ಯೋಗ, ಧ್ಯಾನದಿಂದ ಮಾನಸಿಕ ನೆಮ್ಮದಿ ಹೊಂದಬೇಕು: ನ್ಯಾ.ವಿಶ್ವನಾಥ ಮೂಗತಿ

| Published : Oct 24 2024, 12:45 AM IST

ಯೋಗ, ಧ್ಯಾನದಿಂದ ಮಾನಸಿಕ ನೆಮ್ಮದಿ ಹೊಂದಬೇಕು: ನ್ಯಾ.ವಿಶ್ವನಾಥ ಮೂಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯರು ಎಷ್ಟೇ ಸದೃಢ ಕಾಯ ಹೊಂದಿದ್ದರೂ, ಮಾನಸಿಕ ಆರೋಗ್ಯ ಕೆಡಿಸಿಕೊಂಡು ಅನಾರೋಗ್ಯವಂತರಾಗಿ ಜೀವಿಸುತ್ತಿರುತ್ತಾರೆ. ಮಾನಸಿಕ ನೆಮ್ಮದಿಗಾಗಿ ಪ್ರತಿದಿನವು ಧ್ಯಾನ, ಯೋಗ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ವಿಶ್ವನಾಥ ವಿ. ಮೂಗತಿ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಮನುಷ್ಯರು ಎಷ್ಟೇ ಸದೃಢ ಕಾಯ ಹೊಂದಿದ್ದರೂ, ಮಾನಸಿಕ ಆರೋಗ್ಯ ಕೆಡಿಸಿಕೊಂಡು ಅನಾರೋಗ್ಯವಂತರಾಗಿ ಜೀವಿಸುತ್ತಿರುತ್ತಾರೆ. ಮಾನಸಿಕ ನೆಮ್ಮದಿಗಾಗಿ ಪ್ರತಿದಿನವು ಧ್ಯಾನ, ಯೋಗ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ವಿಶ್ವನಾಥ ವಿ. ಮೂಗತಿ ಹೇಳಿದರು.

ಬುಧವಾರ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ತಾಲೂಕು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆ ಸಮಾರಂಭ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಯಾವುದೇ ಸ್ಥಾನ-ಮಾನ ಹೊಂದಿರಲಿ, ಬಡವ ಬಲ್ಲಿದರೇ ಆಗಿರಲಿ. ಎಲ್ಲರಲ್ಲೂ ಮಾನಸಿಕ ಸ್ಥಿತಿ ಉತ್ತಮವಾಗಿರಬೇಕು. ಹಾಗಿದ್ದಾಗ ಸಂತೋಷಕರ ಜೀವನ ನಡೆಸಬಹುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ರಾಜಪ್ಪ ವಹಿಸಿ ಮಾತನಾಡಿ, ಜೀವಿತದಲ್ಲಿ ಎಂತಹ ಕಠಿಣ ಸಮಸ್ಯೆಗಳು ಬಂದರೂ ಧೃತಿಗೆಡದೆ ಮನಶಾಂತಿ ಕೆಡಿಸಿಕೊಳ್ಳದೇ, ಹೆಚ್ಚು ಅಲೋಚಿಸದೇ ಮಾನಸಿಕ ನೆಮ್ಮದಿ ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಮಾನಸಿಕ ಆರೋಗ್ಯ ಕುರಿತು ವಕೀಲ ಸಿ.ತಿಪ್ಪೇಶ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಮಕ್ಕಳ ತಜ್ಞ ವೈದ್ಯ ಡಾ.ಅಶೋಕ್, ಹಿರಿಯ ಆರೋಗ್ಯ ನಿರೀಕ್ಷಕ ಟಿ.ಲೋಕೇಶಪ್ಪ, ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ಜಗದೀಶ್, ಖಜಾಂಚಿ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

- - - -23ಕೆಸಿಎನ್‌ಜಿ1:

ಮಾನಸಿಕ ಆರೋಗ್ಯ ದಿನ ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ವಿಶ್ವನಾಥ ವಿ.ಮೂಗತಿ ಮಾತನಾಡಿದರು.