ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಾ.ಅಶ್ವತ್ಥ್‌ ನಾರಾಯಣ್

| Published : Sep 27 2025, 12:00 AM IST

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಾ.ಅಶ್ವತ್ಥ್‌ ನಾರಾಯಣ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದ್ದು ಈಗ ಕಾಂಕ್ರೀಟ್ ಯುಗದಲ್ಲಿ ಪರಿಸರ ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಲಿ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.

ಮಾಗಡಿ: ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದ್ದು ಈಗ ಕಾಂಕ್ರೀಟ್ ಯುಗದಲ್ಲಿ ಪರಿಸರ ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಲಿ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.

ತಾಲೂಕಿನ ತಿಪ್ಪಸಂದ್ರ ಹೋಬಳಿಯ ಹುಳ್ಳೆನಹಳ್ಳಿ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂಡಿತ್ ದೀನದಯಾಳು ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ರಾಜಕೀಯ ಹೊರತಾಗಿ ಸಾಮಾಜಿಕ ಸೇವೆಗಳನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು ದೀನ್ ದಯಾಳ್ ರವರ ಜನ್ಮದಿನದ ಅಂಗವಾಗಿ ಪರಿಸರ ಸಂರಕ್ಷಣೆ ದಿನವನ್ನಾಗಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು ಯುವಕರು ಪರಿಸರದ ಕಾಳಜಿಯನ್ನು ವಹಿಸಿದರೆ ಪರಿಸರ ಸಮತೋಲನಕ್ಕೆ ಬಂದು ಕಾಲಕಾಲಕ್ಕೆ ಮಳೆ ಬೆಳೆ ಚೆನ್ನಾಗಿ ಆಗಲಿದೆ ಈ ಕಾರ್ಯಕ್ರಮ ಆಯೋಜಿಸಿರುವ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.

ಸೋಲೂರು ಮಾಗಡಿಯ ಅಂಗವಾಗಿದೆ : ಸೋಲೂರು ಹೋಬಳಿಯನ್ನು ಏಕಾಏಕಿ ನೆಲಮಂಗಲ ತಾಲೂಕಿಗೆ ಸೇರಿಸುವ ಆತುರವನ್ನು ಅಲ್ಲಿನ ಶಾಸಕರಾದ ಎನ್. ಶ್ರೀನಿವಾಸ್ ರವರು ಮಾಡಿದ್ದಾರೆ ಮುಂದೆ ಅವರಿಗೆ ಹೋಬಳಿಯ ಜನ ತಕ್ಕ ಉತ್ತರ ಕೊಡಲಿದ್ದಾರೆ ಸೋಲೂರು ಸಿದ್ದಪ್ಪನಂತಹ ಶಾಸಕರು ಆಯ್ಕೆಯಾಗಿರುವ ಹೋಬಳಿಯು ಮಾಗಡಿ ತಾಲ್ಲೂಕಿಗೆ ಸೇರಿದ್ದು ಮುಂದೆ ವಿಧಾನಸಭಾ ಕ್ಷೇತ್ರ ಮರವಿಂಗಡಣೆಯಾದಾಗ ಸೋಲೂರು ಹೋಬಳಿ ಮಾಗಡಿಗೆ ಸೇರುತ್ತದೆ ಇಷ್ಟು ಆತರ ಏಕೆ ಪಡುತ್ತಿದ್ದಾರೆ ಇಲ್ಲಿ ಕೇಳಬೇಕಾದ ನಾಯಕರು ಮೌನ ವಹಿಸಿದ್ದಾರೆ ಎಂದು ಶಾಸಕ ಬಾಲಕೃಷ್ಣ ವಿರುದ್ಧ ಅಶ್ವಥ್ ನಾರಾಯಣ್ ಕಿಡಿಕಾರಿದರು.

ಡಾ. ಶಿವಕುಮಾರ ಸ್ವಾಮೀಜಿ ಪ್ರತಿಮೆ ಕಾಮಗಾರಿಗೆ ವೇಗ ಕೊಡಿ : ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಗಳು ಹುಟ್ಟುರಾದ ವೀರಪುರ ಗ್ರಾಮದಲ್ಲಿ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ಕೊಡಲಾಯಿತು ಅಲ್ಲಿಂದ ಇಲಿಯವರೆಗೂ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಸಿದ್ದರಾಮಯ್ಯನವರ ಸರ್ಕಾರ ಕಾಮಗಾರಿಗೆ ವೇಗ ನೀಡಿ ಶ್ರೀಗಳಿಗೆ ಗೌರವರ ಕೊಡುವ ಕೆಲಸ ಆಗಬೇಕಿದೆ ವೀರಪುರ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರು ಕೂಡ ಅನುದಾನ ಬಿಡುಗಡೆ ಮಾಡಿದ್ದರು ಅಶ್ವಥ್ ನಾರಾಯಣ್ ತಿಳಿಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಜಗನ್ನಾಥ ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಸಾಮೂಹಿಕವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡುವ ಮೂಲಕ ಪರಿಸರಕ್ಕೆ ನಾವು ಕೂಡ ಕೊಡುಗೆಯನ್ನು ನೀಡುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ಮುಖಂಡರಾದ ಪ್ರಸಾದ ಗೌಡರು, ಜಗನಾಥ್ ಗೌಡ, ಸ್ವಾಮಿ, ಶ್ರೀಧರ್, ಹುಳ್ಳೇನಹಳ್ಳಿ ಮಂಜು, ಕುಮಾರಸ್ವಾಮಿ, ಹನುಮಂತೇಗೌಡ, ಚಿಕ್ಕಣ್ಣ, ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.