ಸಾರಾಂಶ
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಜಯೋತ್ಸವ ಅಚರಿಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಎಂ. ರಾಮಚಂದ್ರ, ಕಾಂಗ್ರೆಸ್ಸಿನ ಮತ ಚೋರಿ ಆರೋಪಕ್ಕೆ ಬಿಹಾರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮುಂದೆ ರಾಹುಲ್ ಗಾಂಧಿ ನಿರಾಧಾರ ಆರೋಪಗಳು ಠುಸ್ ಆಗಿವೆ ಎಂದರು.ಬಿಹಾರ ಜನತೆ ನಿರೀಕ್ಷೆಗೂ ಮೀರಿ ಗೆಲುವು ಕೊಟ್ಟು ಎನ್‌ಡಿಎ ಮತ್ತಷ್ಟು ಬಲ ತಂದು ಕೊಟ್ಟಿದ್ದಾರೆ. ಪ್ರತಿಯೊಂದು ಘಟನೆಗೂ ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡುವ ರಾಜ್ಯ ಸರ್ಕಾರ ಈಗಲಾದರೂ ಬುದ್ಧಿ ಕಲಿತು ಜನಪರವಾದ ಕೆಲಸ ಮಾಡಲಿ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ವೃಷಭೇಂದ್ರಪ್ಪ ಮಾತನಾಡಿ, ಬಿಹಾರ ಜನತೆ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದ್ದಾರೆ. ಮತ ಚೋರಿ ಎಂಬ ರಾಹುಲ್ ಗಾಂಧಿ ಅರೋಪಕ್ಕೆ ಮತದಾರರು ತಕ್ಕ ಉತ್ತರ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಸನ್ನು ಗೆದ್ದಿದ್ದಾರೆ. ಬಿಹಾರ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ವಿಜಯೋತ್ಸವದಲ್ಲಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಜಯಶ್ರೀ, ಮುಖಂಡರಾದ ನೂರೊಂದುಶೆಟ್ಟಿ, ಕಾಡಹಳ್ಳಿ ಕುಮಾರ್, ಎಸ್. ಬಾಲಸುಬ್ರಹ್ಮಣ್ಯಂ, ಶಿವರಾಜ್, ವಿರಾಟ್ ಶಿವು, ಸೂರ್ಯ, ಆನಂದ ಭಗೀರಥ, ಶಿವಣ್ಣ, ಮಂಜು ಕೋಡಿಉಗನೆ, ವೇಣುಗೋಪಾಲ್, ರಾಮಸಮುದ್ರ ಶಿವು, ಚಂದ್ರಶೇಖರ್, ಮಂಜು, ಚಂದ್ರು ಇತರರು ಇದ್ದರು.----------೧೪ಸಿಎಚ್‌ಎನ್೧ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ಅಂಗವಾಗಿ ಚಾಮರಾಜನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಜಯೋತ್ಸವ ಅಚರಿಸಲಾಯಿತು.---------;Resize=(128,128))
;Resize=(128,128))
;Resize=(128,128))