ಬಾಟಂ..ಆರ್‌ಎಸ್‌ಎಸ್‌ ಶತಾಬ್ದಿ ಅಂಗವಾಗಿ ಪಥ ಸಂಚಲನ

| Published : Oct 21 2024, 12:32 AM IST

ಬಾಟಂ..ಆರ್‌ಎಸ್‌ಎಸ್‌ ಶತಾಬ್ದಿ ಅಂಗವಾಗಿ ಪಥ ಸಂಚಲನ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಸೇವೆಗೆ ಜಾತಿ ಭೇದ ಮೇಲು ಕೀಳುಗಳನ್ನು ತೊಡೆದು ಭಾರತದ ಏಳಿಗೆಗಾಗಿ ಎಲ್ಲರೂ ಸಂಘಟಿತರಾಗಬೇಕು

ಕನ್ನಡಪ್ರಭ ವಾರ್ತೆ ಸರಗೂರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ಸಂಘ ಪ್ರಾರಂಭವಾದ ದಿವಸ ವಿಜಯದಶಮಿ. ಇದರ ನಿಮಿತ್ತ ವಿಜಯದಶಮಿ ಉತ್ಸವ ಹಾಗೂ ಪಥ ಸಂಚಲನದಲ್ಲಿ ತಾಲೂಕಿನ ಎಲ್ಲಾ ಕಾರ್ಯಕರ್ತರು ಹಾಗೂ ಹಿತೈಷಿಗಳೊಡನೆ ನೆರವೇರಿತು.

ಪಟ್ಟಣದ ಶ್ರೀ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರಗೂರು ತಾಲೂಕು ಹಾಗೂ ಎಚ್‌.ಡಿ. ಕೋಟೆ ತಾಲೂಕು ಸಮ್ಮುಖದಲ್ಲಿ ಸಂಘ ಚಾಲಕ್ ಶ್ರೀವತ್ಸ, ಕರ್ನಾಟಕ ದಕ್ಷಿಣ ಪ್ರಾಂತ ಕಾಲೇಜು ವಿದ್ಯಾರ್ಥಿ ಪ್ರಮುಖ ಮುಖ್ಯ ಭಾಷಣಕಾರ ಉಮೇಶ್ ಹಾಗೂ ತಾಲೂಕಿನ ಎಲ್ಲಾ ಸ್ವಯಂ ಸೇವಕರು, ಸಂಘದ ಹಿತೈಷಿಗಳು ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉಮೇಶ್ ಅವರು ಸಂಘ ಪ್ರಾರಂಭವಾದ ಹಿನ್ನೆಲೆ ಕುರಿತು ಮಾತನಾಡಿ, ದೇಶದ ಅತಿ ದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಲ್ಲಾ ಗ್ರಾಮದ ಮನೆಗಳಿಗೆ ಸಂಘದ ವಿಚಾರ ಹಾಗೂ ದೇಶ ಸೇವೆಗೆ ಜಾತಿ ಭೇದ ಮೇಲು ಕೀಳುಗಳನ್ನು ತೊಡೆದು ಭಾರತದ ಏಳಿಗೆಗಾಗಿ ಎಲ್ಲರೂ ಸಂಘಟಿತರಾಗಬೇಕು ಎಂದರು.

ಸಂಘದ ನೂರನೇ ವರ್ಷದ ಪ್ರಯುಕ್ತ ಪಂಚ ಪರಿವರ್ತನೆಯ ನೂತನ ಕಾರ್ಯವನ್ನು ಪಂಚಬಿಂದುಗಳಾದ ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಜಾಗರಣ ಹಾಗೂ ನಾಗರೀಕ ಶಿಷ್ಟಾಚಾರ ಈ ವಿಷಯಗಳನ್ನು ಸಮಾಜದೊಳಗೆ ಎಲ್ಲರೂ ಒಗ್ಗಟ್ಟಾಗಿ ಸೇರಿ ಕಾರ್ಯ ನಿರ್ವಹಿಸಬೇಕು ಹಾಗೂ ದೇಶವನ್ನು ಪರಮ ವೈಭವಕ್ಕೆ ಕೊಂಡೊಯ್ಯುವಲ್ಲಿ ನಾವೆಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಇದಕ್ಕಾಗಿ ತಮ್ಮ ಸಮಯ ಸಮರ್ಪಿಸಬೇಕು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಯಿತು. ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಿಂದ ಹೊರಟ ಮೆರವಣಿಗೆಯು ನರಸಿಂಹಸ್ವಾಮಿ ದೇವಸ್ಥಾನದ ರಸ್ತೆ, ಒಂದನೆ ಮುಖ್ಯರಸ್ತೆ, ಮಾಸ್ತಮ್ಮ ದೇವಸ್ಥಾನದಿಂದ ಎರಡನೇ ಮುಖ್ಯ ರಸ್ತೆಯ ಮೂಲಕ ಭಗವಧ್ವಜದ ಸಮೇತ ನೂರಾರು ಕಾರ್ಯಕರ್ತರೊಂದಿಗೆ ನಡೆಯಿತು.

ಈ ವೇಳೆ ರಮೇಶ್, ಮೋಹನ್, ರಾಜು, ಶಿವರಾಜು, ನೂರಾಳಸ್ವಾಮಿ, ಶ್ರೀನಾಥ್, ನಾಗರಾಜು, ಮಹೇಶ, ಚೆನ್ನಪ್ಪ, ಹರೀಂದ್ರ, ಪೂರ್ಣೇಶ್, ಗುರುಸ್ವಾಮಿ, ನವೀನ್, ನಾಗೇಶ್, ರವಿ, ಕಿರಣ್, ಮಹದೇವ, ಅಭಿ ಮೊದಲಾದವರು ಇದ್ದರು.