ಹಾಗೂ ಪದಾಧಿಕಾರಿಗಳಾದ ಗೌರವಧ್ಯಕ್ಷ ಅಂಬೆಕಲ್ ಚಂದ್ರಶೇಖರ್, ಕಾರ್ಯದರ್ಶಿ ಶಂಕರ ನಾರಾಯಣ ಹಾಗೂ ಕೆ.ಎಸ್.ವಿನೋದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ: 8217454996, 94449687975 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.