ಜನಹಿತಕ್ಕಾಗಿ ಸಸಿ, ತೆಂಗು, ಮರ ಹೇಗೆ ಬೆಳೆಯುತ್ತವೆಯೋ ಹಾಗೆಯೇ ಸ್ವಾರ್ಥ, ಚಿಂತೆಗಳ ಮರೆತು ಮಾನವ ಗುರು, ಧರ್ಮ, ಆಚಾರ, ವಿಚಾರ ಸಂಸ್ಕಾರಕ್ಕಾಗಿ ಸದಾ ಚಿಂತನೆ ಮಾಡಬೇಕು ಎಂದು ಆವರಗೊಳ್ಳ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಲೇಬೆನ್ನೂರಲ್ಲಿ ನುಡಿದಿದ್ದಾರೆ.

- ಸಂಕ್ಲೀಪುರದಲ್ಲಿ ದೊಡ್ಡ ವೀರೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೆ ಓಂಕಾರ ಶ್ರೀ

- - -

ಕನ್ನಪ್ರಭ ವಾರ್ತೆ ಮಲೇಬೆನ್ನೂರು ಜನಹಿತಕ್ಕಾಗಿ ಸಸಿ, ತೆಂಗು, ಮರ ಹೇಗೆ ಬೆಳೆಯುತ್ತವೆಯೋ ಹಾಗೆಯೇ ಸ್ವಾರ್ಥ, ಚಿಂತೆಗಳ ಮರೆತು ಮಾನವ ಗುರು, ಧರ್ಮ, ಆಚಾರ, ವಿಚಾರ ಸಂಸ್ಕಾರಕ್ಕಾಗಿ ಸದಾ ಚಿಂತನೆ ಮಾಡಬೇಕು ಎಂದು ಆವರಗೊಳ್ಳ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಸಂಕ್ಲೀಪುರ ಗ್ರಾಮದಲ್ಲಿ ಪುರವರ್ಗ ಮಠದ ದೊಡ್ಡ ವೀರೇಶ್ವರ ಶಿವಾಚಾರ್ಯರ ೭೨ನೇ ಪುಣ್ಯಸ್ಮರಣೆ, ಧಾರ್ಮಿಕ ಸಮಾರಂಭ ಹಾಗೂ ಶಿವದೀಕ್ಷೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು. ಮಾನವನಿಂದ ಕಲ್ಯಾಣ ಕಾರ್ಯವಾಗಲು, ಶರೀರದ ಉಪಯೋಗವಾಗಲು ಗುರುನಾಮ ಸ್ಮರಣೆ, ತ್ಯಾಗದ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು ಎಂದರು.

ಜೀವರಾಶಿಗಳಿಗೆ ಕೇಡು ಉಂಟು ಮಾಡದೇ ಭಗವಂತ ಜೀವಧಾತು ಆಗಿದ್ದಾನೆ. ಇದನ್ನು ಅರಿತು ಮಾನವರು ಮನಸ್ಸನ್ನು ವರ್ಷಕ್ಕೆ ಎರಡು ಬಾರಿ ಭಗವಂತನಿಗೆ ಅರ್ಪಿಸಿಕೊಳ್ಳಬೇಕು. ಆಗ ಕತ್ತಲೆ ಸರಿದು ಹೊಸಬೆಳಕು ಮೂಡಲಿದೆ. ದ್ವೇಷ ಮರೆಯಾಗಿ, ಆಗ ಸಾಮರಸ್ಯದ ಬದುಕು ನಿಮ್ಮದಾಗಲಿದೆ ಎಂದು ತಿಳಿಸಿದರು.

ರಾಮಘಟ್ಟ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನದಲ್ಲಿ ದೊಡ್ಡ ವೀರೇಶ್ವರ ಗುರುಗಳ ಕರ್ತೃ ಗದ್ದುಗೆಯ ಜೀರ್ಣಾದ್ಧಾರಕ್ಕೆ ₹೫೧೦೦೦ ನೀಡುವುದಾಗಿ ಭರವಸೆ ನೀಡಿದರು.

ಗ್ರಾಪಂ ಸದಸ್ಯರಾದ ಸೋಮಶೇಖರ್, ಕಾಂತಮ್ಮ,ಅನುಷಾ, ನಿವೃತ್ತ ಪಿಡಿಒ ಜಯಣ್ಣ, ಸಿದ್ದಯ್ಯ ಶಾಸ್ತ್ರಿ, ಚನ್ನಬಸಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜಿ ಎಂ ನಿಂಗಪ್ಪ, ಸದಾಶಿವಯ್ಯ, ಚಂದ್ರಯ್ಯ, ಶಿಕ್ಷಕ ಶಶಿಕುಮಾರ್ ಸಾವಿರಾರು ಭಕ್ತರು ಹಾಜರಿದ್ದರು.

ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಆರಂಭದಲ್ಲಿ ದೊಡ್ಡ ವೀರೇಶ್ವರ ಸ್ವಾಮೀಜಿ ಗದ್ದುಗೆಗೆ ಮಹಾಪೂಜೆ ನಂತರ ಶ್ರೀಗಳ ಭಾವಚಿತ್ರ ಒಳಗೊಂಡ ಅಡ್ಡಫಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ಜರುಗಿತು.

- - -

-ಚಿತ್ರ-೧: