ಉತ್ತಮವಾಗಿ ಕೆಲಸ ಮಾಡುವ ಆರು ಮಂದಿ ವಾರ್ಡನ್‌ಗಳಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಶಿವಮೊಗ್ಗ: ಉತ್ತಮವಾಗಿ ಕೆಲಸ ಮಾಡುವ ಆರು ಮಂದಿ ವಾರ್ಡನ್‌ಗಳಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಶಿವಮೊಗ್ಗದ ಎಸ್ಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮಾವಳಿ ಪ್ರಕಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಸರಿಯಾದ ಸಮಯಕ್ಕೆ ಊಟ ಹಾಗೂ ಆರೋಗ್ಯ ವಿಚಾರಿಸುವ 6 ಮಂದಿ ಪುರುಷ ಹಾಗೂ ಮಹಿಳಾ ವಾರ್ಡನ್ ಗಳಿಗೆ ಪ್ರಶಸ್ತಿನೀಡಲಾಗುತ್ತದೆ ಎಂದರು.ನಾನು ಇತ್ತಿಚೇಗಷ್ಟೇ ಕಾರಗೃಹ ಇಲಾಖೆಯ ಅಧಿಕಾರವನ್ನು ವಹಿಸಿಕೊಂಡಿದ್ದೇನೆ. ಶಿವಮೊಗ್ಗದ ಎರಡು ಸೆಂಟಲ್ ಕಾರಾಗೃಹಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿ 819 ಪುರುಷರು 32 ಮಹಿಳಾ ಖೈದಿಗಳು ಇದ್ದಾರೆ. ಜೊತೆಗೆ ಹೊಸದಾಗಿ ಕೇಂದ್ರ ಸರ್ಕಾರದ 100 ಕೋಟಿ ರು. ವೆಚ್ಚದ ಅನುದಾನದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಭೇಟಿ ಮಾಡಿ ಬಂದಿದ್ದೇನೆ. ನಮ್ಮ ಇಲಾಖೆಯ ಅಧಿಕಾರಿಗಳು ಅಕ್ರಮ ಚಟುವಟಿಗೆಳು ನಡೆಯದಂತೆ ಸರಿಯಾಗಿ ತಮ್ಮ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಜೈಲಿನಲ್ಲಿರುವ ಸುಮಾರು 80ರಷ್ಟು ಕೈದಿಗಳು ತಮ್ಮ ಸಣ್ಣಪುಟ್ಟ ಗಲಾಟೆ ಹಾಗೂ ಕೆಲವು ವೈಯಕ್ತಿಕ ವಿಚಾರಗಳಿಗೆ ಜಗಳವಾಡಿಕೊಂಡಿ ಕೊಲೆ ಮಾಡಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಉಳಿದ 20ರಷ್ಟು ಮಂದಿಗಳು ಕ್ರಿಮಿನಲ್ ಹಿನ್ನಲೆಯಿಂದ ಕೆಟ್ಟವರು ಇರುತ್ತಾರೆ ಅವರಿಗೆ ನಾವು ಸರಿಯಾದ ಕಾನೂನು ಕ್ರಮ ಕೈಗೊಂಡು ನಾವು ನೋಡಿಕೊಳ್ಳುತ್ತಿದ್ದೇವೆ. ಇನ್ನು ಮೊದಲ ಬಾರಿಗೆ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳನ್ನು ಪ್ರತ್ಯೇಕ ಸೆಲ್‌ಗಳಲ್ಲಿ ಇಟ್ಟು ಹಳೆಯ ಕೈದಿಗಳೊಂದಿಗೆ ಸೇರದಂತೆ ನೋಡಿಕೊಂಡು ಅವರಿಗೆ ಮನ ಪರಿವರ್ತನೆ ಮಾಡಲು ಧ್ಯಾನ, ಯೋಗ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಇದೇ ವೇಳೆ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆ, ಶಿವಮೊಗ್ಗ ಕಾರಾಗೃಹದ ಕ್ಯಾಲೆಂಡರ್ ಅನ್ನು ಡಿಜಿಪಿ ಅಲೋಕ್ ಕುಮಾರ್, ಡಿಐಜಿ ದಿವ್ಯಾಶ್ರೀ, ಶಿವಮೊಗ್ಗ ಎಸ್ಪಿ ಬಿ.ನಿಖಿಲ್, ಶಿವಮೊಗ್ಗ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ್ ಬಿಡುಗಡೆ ಮಾಡಿದರು. ಕೈದಿಗಳಲ್ಲಿ ತಾರತಮ್ಯವಿಲ್ಲರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪವಿತ್ರ ಗೌಡ ಅವರಿಗೆ ಮನೆ ಊಟ ಕೊಡುವ ವಿಚಾರದಲ್ಲಿ ಹೈಕೋರ್ಟ್ ಆದೇಶ ಉಲ್ಲೇಖಿಸಿ ಮಾತನಾಡಿದ ಡಿಜಿಪಿ ಅಲೋಕ್ ಕುಮಾರ್ ಅವರು, ನಾನು ಕಾರಾಗೃಹದಲ್ಲಿ ಒಳ್ಳೆ ಊಟ ನೀಡುತ್ತಿದ್ದೇವೆ. ಮನೆಯಿಂದ ತರುವ ಊಟಕ್ಕೆ ನಾನು ಅವಕಾಶ ನೀಡುವುದಿಲ್ಲ. ನಾನು ಕಾರಾಗೃಹದಲ್ಲಿ ತಯಾರಿಸುವ ಊಟದ ಗುಣಮಟ್ಟವನ್ನು ಎ-ಐಎಸ್‌ಎಲ್‌ಗೆ ಕಳಿಸಿ ಸರ್ಟಿಪೈ ಪಡೆದ ಬಳಿಕ ಜೈಲಿನಲ್ಲಿರುವ ಖೈದಿಗಳಿಗೆ ನೀಡುತ್ತಿದ್ದೇವೆ. ಜೈಲಿನಲ್ಲಿರುವ ಕೈದಿಗಳಲ್ಲಿ ಯಾರು ಪ್ರಭಾವಶಾಲಿ, ಯಾರು ಕೆಳಮಟ್ಟದಲ್ಲಿದ್ದಾರೆ ಎಂದು ಆ ರೀತಿ ನೋಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಒಂದು ನಿಯಮವನ್ನು ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.