ಹೋರಿ ಹಬ್ಬದ ಕಿಂಗ್ ಎಂದೇ ಪ್ರಸಿದ್ಧಿ ಪಡೆದು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ತಾಲೂಕಿನ ಕರ್ಜಗಿ ಗ್ರಾಮದ ಕರ್ಜಗಿ ಓಂ (112) ಹೆಸರಿನ ಕೊಬ್ಬರಿ ಹೋರಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಅಭಿಮಾನಿಗಳು ಕಂಬನಿ ಮಿಡಿದರು.

ಹಾವೇರಿ: ಹೋರಿ ಹಬ್ಬದ ಕಿಂಗ್ ಎಂದೇ ಪ್ರಸಿದ್ಧಿ ಪಡೆದು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ತಾಲೂಕಿನ ಕರ್ಜಗಿ ಗ್ರಾಮದ ಕರ್ಜಗಿ ಓಂ (112) ಹೆಸರಿನ ಕೊಬ್ಬರಿ ಹೋರಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಅಭಿಮಾನಿಗಳು ಕಂಬನಿ ಮಿಡಿದರು. ಗ್ರಾಮದ ಜಗದೀಶ ನಾಗಪ್ಪ ಮಾನೆಗಾರ ಎಂಬ ಯುವಕ ಸಾಕಿದ್ದ ಈ ಹೋರಿ ನಾಲ್ಕು ದಿನಗಳ ಹಿಂದಷ್ಟೇ ಬಂಕಾಪುರದ ಹಬ್ಬವನ್ನು ಮುಗಿಸಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಸಾಕಷ್ಟು ಚಿಕಿತ್ಸೆ ಕೊಡಿಸಿದರೂ ಶುಕ್ರವಾರ ಬೆಳಗ್ಗೆ ಮೃತಪಟ್ಟಿತು. ಹೋರಿ ಮೃತಪಟ್ಟ ಸುದ್ದಿಯನ್ನು ಕೇಳಿ ಆತನ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದರು. ಅಂತಿಮ ಯಾತ್ರೆ ನಡೆಸಿ ಜನರು ಶೋಕ ವ್ಯಕ್ತಪಡಿಸಿದರು. ಓಂ ಹೋರಿಯ ಸಾಧನೆ ಸ್ಮರಿಸಿ ಭಾವಪೂರ್ಣ ವಿದಾಯ ಸಲ್ಲಿಸಿದರು. ಕಳೆದ ನಾಲ್ಕು ವರ್ಷಗಳಿಂದ ವಿವಿಧ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿ, ಅಭಿಮಾನಿಗಳು ಆರಾಧ್ಯ ದೈವ ಎನಿಸಿಕೊಂಡಿತ್ತು ಈ ಹೋರಿ. ಹೋರಿ ಹಬ್ಬದ ಅಖಾಡದಲ್ಲಿ ಲಕ್ಷಾಂತರ ಪೈಲ್ವಾನರ ಮಧ್ಯ ಮಿಂಚಿನಂತೆ ಓಡಿ ದಿಕ್ಕು ತಪ್ಪಿಸುತ್ತಿದ್ದ ಕರ್ಜಗಿ ಓಂ ಕೊಬ್ಬರಿ ಹೋರಿ ಈಗ ಓಟ ನಿಲ್ಲಿಸಿ ಚಿರನಿದ್ರೆಗೆ ಜಾರಿದೆ. ಓಂ ಕೊಬ್ಬರಿ ಹೋರಿಯ ಪಾರ್ಥಿವ ಶರೀರವನ್ನು ಗ್ರಾಮದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಮೆರವಣಿಗೆ ಮಾಡಿ ದುಃಖದಿಂದ ಕಣ್ಣೀರಿನ ವಿದಾಯ ಹೇಳಿದ್ದಾರೆ.ಹೋರಿ ಓಟದ ಅಖಾಡದಲ್ಲಿ ತಾನು ಹೆದರುವ ಬದಲಾಗಿ ಸುತ್ತಲೂ ನೆರೆದಿರುವ ಪೈಲ್ವಾನರನ್ನು ಬೆದರಿಸಿ ಗುರಿ ತಲುಪುತ್ತಿದ್ದ. ಈತನನ್ನು ಮುಟ್ಟಬೇಕೆಂದರೆ ಎಂಟೆದೆ ಬೇಕಿತ್ತು. ಮುಟ್ಟಿದರೂ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇರುತ್ತಿರಲಿಲ್ಲ. ಅನೇಕ ಪೈಲ್ವಾನರು ಹಿಡಿದು ನಿಲ್ಲಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದರು. ಆದರೂ ಯಾರ ಕೈಗೆ ಸಿಗದೆ ಮುನ್ನುಗ್ಗುವ ತಾಕತ್ತು ಹೋರಿದಾಗಿತ್ತು. ನಾಲ್ಕು ವರ್ಷಗಳ ಕಾಲ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿ ಅಭಿಮಾನಿಗಳು ಆರಾಧ್ಯ ದೈವ ಎನಿಸಿಕೊಂಡಿದ್ದ ಎಂದು ಹೋರಿ ಮಾಲೀಕ ಜಗದೀಶ ಮಾನೆಗಾರ