ಸಾರಾಂಶ
ಕಿಡಿಗೇಡಿಗಳು ಪಾಕ್ ಪರ, ಮತ್ತು ಮೋದಿ ವಿರುದ್ಧ ಹಾಗೂ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ಘಟನೆ ಯಾದಗಿರಿ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಬೆಂಗಳೂರು : ಪಾಕ್ ವಿರುದ್ಧ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಇಡೀ ಭಾರತ ಸಂಭ್ರಮಿಸಿತ್ತಿದೆ. ಆದರೆ ಕೆಲವು ಕಿಡಿಗೇಡಿಗಳು ಪಾಕ್ ಪರ, ಮತ್ತು ಮೋದಿ ವಿರುದ್ಧ ಹಾಗೂ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ಘಟನೆ ಯಾದಗಿರಿ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ವೇಳೆ ಬೆಂಗಳೂರಿನಲ್ಲಿ ಮನೆ ಬಾಲ್ಕನಿ ಮೇಲೆ ನಿಂತು ಪಾಕಿಸ್ತಾನ ಪರ ಘೋಷಣೆ ಕೂಗಿ ಕುಚೋದ್ಯತನ ತೋರಿದ ಆರೋಪದ ಮೇರೆಗೆ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ, ಛತ್ತೀಸ್‌ಘಡ ಮೂಲದ ಶುಭಾಂನ್ಷು ಶುಕ್ಲಾ ಎಂಬಾತನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘೋಷಣೆಯನ್ನು ಕೇಳಿಸಿಕೊಂಡ ಎದುರಿನ ಹಾಸ್ಟೆಲ್‌ನ ಯುವಕ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ) ಅಧ್ಯಕ್ಷ ಅಮಳ ರಾಮಚಂದ್ರ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಬರೆದು, ಅವರನ್ನು ಅಣುಕಿಸುವ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ರಾಮಚಂದ್ರ ಅವರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪೊಲೀಸರಿಗೆ ದೂರು ನೀಡಿದೆ.
ಇನ್ನೂ ಯಾದಗಿರಿಯಲ್ಲಿ ಜಾಫರ್ ಖಾನ್ ಎಂಬ ಯುವಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನ್ಯ ಧರ್ಮದ ಬಗ್ಗೆ ದ್ವೇಷ ಹುಟ್ಟಿಸುವ ವಿಡಿಯೋ ಪೊಸ್ಟ್ ಮಾಡಿದ್ದಾನೆ. ಕಲ್ಮಾ ಜೊತೆ ಪ್ರತಿಕಾರ ತೆಗೆದುಕೊಂಡ್ರೆ ಜೀವ ತೆಗೆಯಲು ಸಿದ್ಧ..! ನಮ್ಮವರೇ ಆದರೇನು, ಬೇರೆಯವರು ಆದರೇನು, ಜಗತ್ತಿನಲ್ಲಿ ಯಾರ ಜೊತೆ ಪ್ರತಿಕಾರ ತೆಗೆದುಕೊಳ್ಳಿ ಆದರೆ, ಕಲ್ಮಾ ಜೊತೆ ಅಲ್ಲ. ಇದಕೊಸ್ಕರ ನಾವು ಜೀವ ಕೊಡೊಕು ರೆಡಿ, ಜೀವ ತೆಗೆಯೊಕು ರೆಡಿ ಎಂದು ದ್ವೇಷದ ವಿಡಿಯೋವನ್ನು ಹರಿಬಿಟ್ಟು ಮುಸ್ಲಿಂ ಯುವಕ ಉದ್ಧಟತನ ಮರೆದಿದ್ದಾನೆ. ಈ ಸಂಬಂಧ ಯುವಕ ಜಾಫರ್ ಖಾನ್‌ನನ್ನು ಯಾದಗಿರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.