ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹರಿದ ರಾಷ್ಟ್ರಧ್ವಜ ಹಾರಾಟ

| Published : Aug 31 2024, 01:33 AM IST

ಸಾರಾಂಶ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹರಿದ ರಾಷ್ಟ್ರಧ್ವಜ ಹಾರಾಡಿದರು ಅಲ್ಲಿನ ಅಧಿಕಾರಿಗಳ ಗಮನಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಾವೇರಿ ಪ್ರವಾಸದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ್ದರು.

ಹುಬ್ಬಳ್ಳಿ:

ನಗರದ ವಿಮಾನ ನಿಲ್ದಾಣದಲ್ಲಿ ಹರಿದ ರಾಷ್ಟ್ರಧ್ವಜ ಹಾರಾಡಿದೆ. ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಉಂಟಾಗಿದೆ.

ವಿಮಾನ ನಿಲ್ದಾಣದಲ್ಲಿ ಹಾಕಲಾಗಿರುವ ಬೃಹತ್‌ ಗಾತ್ರದ ಧ್ವಜ ಸ್ತಂಭದಲ್ಲಿನ ರಾಷ್ಟ್ರಧ್ವಜವು ಶುಕ್ರವಾರ ಬೆಳಗ್ಗೆ ಹರಿದಿದ್ದು ಹಾರಾಡಿದೆ. ಇದನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಗಮನಿಸದೇ ಕೆಲ ಗಂಟೆಗಳ ಕಾಲ ಹರಿದ ರಾಷ್ಟ್ರಧ್ವಜವೇ ಹಾರಾಡಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಹುಬ್ಬಳ್ಳಿಗೆ ವಿಮಾನದ ಮೂಲಕ ಆಗಮಿಸಿದ್ದರು. ಆ ವೇಳೆ ಇದು ಕಂಡು ಬಂದಿದೆ. ಈ ವೇಳೆ ಸಚಿವರು, ಅಧಿಕಾರಿಗಳು, ಪೊಲೀಸರು ಎಲ್ಲರೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಆದರೆ, ಈ ಹರಿದ ರಾಷ್ಟ್ರಧ್ವಜ ಯಾರ ಗಮನಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿ.

ಸಂಜೆ ವೇಳೆಗೆ ರಾಷ್ಟ್ರಧ್ವಜವನ್ನು ಬದಲಿಸಲಾಯಿತು.