ಕೌಶಲ್ಯ ಬೆಳವಣಿಗೆಗೆ ಎನ್‌ಎಸ್‌ಎಸ್‌ ಶಿಬಿರ ಪೂರಕ: ನೇಮರಾಜ್‌ ನಾಯ್ಕ

| Published : Sep 21 2025, 02:02 AM IST

ಕೌಶಲ್ಯ ಬೆಳವಣಿಗೆಗೆ ಎನ್‌ಎಸ್‌ಎಸ್‌ ಶಿಬಿರ ಪೂರಕ: ನೇಮರಾಜ್‌ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಎಸ್‌ಎಸ್‌ ಶಿಬಿರ, ಚಟುವಟಿಕೆಗಳು ಯುವಜನತೆಯಲ್ಲಿ ಉತ್ತಮ ಕೌಶಲ್ಯ ಬೆಳವಣಿಗೆಗೆ ಹೆಚ್ಚು ಪೂರಕವಾಗಿವೆ.

ಪ್ರಿಯದರ್ಶಿನಿ ಪಪೂ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಎನ್‌ಎಸ್‌ಎಸ್‌ ಶಿಬಿರ, ಚಟುವಟಿಕೆಗಳು ಯುವಜನತೆಯಲ್ಲಿ ಉತ್ತಮ ಕೌಶಲ್ಯ ಬೆಳವಣಿಗೆಗೆ ಹೆಚ್ಚು ಪೂರಕವಾಗಿವೆ ಎಂದು ಶಾಸಕ ಕೆ. ನೇಮರಾಜ್‌ ನಾಯ್ಕ ಹೇಳಿದರು.

ಇಲ್ಲಿಗೆ ಸಮೀಪದ ಹೊಸ ಅಯ್ಯನಹಳ್ಳಿ ಗ್ರಾಮದಲ್ಲಿ ಪಟ್ಟಣದ ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿ ಮಾತನಾಡಿದರು.

ಎನ್‌ಎಸ್‌ಎಸ್‌ ಶಿಬಿರವು ಶಿಸ್ತು ಮತ್ತು ಸ್ವಚ್ಛತೆಯ ಜೀವನ ಕಲಿಸುತ್ತದೆ. ಉತ್ತಮ ಆಚಾರ-ವಿಚಾರ ಕಲಿಸುತ್ತದೆ. ಪ್ರತಿಯೊಬ್ಬರು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಕೂಡಿರಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಪರಿಸರ ಚೆನ್ನಾಗಿದ್ದರೆ ಉತ್ತಮ ಮಳೆ, ಬೆಳೆ ಬರಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಕೊರೋನಾ ಸಂದರ್ಭದಲ್ಲಿ ಕೃತಕ ಆಮ್ಲಜನಕ ಪಡೆಯುವುದು ಕೂಡ ಸುಲಭವಿರಲಿಲ್ಲ, ಆದ್ದರಿಂದ ಪ್ರತಿಯೊಬ್ಬರು ಪರಿಸರ ರಕ್ಷಿಸಿದರೆ ನೈಸರ್ಗಿಕ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಾದ ಇಸ್ಪೀಟ್, ಮಟ್ಕಾ, ಜೂಜಾಟಗಳಿಗೆ ಕಡಿವಾಣ ಹಾಕಲು ವಿಭಾಗಿಯ‌ ಪೊಲೀಸ್ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿರುವೆ. ಈಗಾಗಲೇ ಹೊರ ದೇಶಗಳಿಗೆ ಯುವಕರನ್ನು ಕರೆದೊಯ್ದು ಜೂಜಾಟಗಳನ್ನು ಆಡಿಸಿ, ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಹಾಳಾಗುತ್ತಿವೆ. ಇಂತಹ ಚಟುವಟಿಕೆಗಳನ್ನು ಉತ್ತೇಜಿಸುವವರ ವಿರುದ್ದ ಕ್ರಮವಾಗಬೇಕು ಎಂದು ಅವರು ತಿಳಿಸಿದರು.

ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ವೇದವ್ಯಾಸ, ಲೆಕ್ಕ ವಿಭಾಗದ ನರೇಶ ಕುಮಾರ್, ಎಸ್‌.ಎಲ್‌.ಎನ್. ಎ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಸತ್ಯನಾರಾಯಣ, ಗ್ರಾಪಂ ಸದಸ್ಯ ಈ. ಮಂಜುನಾಥ, ಶಾಲಾ ಮುಖ್ಯಗುರು ಕುಬೇರಾಚಾರ್ಯ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಎಂ. ಅಶೋಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ, ಸ್ಳಳೀಯ ಮುಖಂಡರಾದ ವೈ. ಮಲ್ಲಿಕಾರ್ಜನ, ಬಾದಾಮಿ ಮೃತ್ಯುಂಜಯ, ಎನ್.ಎಸ್. ಬುಡೇನ್ ಸಾಹೇಬ್, ಗುಂಡಾಸ್ವಾಮಿ, ಪಕ್ಕೀರಪ್ಪ, ಪರಮೇಶ, ಸಜ್ಜದ್‌ ವಿಶ್ವನಾಥ, ಎಲೆಗಾರ್‌ ಮಂಜುನಾಥ, ನಾಗೇಶ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪವಿತ್ರ ಪ್ರಾರ್ಥಿಸಿದರು. ಎನ್‌ಎಸ್‌ಎಸ್‌ ಯೋಜನಾಧಿಕಾರಿ ಪಿ. ರಾಮಚಂದ್ರ‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಬಿ. ಲತಾ ಸ್ವಾಗತಿಸಿದರು. ಸೋಮಪ್ಪ ನಿರೂಪಿಸಿದರು.