ಮುಖ್ಯ..ಕಡಿಮೆ ಅಂಕ ಪಡೆದ ಮಕ್ಕಳನ್ನು ಹೀಯಾಳಿಸಬೇಡಿ

| Published : Feb 02 2025, 11:47 PM IST

ಮುಖ್ಯ..ಕಡಿಮೆ ಅಂಕ ಪಡೆದ ಮಕ್ಕಳನ್ನು ಹೀಯಾಳಿಸಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೋ›ತ್ಸಾಹ ಪ್ರೇರಣೆ ನೀಡುವ ಕರ್ತವ್ಯ ಪಾಲಕರು ಮತ್ತು ಶಿಕ್ಷಕರದ್ದಾದರೆ, ಸತತ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ನಡೆಸುವುದು ವಿದ್ಯಾರ್ಥಿಗಳ ಕರ್ತವ್ಯ

ಕನ್ನಡಪ್ರಭ ವಾರ್ತೆ ಹುಣಸೂರು

ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಲು ತಮ್ಮ ಜೀವನದಲ್ಲಿ ಐದು ಮುಖ್ಯ ಗುಣಗಳನ್ನು (5ಸಿ)ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ರಾಜ್ಯಸರ್ಕಾರ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪುರಸ್ಕೃತ ಎ.ರಾಮೇಗೌಡ ಕಿವಿಮಾತು ಹೇಳಿದರು.ತಾಲೂಕಿನ ಗಾವಡಗೆರೆ ಹೋಬಳಿ ಬಿಳಿಗೆರೆ ಗ್ರಾಮದ ಅನ್ವೇಷಣಾ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಆಶೀರ್ವಾದ-2025 ಪಾದಪೂಜಾ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೋ›ತ್ಸಾಹ ಪ್ರೇರಣೆ ನೀಡುವ ಕರ್ತವ್ಯ ಪಾಲಕರು ಮತ್ತು ಶಿಕ್ಷಕರದ್ದಾದರೆ, ಸತತ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ನಡೆಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.ಐದು ‘ಸಿ’ಗಳು ನಿಮ್ಮದಾಗಲಿ: ಪರೀಕ್ಷೆಯನ್ನು ಎದುರಿಸುವ ಕುರಿತಂತೆ ಭಯ ಬಿಡಿ. ಪರೀಕ್ಷೆಯೇ ನಿಮ್ಮನ್ನು ನೋಡಿ ಹೆದರಬೇಕು ಎನ್ನುವಷ್ಟರಮಟ್ಟಿಗೆ ನೀವು ಅಭ್ಯಾಸ ನಡೆಸಬೇಕು. ಸಾಧಿಸುವ ಛಲ ನಿಮ್ಮದಾದರೆ ಸಾಧನೆ ಸುಲಭ. ಅದಕ್ಕಾಗಿ ನಿಮ್ಮ ಗುರಿಯ ಕುರಿತು ಸ್ಪಷ್ಟತೆ(ಕ್ಲಾರಿಟಿ)ಇರಲಿ. ಗುರಿ ಸಾಧಿಸುವ ಬದ್ಧತೆ(ಕಮೀಟ್​ವೆುಂಟ್) ಇಟ್ಟುಕೊಳ್ಳಿ. ಸಾಧಿಸುವೆ ಎನ್ನುವ ಆತ್ಮವಿಶ್ವಾಸ (ಕಾನ್ಪಿಡೆಂನ್ಸ್) ರೂಪಿಸಿಕೊಳ್ಳಿ. ವ್ಯಾಸಂಗದಲ್ಲಿ ಏಕಾಗ್ರತೆ (ಕಾನ್​ಸೆಂಟ್ರೇಷನ್)ಯನ್ನು ಉಳಿಸಿಕೊಳ್ಳುವದರ ಜತೆಗೆಗೆ ನಿಮ್ಮ ಸನ್ನಡತೆ (ಕ್ಯಾರಕ್ಟರ್)ಯೇ ನಿಮ್ಮನ್ನು ಸಾಧನೆಯ ಶಿಖರದತ್ತ ಕರೆದೊಯ್ಯಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಂಕ ಗಳಿಸುವಲ್ಲಿ ವ್ಯತ್ಯಯವಾದಲ್ಲಿ ಪಾಲಕರು ಮಕ್ಕಳನ್ನು ಹೀಯಾಳಿಸುವ, ತೆಗಳುವ ಪ್ರವೃತ್ತಿಯನ್ನು ತೊರೆದು ಇನ್ನಷ್ಟು ಪೋ›ತ್ಸಾಹ ತುಂಬಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಮಾತನಾಡಿ, ನಮ್ಮ ದೇಶ ವೈವಿಧ್ಯಮಯ ಸಂಪ್ರದಾಯ, ಆಚರಣೆ, ಸಂಸ್ಕೃತಿಗಳಿಂದ ಸಮ್ಮಿಳಿತವಾಗಿದೆ. ಆಚರಣೆ, ಸಂಪ್ರದಾಯಗಳ ಹೆಸರಿನಲ್ಲಿ ಮೂಢನಂಬಿಕೆಗಳು, ಕಂದಾಚಾರಗಳನ್ನು ಆಚರಿಸುವ ಮೂಲಕ ಸಂಪ್ರದಾಯಗಳ ಅತಿರೇಕವನ್ನು ಕಾಣುತ್ತಿದ್ದೇವೆ. ಆಚರಣೆಗಳನ್ನು ಶ್ರೇಷ್ಠ ಮಟ್ಟದಲ್ಲಿ ಕಾಯ್ದುಕೊಳ್ಳಬೇಕೆಂದರೆ ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ, ವೈಜ್ಞಾನಿಕ ತಳಹದಿ ಮೇಲೆ ಆಚರಣೆಗಳನ್ನು ಕಾಪಿಟ್ಟುಕೊಂಡರೆ ಆಚರಣೆಗಳಿಗೂ ಶ್ರೇಷ್ಠತೆ ಬರುತ್ತದೆ. ಆಚರಿಸುವ ನಮಗೂ ಉನ್ನತ ಸ್ಥಾನಮಾನ ಸಿಗಲು ಸಾಧ್ಯ ಎಂದರು.ಆಚರಣೆಯ ಹೆಸರಿನಲ್ಲಿ ಕಂದಾಚಾರಗಳನ್ನು ಅನುಸರಿಸುವುದನ್ನು ಇನ್ನಾದರೂ ದೂರವಿಟ್ಟು, ಸತ್ಸಂಪ್ರದಾಯದ ಆಚರಣೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು. ಮನರಂಜನೆ ಮನಸು ಕೆರಳಿಸದಿರಲಿ: ಮನರಂಜನೆ ಎನ್ನುವುದು ಮನಸನ್ನು ಅರಳಿಸುವ, ಉಲ್ಲಸಿತಗೊಳಿಸುವ ಕಾರ್ಯವಾಗಿದೆ. ಆದರೆ ಇಂದು ಮನರಂಜನೆ ಹೆಸರಿನಲ್ಲಿ ಮನಸನ್ನು ಕೆರಳಿಸುವ, ಪ್ರಚೋದಿಸುವ ವೇದಿಕೆಯಾಗಿ ಪರಿವರ್ತಿತವಾಗಿದೆ. ಈ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನಗಳು ಆಗುತ್ತಿವೆ. ಇದಕ್ಕೆ ಆಸ್ಪದ ಕೊಡಬಾರದು. ಮನರಂಜನೆ ಎಂದರೆ ಪರಿಶುದ್ಧ ಆರೋಗ್ಯಕರ ಮನರಂಜನೆಯನ್ನೇ ನಾವು ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲ ಮನಸುಗಳು ವಿಕಸಿತಗೊಳಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಸಂಸ್ಥಾಪಕ ನಂಜುಂಡಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕೃಷಿ ಇಲಾಖೆ ನಿವೃತ್ತ ಸೆಕ್ಯೂರಿಟಿ ನಿರ್ದೇಶಕ ಮತ್ತು ವಿದ್ಯಾಸಂಸ್ಥೆ ಸಂಸ್ಥಾಪಕ ಎಚ್.ಕೆ.ಚಂದ್ರಮೋಹನ್ ಮಾತನಾಡಿದರು. ಪ್ರಾಂಶುಪಾಲ ಎಚ್.ಎನ್.ಗಿರೀಶ್, ಉಪ ಪ್ರಾಂಶುಪಾಲೆ ಆಶಾ ನಂದೀಶ್, ಕಾರ್ಯದರ್ಶಿ ಎಚ್.ಪಿ.ಪ್ರಶಾಂತ್, ಖಜಾಂಚಿ ಸುಪ್ರಿಯಾ ಪ್ರಶಾಂತ್ ಸೇರಿದಂತೆ ಸಂಸ್ಥೆಯ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಹುಣಸೂರು ತಾಲೂಕು ಬಿಳಿಗೆರೆ ಅನ್ವೇಷಣಾ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಎ.ರಾಮೇಗೌಡ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ವಿದ್ಯಾಸಂಸ್ಥೆಯ ನಂಜುಂಡಶೆಟ್ಟಿ, ಎಚ್.ಕೆ.ಚಂದ್ರಮೋಹನ್, ಸುಪ್ರಿಯಾ ಪ್ರಶಾಂತ್,ಎಚ್.ಪಿ.ಪ್ರಶಾಂಂತ್, ಎಚ್.ಎನ್.ಗಿರೀಶ್, ಆಶಾ ನಂದೀಶ್ ಇದ್ದರು..