ಜೆಡಿಎಸ್ ಪಕ್ಷದ ಆಶಯಗಳಿಗೆ ಯುವ ನಾಯಕ ನಿಖಿಲ್ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ನಿಖಿಲ್ ಭವಿಷ್ಯದ ರಾಜಕೀಯ ಶಕ್ತಿಯಾಗಿದ್ದು, ಅವರ ನಾಯಕತ್ವದಲ್ಲಿ ಜೆಡಿಎಸ್ ರಾಜ್ಯದ ಜನರ ಆಶಯ ಈಡೇರಿಸಲಿದೆ. ಭಗವಂತ ಅವರಿಗೆ ಆಯಸ್ಸು ಮತ್ತು ಆರೋಗ್ಯ ನೀಡಲಿ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ಶಾಸಕ ಎಚ್.ಟಿ.ಮಂಜು ಸಹೋದರ ಎಚ್.ಟಿ.ಲೋಕೇಶ್ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು ಒಳರೋಗಿಗಳಿಗೆ ಹಣ್ಣು ಹಂಪಲು ಹಂಚಿದರು. ನಂತರ ಆಸ್ಪತ್ರೆಯ ಹೊರ ಭಾಗದಲ್ಲಿ ಕೇಕ್ ಕತ್ತರಿಸಿ ಸಿಹಿ ಜೆಡಿಎಸ್ ಯುವ ನಾಯಕನಿಗೆ ಹುಟ್ಟುಹಬ್ಬದ ಶುಭ ಕೋರಿದರು.
ಈ ವೇಳೆ ಎಚ್.ಟಿ.ಲೋಕೇಶ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಟ್ಟಿ ಬೆಳೆಸಿದ ಜೆಡಿಎಸ್ ಪಕ್ಷ ರಾಜ್ಯದ ರೈತರು, ದೀನ ದಲಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.ಜೆಡಿಎಸ್ ಪಕ್ಷದ ಆಶಯಗಳಿಗೆ ಯುವ ನಾಯಕ ನಿಖಿಲ್ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ನಿಖಿಲ್ ಭವಿಷ್ಯದ ರಾಜಕೀಯ ಶಕ್ತಿಯಾಗಿದ್ದು, ಅವರ ನಾಯಕತ್ವದಲ್ಲಿ ಜೆಡಿಎಸ್ ರಾಜ್ಯದ ಜನರ ಆಶಯ ಈಡೇರಿಸಲಿದೆ. ಭಗವಂತ ಅವರಿಗೆ ಆಯಸ್ಸು ಮತ್ತು ಆರೋಗ್ಯ ನೀಡಲಿ ಎಂದು ಆಶಿಸಿದರು.
ಈ ವೇಳೆ ದಿಶಾ ಸಮಿತಿ ಸದಸ್ಯ ನರಸನಾಯಕ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಪಂ ಮಾಜಿ ಸದಸ್ಯರಾದದ ಮಲ್ಲೇನಹಳ್ಳಿ ಮೋಹನ್, ಮೆಣಸ ಮಹದೇವೇಗೌಡ, ಮುಖಂಡರಾದ ಮಾಕವಳ್ಳಿ ವಸಂತಕುಮಾರ್, ವೀರಪ್ಪಗೌಡ, ಸಂತೇಬಾಚಹಳ್ಳಿ ರವಿಕುಮಾರ್, ಬಸವಲಿಂಗಪ್ಪ, ತೋಂಟಪ್ಪಶೆಟ್ಟಿ, ಕೆ.ಆರ್.ಹೇಮಂತ ಕುಮಾರ್, ಅಶೋಕ್, ಶಾಸಕರ ಆಪ್ತ ಸಹಾಯಕರಾದ ಮಾಕವಳ್ಳಿ ಕುಮಾರ್, ಪ್ರದೀಪ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.ಜ.24 ರಂದು ಜಾನಪದ ರಸಸಂಜೆ, ಸನ್ಮಾನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿ ರಥಸಪ್ತಮಿಯ ರಾಜ್ಯ ಮಟ್ಟದ ಜನಪದ ಕಲಾಮೇಳದ ಅಂಗವಾಗಿ ಜ.24ರಂದು ಜಾನಪದ ರಸಸಂಜೆ, ಜಾನಪದ ಕಲಾವಿದರು ಮತ್ತು ಸಾಧಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕ್ಕೊಂಡಿರುವ ರಸಸಂಜೆ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಲಿದ್ದಾರೆ. ಕಲಾವಿದರನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸನ್ಮಾನಿಸಲಿದ್ದಾರೆ. ಮೇಲುಕೋಟೆ ಗ್ರಾಪಂ ಅಧ್ಯಕ್ಷೆ ಭವಾನಿ ಹರಧರ ಅಧ್ಯಕ್ಷತೆ ವಹಿಸಲಿದ್ದಾರೆ. ಇಸ್ರೋ ವಿಜ್ಞಾನಿ ಡಾ.ಶ್ರೀನಾಥ್, ಕುಲಸಚಿವ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ
ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹಿರಿಯ ಪ್ರತ್ರಕರ್ತರಾದ ಕೆ.ಆರ್.ಪೇಟೆ ನೀಲಕಂಠ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸುನಿಲ್ ಕುಮಾರ್, ಚನ್ನಮಾದೇಗೌಡ, ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹೊನ್ನಯ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಲಾವಿದ ಕೃಷ್ಣೇಗೌಡರನ್ನು ಅಭಿನಂದಿಸಲಾಗುವುದು.ಇದೇ ವೇಳೆ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಹುಲಿವಾನ ತಮಟೆ ಕಲಾವಿದ ಭೈರಯ್ಯ, ಕೊತ್ತತ್ತಿ ದೊಣ್ಣೆವರೆಸೆ ಕಲಾವಿದ ಜೋಗಯ್ಯ, ಲಕ್ಷ್ಮೀಸಾಗರ ಡೊಳ್ಳುಕುಣಿತ ಕಲಾವಿದ ಕುಮಾರ್‌ರನ್ನು ಸನ್ಮಾನಿಸಲಾಗುವುದು. ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸನ್ಮಾನಿತ ಕಲಾವಿದರು, ಗಣ್ಯರನ್ನು ದೇವಾಲಯದ ವೇದಿಕೆಗೆ ಕರೆತರಲು ನಡೆಯುವ ಶೋಭಾಯಾತ್ರೆಯಲ್ಲಿ ಡೊಳ್ಳುಕುಣಿತ, ಮೈಸೂರುನಗಾರಿ, ಚಂಡೆ, ತಮಟೆಮೇಳ, ನಾಸಿಕ್ ಡೋಲ್, ಕೋಲಾಟ, ವಿದ್ಯಾರ್ಥಿಗಳ ಬ್ಯಾಂಡ್ ಸೇರಿದಂತೆ ಹಲವು ಪ್ರಮುಖ ತಂಡಗಳ ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ರಾತ್ರಿ 7.30ಕ್ಕೆ ಬೆಂಗಳೂರಿನ ನಾಟ್ಯ ಭೈರವಿ ಕಲಾಕುಠೀರದ ವಿದುಷಿ ಮಂಜುಭೈರವಿ ನೇತೃತ್ವದಲ್ಲಿ 40 ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ ನೀರಾಜನಂ ಮತ್ತು ವಿಶೇಷ ನೃತ್ಯ ರೂಪಕ ಕೃಷ್ಣಲೀಲಾಮೃತ ಪ್ರದರ್ಶನವಿದೆ.ರಾತ್ರಿ 10 ಗಂಟೆಗೆ ಕೊತ್ತತ್ತಿ ಪುಟ್ಟಸ್ವಾಮಿ ತಂಡದಿಂದ ಬೆಂಕಿಭರಾಟೆ, ರಥಸಪ್ತಮಿಗೆ ಸಾಂಪ್ರದಾಯಿಕ ಎಳೆ ರಂಗೋಲೆ ಹಾಕಲು ಅವಕಾಶವಿದೆ. ಮಹಿಳೆಯರು ಹೆಸರು ನೊಂದಾಯಿಸಿ ಸ್ವಯಂಪ್ರೇರಿತವಾಗಿ ಭಾಗವಹಿಸಲು ಅವಕಾಶವಿದೆ ಎಂದು ಸಂಘಟಕರಾದ ಸೌಮ್ಯಸಂತಾನಂ ಮತ್ತು ಕದಲಗೆರೆ ಶಿವಣ್ಣಗೌಡ ತಿಳಿಸಿದ್ದಾರೆ.