ಕನ್ನಡಪ್ರಭ ವಾರ್ತೆ ಸಿಂದಗಿ

ಈ ಭಾಗದ ರೈತರ ಹೋರಾಟದ ಫಲವಾಗಿ ಇಂದು ಈ ನೂತನ ವಿದ್ಯುತ್ ಕೇಂದ್ರ ತಲೆ ಎತ್ತಿ ನಿಂತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಗುಬ್ಬೇವಾಡದಲ್ಲಿ ನೂತನವಾಗಿ ನಿರ್ಮಾಣವಾದ 1*10 ಎಂ.ವ್ಹಿ.ಎ, 110/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೂಲ ಸೌಕರ್ಯದಿಂದ ವಂಚಿತರಾದ ಗುಬ್ಬೇವಾಡ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸತತ 2 ವರ್ಷಗಳ ಪ್ರಯತ್ನದಿಂದ ನೂತನ ವಿದ್ಯುತ್ ಕೇಂದ್ರ ನಿರ್ಮಿಸಿದ್ದು, ಸಂತಸ ತಂದಿದೆ. ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ ಹೊಂದಿದ್ದೇನೆ. ಈ ವರ್ಷ ಸರಕಾರ ಕೊರಳ್ಳಿ ಗ್ರಾಮಕ್ಕೆ ಸರಕಾರಿ ಪಿಯು ಕಾಲೇಜು ನೀಡಿದೆ. ಮುಂದಿನ ದಿನಮಾನಗಳಲ್ಲಿ ಗುಬ್ಬೇವಾಡ ಗ್ರಾಮಕ್ಕೂ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಬಾಗಲಕೋಟೆಯ ಕವಿಪ್ರನಿನಿ ಅಧೀಕ್ಷಕ ಎಂಜನಿಯರ್ ರಮೇಶ ಪವಾರ, ಅಡಿವೇಶ್ವರ ಶ್ರೀಗಳು, ಎಪಿಎಂಸಿ ನಿರ್ದೇಶಕ ಸದ್ದಾಂ ಪಟೇಲ, ರೈತ ಸಂಘದ ತಾಲೂಕಾಧ್ಯಕ್ಷ ಧರ್ಮಣ್ಣ ಗಬಸಾವಳಗಿ, ದೇವರಾಜ ನರಗೋದಿ, ಮುತ್ತುಗೌಡ ಪಾಟೀಲ, ಬಾಪುಗೌಡ ಪಾಟೀಲ ಮಾತನಾಡಿದರು.

ಅಧಿಕಾರಿಗಳಾದ ಜಗದೀಶ ಜಾಧವ, ವಾಹೀದ ಜಹಾಗೀರರಾದ, ಚಂದ್ರಕಾಂತ ನಾಯಕ ಮತ್ತು ರಮೇಶ ಪವಾರ, ಸಂತೋಷ ಸಾಲಿ, ಎಸ್.ವೈ.ಕೊಂಡಗೂಳಿ, ಬಸವರಾಜ ಮಾರಲಭಾವಿ, ಭೂದಾನಿ ಬೋರಮ್ಮ ತಳವಾರ, ರಮೇಶ ಗುಬ್ಬೇವಾಡ, ನಿಂಗಪ್ಪ ಭಾವಿಕಟ್ಟಿ, ರಮೇಶ ಇಜೇರಿ, ಸಿದ್ದು ಅಂಗಡಿ, ಗುಬ್ಬೇವಾಡ ಗ್ರಾಮಸ್ಥರು, ಪಕ್ಷದ ಮುಖಂಡರು, ಮುಂತಾದವರು ಇದ್ದರು.