ಸಾರಾಂಶ
೪೦೦ ವರ್ಷಗಳ ಪುರಾತನದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮಹಾಲಿಂಗೇಶ್ವರನ ಹಾಗೂ ಪರಿವಾರ ದೇವರ ಗುಡಿಗಳು ಪುನಃ ನಿರ್ಮಾಣ ಮಾಡಬೇಕಾಗಿದೆ. ಸುಮಾರು ೧೦ ಕೋಟಿಯ ಯೋಜನೆ ಮಾಡಲಾಗಿದೆ ಜೀರ್ಣೋದ್ಧಾರ ಪ್ರಕ್ರಿಯೆ ಪೂರಕವಾಗಿ ದೇವಸ್ಥಾನದಲ್ಲಿ ಪರಿವಾರ ದೇವರ ಸಂಕೋಚ ಹೋಮ ಹವನಗಳು ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಾರಣಿಕ ಕ್ಷೇತ್ರ ಕವತ್ತಾರು ಅಲಡೆಯ ಭಕ್ತರಿಂದ ಕೆಲಸ ಕಾರ್ಯಗಳು ನಡೆಯಲಿದ್ದು, ಆರಂಭಿಸುವ ಕೆಲಸ ಸಿರಿಯ ಪ್ರೇರಣೆಯಂತೆ ನಡೆಯುತ್ತದೆ ಎಂದು ಕವತ್ತಾರು ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿರಾರ್ ಶಂಕರ ಶೆಟ್ಟಿ ಹೇಳಿದರು.ಕವತ್ತಾರು ಸಿರಿ ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಆದಿ ಆಲಡೆ ಶ್ರೀ ದೇವಳದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಳಕುಂಜ ಗುತ್ತು ಮಲ್ಲಿಕಾ ಯಶವಂತ ಶೆಟ್ಟಿ ಅಧ್ಯಕ್ಷತೆಯಲ್ಲಿ ಅಜಿಲರ ಮನೆಯಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುರಾಜ ಭಟ್ ಮಾಹಿತಿ ನೀಡಿ, ೪೦೦ ವರ್ಷಗಳ ಪುರಾತನದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮಹಾಲಿಂಗೇಶ್ವರನ ಹಾಗೂ ಪರಿವಾರ ದೇವರ ಗುಡಿಗಳು ಪುನಃ ನಿರ್ಮಾಣ ಮಾಡಬೇಕಾಗಿದೆ. ಸುಮಾರು ೧೦ ಕೋಟಿಯ ಯೋಜನೆ ಮಾಡಲಾಗಿದೆ ಜೀರ್ಣೋದ್ಧಾರ ಪ್ರಕ್ರಿಯೆ ಪೂರಕವಾಗಿ ದೇವಸ್ಥಾನದಲ್ಲಿ ಪರಿವಾರ ದೇವರ ಸಂಕೋಚ ಹೋಮ ಹವನಗಳು ನಡೆಯಲಿದೆ ಎಂದು ಹೇಳಿದರು.ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ನೀನಾ ನಿತ್ಯಾನಂದ ಅಜಿಲರು ಮಾರ್ಗಸೂಚಿಗಳನ್ನು ತಿಳಿಸಿದರು. ಪುತ್ತೂರುಬಾವ ಮೋಹನ್ ಶೆಟ್ಟಿ, ಅಶೋಕ್ ಶೆಟ್ಟಿ, ಸಮಿತಿ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಬಳ್ಕುಂಜೆ ಮತ್ತಿತರರು ಉಪಸ್ಥಿತರಿದ್ದರು. ದಿನಕರ ಶೆಟ್ಟಿ ಬಳ್ಕುಂಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಅಜಿಲ ವಂದಿಸಿದರು.