ನರೇಗಾ ಯೋಜನೆ ಬಡಜನರಿಗೆ ಬಹಳ ಅನುಕೂಲ

| Published : Feb 04 2024, 01:31 AM IST

ಸಾರಾಂಶ

ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಬಡಜನರಿಗೆ ಬಹಳ ಅನುಕೂಲವಾಗಿದೆ. ಗ್ರಾಮೀಣ ಜನರು ಕೆಲಸವಿಲ್ಲ ಎಂದು ಚಿಂತೆ ಮಾಡದೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ ಹೇಳಿದರು.

ಅವರು ಶುಕ್ರವಾರ ತಾಲೂಕಿನ ನೇಜ ಗ್ರಾಮ ಪಂಚಾಯತಿಯಲ್ಲಿ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕಾಗಿದೆ ಎಂದರು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕೂಲಿ ಬೇಡಿಕೆ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಕೆಲಸ ನೀಡಲಾಗುವುದು. ರಾಜ್ಯ ಸರ್ಕಾರ ಕೂಲಿ ಕಾರ್ಮಿಕರ 07 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆ ಪ್ರಾರಂಭಿಸಲಾಗಿದೆ. ರೈತರು ತಮ್ಮ ಸ್ವಂತ ಜಮೀನಿನಲ್ಲಿ ವೈಯಕ್ತಿಕ ಕೆಲಸ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದರು.

ಗ್ರಾಮ ಪಂಚಾಯತ ರಾಜುಗೌಡಾ ಪಾಟೀಲ ಮೋಹನ ಕಾಂಬಳೆ, ಚಂದ್ರಕಾಂತ ಕಿಲಾರೆ, ಮೋಹನ ನರುಮಾಳೆ, ಪಿಡಿಒ ಕುಮಾರ ಢಂಗ, ಕಾರ್ಯದರ್ಶಿ ಬಾಬುರಾವ ವಂಟಗುಡೆ, ತಾಂತ್ರಿಕ ಸಿಬ್ಬಂದಿ ಪ್ರಕಾಶ ನಾವಿ, ಐಇಸಿ ಸಂಯೋಜಕ ರಂಜೀತ ಕಾಂಬಳೆ, ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ, ಬಿ.ಎಫ್‌.ಟಿ ಅಜ್ಜಪ್ಪ ತಳವಾರ, ಕಾಯಕ ಮಿತ್ರ ಹೇಮಾ ಅಮಾತೆ, ಗ್ರಾಮ ಪಂಚಾಯತ ಸಿಬ್ಬಂದಿ ಇದ್ದರು.