ಸಾರಾಂಶ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಶುಕ್ರವಾರ ಆಗಮಿಸಿ ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದರು.
ದರ್ಭಾರ್ ಗಣಪತಿಗೆ ಪೂಜೆ । ಜಿಲ್ಲಾಡಳಿತ ಗೌರವ । ನಿಖಿಲ್ ಗೆಲುವಿಗೆ ಬೇಡಿದ್ದೇನೆ
ಕನ್ನಡಪ್ರಭ ವಾರ್ತೆ ಹಾಸನಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಶುಕ್ರವಾರ ಆಗಮಿಸಿ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದರು.
ಮೊದಲು ಹಾಸನಾಂಬೆ ತಾಯಿ ದರ್ಶನ ಪಡೆದು, ನಂತರದಲ್ಲಿ ದರ್ಭಾರ್ ಗಣಪತಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಸಿದ್ಧೇಶ್ವರ ದೇವರ ಗುಡಿಗೆ ಬಂದು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿದರು.ನಮ್ಮ ಜಿಲ್ಲೆಯ, ರಾಜ್ಯದ ಜನ ಸುಬಿಕ್ಷವಾಗಿರಲಿ. ವಿಶೇಷವಾಗಿ ರೈತಾಪಿ ವರ್ಗದ ಜನ ಆಶೀರ್ವಾದ ಪಡೆಯಬೇಕು. ಈ ಜಿಲ್ಲೆಗೆ ಯಾವುದೇ ರೀತಿಯ ಸಮಸ್ಯೆ ಬಾರದೆ, ಹಾಸನ ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಕಾಣಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ವರ್ಷ ವರ್ಷ ದೇವಿ ದರ್ಶನಕ್ಕೆ ಬರುತ್ತಿದ್ದು, ಪ್ರತಿವರ್ಷ ಬರುವ ಅವಕಾಶ ಕೊಡು ಎಂದು ಬೇಡಿದ್ದೇನೆ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆ ವಿಚಾರ ಮಾತನಾಡಿ, ಸ್ವಾಭಾವಿಕವಾಗಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಅತ್ಯಂತ ಹೆಚ್ಚು ಮತಗಳಿಂದ ಜಯಭೇರಿ ಗಳಿಸಲಿ ಎಂದು ವಿಶೇಷವಾಗಿ ಆ ತಾಯಿಯಲ್ಲಿ ಬೇಡಿದ್ದೇನೆ. ನಾನು ಕೂಡ ಮುಂದಿನ ವಾರ ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.ಎನ್‌ಡಿಎ ಅಭ್ಯರ್ಥಿ ಎಂದ ಮೇಲೆ ಜೆಡಿಎಸ್-ಬಿಜೆಪಿ ಒಂದೇ ತಾನೇ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಬಿಜೆಪಿಯವರು ಸಕ್ರಿಯವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.