ಸಾರಾಂಶ
ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ್ ಅಹ್ಮದ್ ಯವುದೇ ಧರ್ಮ ಹಾಗೂ ಪಂಥಕ್ಕೆ ಸಿಲುಕಿದವರಲ್ಲ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಹೊರತು ಪಡಿಸಿದರೆ ಜಾತ್ಯತೀತವಾಗಿ ಕಾಣುವ ವ್ಯಕ್ತಿತ್ವ ಕೆ.ಎಸ್.ನಿಸಾರ್ ಅಹ್ಮದ್ ಅವರಿಗಿದೆ
ಕುಷ್ಟಗಿ: ಕನ್ನಡ ಸಾಹಿತ್ಯ ಲೋಕಕ್ಕೆ ನಿತ್ಯೋತ್ಸವ ಕವಿ ಡಾ. ಕೆಎಸ್ ನಿಸಾರ್ ಅಹಮದ್ ಕೊಡುಗೆ ಅಪಾರವಾಗಿದ್ದು, ಅವರು ಯಾವುದೆ ಜಾತಿ ಧರ್ಮ ಪಂಗಡಕ್ಕೂ ತಮ್ಮನ್ನು ಸೀಮಿತಗೊಳಿಸದೆ ಸರ್ವ ಜನರ ಪ್ರಿಯರಾಗಿದ್ದರು ಎಂದು ಕಸಾಪ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ ಹೇಳಿದರು.
ಪಟ್ಟಣದ ಬಾಬು ಘೋರ್ಪಡೆಯವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ನಡೆದ ನಿತ್ಯೋತ್ಸವ ಕವಿ ಡಾ.ಕೆ.ಎಸ್. ನಿಸ್ಸಾರ ಅಹ್ಮದ್ ಜನ್ಮದಿನಾಚರಣೆಯ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಡಾ.ಕೆ.ಎಸ್.ನಿಸಾರ್ ಅಹ್ಮದ್ ಕವಿಯಾಗುವುದರ ಜತೆಗೆ ಶ್ರೇಷ್ಠ ಮಾನವತಾವಾದಿ ಮಾನವನ ಸಮಾಜದ ಸ್ವಾಸ್ಥಕ್ಕಾಗಿ ಸಾಹಿತ್ಯ ರಚಿಸಿದವರು. ಅವರ ಬರಹಗಳು ಸೌಹಾರ್ದ ಮೂಡಿಸುವಂತಿತ್ತು ಅವರೊಬ್ಬರು ನೇರ ನಡೆ-ನುಡಿಯ ತತ್ವ ಬದ್ಧ ನಿಷ್ಟುರವಾದಿಯಾಗಿದ್ದರು ಎಂದರು.ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ ಮಾತನಾಡಿ, ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ್ ಅಹ್ಮದ್ ಯವುದೇ ಧರ್ಮ ಹಾಗೂ ಪಂಥಕ್ಕೆ ಸಿಲುಕಿದವರಲ್ಲ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಹೊರತು ಪಡಿಸಿದರೆ ಜಾತ್ಯತೀತವಾಗಿ ಕಾಣುವ ವ್ಯಕ್ತಿತ್ವ ಕೆ.ಎಸ್.ನಿಸಾರ್ ಅಹ್ಮದ್ ಅವರಿಗಿದೆ ಎಂದರು.
ಶಿಕ್ಷಕಿ ಜಹಾನ್ ಆರಾ ಕೋಳೂರ ಉಪನ್ಯಾಸ ನೀಡಿದರು. ಆಂಜನೇಯ ಲೋಕರೆ, ರಾಜು ಅರಾಳಗೌಡರ, ನಟರಾಜ್ ಸೋನಾರ ಮಾತನಾಡಿದರು. ಈ ಸಂದರ್ಭದಲ್ಲಿ ಪಾಂಡು ಆಶ್ರಿತ್, ಮಲ್ಲಿನಾಥ, ಮಹಾಂತೇಶ ಮಂಗಳೂರು, ಹನುಮಂತರೆಡ್ಡಿ, ಅನಿಲ ಆಲಮೇಲ, ಮಂಜುನಾಥ ಮಹಾಲಿಂಗಪೂರ ಮಹೇಶ ಹಡಪದ ಸೇರಿದಂತೆ ಮುಂತಾದವರಿದ್ದರು.