ಸಾರಾಂಶ
ಯೋಜನೆಯಿಂದ ಹಲವಾರು ತಳಿಗಳ ಕೃತಕ ಗರ್ಭಧಾರಣೆ ಸೇವೆ ತಮ್ಮ ಮನೆಯ ಬಾಗಿಲಲ್ಲಿ ದೊರೆಯುವುದು ಹೈನುಗಾರಿಕೆಯಲ್ಲಿ ರೈತರಿಗೆ ಅನುಕೂಲವಾಗಲೆಂದು ಹೈನುಗಾರಿಕೆಗೆ ಸಂಬಂಧಪಟ್ಟ ಗೋಡೆ ಬರಹಗಳನ್ನು ತಮ್ಮ ಗ್ರಾಮದಲ್ಲಿ ಬರೆಸಲಾಗಿದೆ ಎಂದರು. ಯೋಜನೆ ವತಿಯಿಂದ ಹಳ್ಳಿಯ ಆಯ್ಕೆ ಆದ ರೈತರಿಗೆ ಹೊಸ ಮಾದರಿಯ ಬೈಫ್.ನೆಪಿಯರ್ 10 ಹೊಸ ತಳಿಯ ಮೇವಿನ ಕಡ್ಡಿಗಳನ್ನು ಕೊಡಲಾಗಿದೆ. ಇನ್ನುಮುಂದೆ ಕೃತಕ ಗರ್ಭಧಾರಣೆ ಸೇವೆ ಖನಿಜ ಮಿಶ್ರಣ ಸೇವೆಯನ್ನು ಪಡೆದುಕೊಳ್ಳಬೇಕೆಂದು ತರಬೇತಿಯಲ್ಲಿ ರೈತರಿಗೆ ತಿಳಿಸಿದರು.
ಚನ್ನರಾಯಪಟ್ಟಣ: ಕೋಟಕ್ ಮಹೀಂದ್ರಾ ಬ್ಯಾಂಕ್ ಬೈಫ್ ಸಂಸ್ಥೆ ಹಾಗೂ ಸಮಗ್ರ ಜಾನುವಾರು ಅಭಿವೃದ್ಧಿ ಯೋಜನೆ ಕಬ್ಬಳಿ ಕೃತಕ ಗರ್ಭಧಾರಣೆ ಕೇಂದ್ರದಿಂದ ತಾಲೂಕಿನ ಮೂಕಿಕೆರೆ ಗ್ರಾಮದಲ್ಲಿ ಹೈನುಗಾರಿಕೆ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು.
ಸಂಸ್ಥೆಯ ಯೋಜನಾ ಸಂಯೋಜಕರಾದ ಶಂಕರಪ್ಪ ಮಾತನಾಡಿ, ಯೋಜನೆಯಿಂದ ಹಲವಾರು ತಳಿಗಳ ಕೃತಕ ಗರ್ಭಧಾರಣೆ ಸೇವೆ ತಮ್ಮ ಮನೆಯ ಬಾಗಿಲಲ್ಲಿ ದೊರೆಯುವುದು ಹೈನುಗಾರಿಕೆಯಲ್ಲಿ ರೈತರಿಗೆ ಅನುಕೂಲವಾಗಲೆಂದು ಹೈನುಗಾರಿಕೆಗೆ ಸಂಬಂಧಪಟ್ಟ ಗೋಡೆ ಬರಹಗಳನ್ನು ತಮ್ಮ ಗ್ರಾಮದಲ್ಲಿ ಬರೆಸಲಾಗಿದೆ ಎಂದರು. ಯೋಜನೆ ವತಿಯಿಂದ ಹಳ್ಳಿಯ ಆಯ್ಕೆ ಆದ ರೈತರಿಗೆ ಹೊಸ ಮಾದರಿಯ ಬೈಫ್.ನೆಪಿಯರ್ 10 ಹೊಸ ತಳಿಯ ಮೇವಿನ ಕಡ್ಡಿಗಳನ್ನು ಕೊಡಲಾಗಿದೆ. ಇನ್ನುಮುಂದೆ ಕೃತಕ ಗರ್ಭಧಾರಣೆ ಸೇವೆ ಖನಿಜ ಮಿಶ್ರಣ ಸೇವೆಯನ್ನು ಪಡೆದುಕೊಳ್ಳಬೇಕೆಂದು ತರಬೇತಿಯಲ್ಲಿ ರೈತರಿಗೆ ತಿಳಿಸಿದರು. ನಿವೃತ್ತ ಪಶು ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಸಿಎಂ ಸಿದ್ದಲಿಂಗಯ್ಯ ಮಾತನಾಡಿ ಮನೆಯಲ್ಲೇ ಹುಟ್ಟಿದ ಕರುಗಳ ಸಾಕಾಣಿಕೆ ಗಬ್ಬದ ಹಸುಗಳ ನಿರ್ವಹಣೆ ಹಾಗೂ ಹೈನುಗಾರಿಕೆಯಲ್ಲಿ ಮೇವಿನ ನಿರ್ವಹಣೆ ಬಗ್ಗೆ ಮಾಹಿತಿ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಾಮರಾಜ್, ಕುಮಾರ್ ಹಾಗೂ ಕೃತಕ ತಂತ್ರಜ್ಞ ಭರತ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))