ಸಾರಾಂಶ
29ರಂದು ವಧುವರರ ಅನ್ವೇಷಣಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಬರುವ ಆಸಕ್ತರು ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ ಪ್ರತಿ ಮತ್ತು ಪೂರ್ಣ ಪ್ರಮಾಣದ ಭಾವಚಿತ್ರ ನೀಡಿ ನೋಂದಾಯಿಸಬೇಕು.
ಮೂಲ್ಕಿ: ಮೂಲ್ಕಿಯ ಗೇರುಕಟ್ಟೆಯ ಮುಂಡಾಳ ಸಮಾಜದ ವತಿಯಿಂದ ವಧು ವರರ ಅನ್ವೇಷಣಾ ಕಾರ್ಯಕ್ರಮವು ಡಿ.29ರಂದು ಗೇರುಕಟ್ಟೆಯಲ್ಲಿನ ಸಮಾಜದ ಸಂಘದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸಚ್ಚಿದಾನಂದ ತಿಳಿಸಿದರು.
ಗೇರುಕಟ್ಟೆ ಮುಂಡಾಲ ಸಮಾಜದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 29ರಂದು ವಧುವರರ ಅನ್ವೇಷಣಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಬರುವ ಆಸಕ್ತರು ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ ಪ್ರತಿ ಮತ್ತು ಪೂರ್ಣ ಪ್ರಮಾಣದ ಭಾವಚಿತ್ರ ನೀಡಿ ನೋಂದಾಯಿಸಬೇಕು. ಕಾರ್ಯಕ್ರಮದ ಬಳಿಕ ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮದ ಮಾಹಿತಿಗಾಗಿ ಸಂಘದ ಕಚೇರಿ ತೆರೆದಿರುತ್ತದೆ. ಮುಂಡಾಳ ಸಮಾಜದ ಹೆಚ್ಚಿನ ಆಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7338161589, 9663760630 ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಮಾಬಿಯಾನ್, ಮಾಜಿ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಬಿ., ಸದಸ್ಯ ಶಯನ್ ಕುಮಾರ್ ಮತ್ತಿತರರು ಹಾಜರಿದ್ದರು.