ಕನ್ನಡಪ್ರಭ ವಾರ್ತೆ ಪಾವಗಡ
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 19 ಸಾಧಕರನ್ನು ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ತಹಸೀಲ್ದಾರ್ ವೈ.ರವಿ ಅವರು ಸನ್ಮಾನಿಸಿ ಗೌರವಿಸಿದರು.ಸಾಹಿತ್ಯ ಮತ್ತು ಕನ್ನಡ ಭಾಷೆ ಕ್ಷೇತ್ರದಲ್ಲಿ ಸಾಸಲಕುಂಟೆ ಗ್ರಾಮದ ಎಚ್.ಎರಿಸ್ವಾಮಿ, ವೈದ್ಯಕೀಯ ಕ್ಷೇತ್ರದಲ್ಲಿ ಗೌಡತಿಮ್ಮನಹಳ್ಳಿಯ ನಾಟಿ ವೈದ್ಯರಾದ ಜಿ.ಕೆ.ಈರಪ್ಪ, ಕ್ರೀಡಾ ಕ್ಷೇತ್ರದಲ್ಲಿ ಪಾವಗಡದ ಪಿ.ಎಸ್. ಪಾವನಿ, ಸಮಾಜ ಸೇವಾ ಕ್ಷೇತ್ರದಲ್ಲಿ ಹರಿಹರಪುರದ ಎಚ್. ರಾಮಚಂದ್ರಯ್ಯ, ಪಾವಗಡ ಪಟ್ಟಣದ ಶಿರಾ ರಸ್ತೆ ಯೂನಸ್, ಹೆಲ್ಪ್ ಸೊಸೈಟಿ ಸೇವಾ ಟ್ರಸ್ಟ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಂ.ಶ್ರೀನಿವಾಸಲು ಮತ್ತು ಪೆಮ್ಮನಹಳ್ಳಿ ಟಿ.ಎನ್.ಬೆಟ್ಟದ ರಾಜ್ ಕುಮಾರ್, ಛಾಯಾಗ್ರಹಣ ಕ್ಷೇತ್ರದಲ್ಲಿ ಬಾಲಮ್ಮನಹಳ್ಳಿ ಬಿ.ಬಿ. ಅಮರ್ ನಾಥ್, ಅಮರ್ ಸ್ಟುಡಿಯೋ ಮತ್ತು ಕರಿಯಮ್ಮನಪಾಳ್ಯದ ಜಿ. ಓಂಕಾರಪ್ಪ, ರಂಗಭೂಮಿ ಕ್ಷೇತ್ರದಲ್ಲಿ ಅರಸೀಕೆರೆ ನಿಡಗಲ್ ಹೋಬಳಿ ಬಿ.ಬಿ. ಬಸಪ್ಪ ಮತ್ತು ಸಿದ್ದಾಪುರದ ಎಚ್. ಅಮರನಾಥ್, ಜನಪದ ಕ್ಷೇತ್ರದಲ್ಲಿ ದವಡಬೆಟ್ಟ ಗ್ರಾಮದ ಡಿ.ಬಿ. ಈರಣ್ಣ ಮತ್ತು ಕೋಲಾಟದ ಒಬ್ಬಣ್ಣ ನಾಗರಾಜಪ್ಪ, ರಂಗಸಮುದ್ರ, ತಿಮ್ಮಣ್ಣ ಹಾಗೂ ಸೊಬಾನೆ ಪದದ ತಿಮ್ಮಕ್ಕ, ಬಯಲಾಟ ಕ್ಷೇತ್ರದಲ್ಲಿ ಕನ್ನಮೇಡಿ ಅಂಚೆ, ವೀರ್ಲಗೊಂದಿಯ ಬಡಪ್ಪ, ಸಂಗೀತ ಕ್ಷೇತ್ರದಲ್ಲಿ ಕನ್ನಮೇಡಿ ಗ್ರಾಮದ ಬಿ.ವಿಮಲಾಕ್ಷಿ, ಪೌರಕಾರ್ಮಿಕರಾದ ನರಸಪ್ಪ ಮತ್ತು ಮಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.