ಕನ್ನಡಪ್ರಭ ವಾರ್ತೆ, ತುಮಕೂರುಸರ್ಕಾರಗಳ ನಿರಂತರ ನಿರ್ಲಕ್ಷ್ಯ ಮತ್ತು ಶೋಷಣೆಯ ವಿರುದ್ಧ ಕೆಲಸಗಳನ್ನು ಸ್ಥಗಿತಗೊಳಿಸಿ ಕನಿಷ್ಠ ಕೂಲಿ ಮತ್ತು ಸಾಮಾಜಿಕ ಭದ್ರತೆಗಾಗಿ ಅಂಗನವಾಡಿ ಮತ್ತು ಬಿಸಿಯೂಟ ಸಾವಿರಾರು ನೌಕರರು ನಗರದ ಟೌನ್ ಹಾಲ್ ನಿಂದ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಅನುದಾನ ಕಡಿತದಿಂದಾಗಿ ಅಂಗನವಾಡಿ ವ್ಯವಸ್ಥೆ ಕುಸಿಯುತ್ತಿದ್ದು, 3-6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಶಾಲೆಗಳಲ್ಲಿ ಎಲ್‌ಕೆ.ಜಿ-ಯುಕೆಜಿ ಆರಂಭವನ್ನು ವಿರೋಧಿಸಿದರು. ರಾಜ್ಯ ಸರ್ಕಾರದ ಚುನಾವಣಾ ಭರವಸೆಯಂತೆ ಕಾರ್ಯಕರ್ತೆಯರಿಗೆ 45ನೇ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಕನಿಷ್ಠ ವೇತನ ಕಾರ್ಯಕರ್ತೆಗೆ 41 ಸಾವಿರ, ಸಹಾಯಕಿಯರಿಗೆ 35 ಸಾವಿರ ಮತ್ತು 18 ಸಾವಿರ ಮಾಸಿಕ ಪಿಂಚಣಿ ನೀಡಬೇಕೆಂದು ಪ್ರತಿಭಟನಾಕರರು ಆಗ್ರಹಿಸಿದ್ದಾರೆ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೆ ಎಲ್ ಕೆ ಜಿ, ಯುಕೆಜಿ ವಿಸ್ತರಣೆ, 3-6 ವರ್ಷದ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಆಟಿಕೆಗಳು, ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕೆಂದು ಒತ್ತಾಯಿಸಿದರು. ಪೋಷಣ್ ಟ್ರ್ಯಾ ಕರ್, ಇ-ಕೆವೈಸಿ ಮೂಲಕ ಕಿರುಕುಳ ನಿಲ್ಲಿಸಿ, ಡಿಜಿಟಲ್ ಕೆಲಸಗಳಿಗೆ ಟ್ಯಾಬ್ಲೆಟ್ ಮತ್ತು ಡೇಟಾ ಪ್ಯಾಕ್ ಒದಗಿಸಬೇಕು. ಬಿ.ಎಲ್. ಓ ಸೇರಿದಂತೆ ಇಲಾಖೇತರ ಯಾವುದೇ ಕೆಲಸಗಳಿಂದ ಬಿಡುಗಡೆ ಮಾಡಬೇಕು. ಕೇಂದ್ರಗಳಿಗೆ ಕುಡಿಯುವ ನೀರು, ಅನಿಲ ಸಂಪರ್ಕ, ಆಧುನಿಕ ಸಲಕರಣೆ, ಬಾಡಿಗೆ ಕಟ್ಟಡಗಳಿಗೆ ಮಾರುಕಟ್ಟೆ ದರದ ಬಾಡಿಗೆ, ಸಂಸ್ಕರಿಸಿದ ಆಹಾರ ಬದಲಿಗೆ ಸ್ಥಳೀಯ ತಾಜಾ ಪೌಷ್ಟಿಕ ಆಹಾರ, ಅಂಗನವಾಡಿ ನೌಕರರನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ತರಬೇಕು. ಕಾರ್ಯಕರ್ತೆಯರಿಗೆ ಬಡ್ತಿ ಮೂಲಕ ಮೇಲ್ವಿಚಾರಕ ಹುದ್ದೆ, ಎಎನ್‌ಎಂ , ಶಿಕ್ಷಕ, ಗ್ರಾಮಸೇವಕ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು. 25 ವರ್ಷಗಳ ಅಕ್ಷರ ದಾಸೋಹ ಯೋಜನೆ ಬೆಲೆಏರಿಕೆ ಮತ್ತು ಅನುದಾನದ ಅಭಾವದಿಂದ ಬಲಹೀನಗೊಳ್ಳುತ್ತಿದ್ದು, 2008 ರಿಂದ ವೇತನ ಹೆಚ್ಚಳಮಾಡದೆ, ಬಡ ಮಹಿಳಾ ನೌಕರರು ಶೋಷಣೆಗೆ ಒಳಗಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಆಶ್ವಾಸನೆಯಂತೆ ವೇತನ ಹೆಚ್ಚಳ, 6 ಗಂಟೆ ಕೆಲಸದ ಅವಧಿ, ಆರೋಗ್ಯ ವಿಮೆ, ಮಾಸಿಕ ಪಿಂಚಣಿ, ನಿವೃತ್ತರಿಗೆ ಇಡಿಗಂಟು ಜಾರಿ, ಇಸ್ಕಾನ್/ಮಠಗಳಿಗೆ ಜವಾಬ್ದಾರಿ ವರ್ಗಾವಣೆಯ ಪ್ರಸ್ತಾಪ ಕೈಬಿಟ್ಟು ಕೆಲಸದ ಭದ್ರತೆ, ಸಾಧಿಲ್ವಾರು ಖಾತೆ ಜವಾಬ್ದಾರಿ ಹಿಂಪಡೆಯಬೇಕೆಂದು ಆಗ್ರಹಿಸಿದರು,ಪ್ರತಿ ಶಾಲೆಯಲ್ಲಿ ಸುಸಜ್ಜಿತ ಅಡುಗೆ ಕೇಂದ್ರ, ಕೀಟಮುಕ್ತ ವಾತಾವರಣ, ಕೆಲಸದ ಸ್ಥಳದಲ್ಲಿ ಮರಣ ಸಂಭವಿಸಿದರೆ 25 ಲಕ್ಷ ಪರಿಹಾರ, ಜಾತಿ ಆಧಾರದ ಮೇಲೆ ಬಿಸಿಯೂಟ ನೌಕರರನ್ನು ಕೆಲಸದಿಂದ ವಜಾ ಮಾಡಿದವರ ವಿರುದ್ಧ ಕಾನೂನು ಕ್ರಮ, ಉತ್ತರ ಪ್ರದೇಶ ಮತ್ತು ಪಂಜಾಬ್ ಹೈಕೋರ್ಟ್ ತೀರ್ಮಾನದಂತೆ 12 ತಿಂಗಳು ಕೆಲಸ ಮತ್ತು ಕನಿಷ್ಠ ಕೂಲಿ, ಹಾಗೂ ಅಪಘಾತ/ನಿವೃತ್ತ ಸಿಬ್ಬಂದಿಯ ಕುಟುಂಬಗಳಿಗೆ ಕೆಲಸ ನೀಡಬೇಕೆಂದು ಪ್ರತಿಭಟನಾಕಾರರು ಅಗ್ರಹಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಅಂಗನವಾಡಿ ನೌಕರರ ಸಂಘ ಜಿಲ್ಲಾಧ್ಯಕ್ಷೆ ಜಿ,ಕಮಲ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಖಜಾಂಚಿ ಅನಸೂಯ, ಅಕ್ಷರ ದಾಸೋಹ ನೌಕರ ಸಂಘ ನಾಗರತ್ನಮ್ಮ , ಗಿರಿಜಾ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಯ್ಯ, ಶಿಕ್ಷಣ ಇಲಾಖೆಯ ಅಧಿಕಾರಿ ಸುಧಾಕರ್ ಮನವಿ ಸ್ವಿಕರಿಸಿದರು. ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರ ಸಂಘದ ಗೌರಮ್ಮ, ಜಬಿನಾ, ವನಜಾಕ್ಷಿ, ಅಧಿಲಕ್ಮಿ, ಶಿವಗಂಗಮ್ಮ, ಪಾರ್ವತಮ್ಮ, ಯಶೋಧಮ್ಮ, ಹಾಲಮ್ಮ, ಪ್ರೇಮಾ, ಇಂದ್ರಮ್ಮ, ಸೌಭಾಗ್ಯ, ಗಿರಿಜಾ , ಲೀಲಾ, ಮಮತಾ, ಭಾರತಿ, ಭಾಗ್ಯ, ಅಕ್ಷರ ದಾಸೋಹ ನೌಕರ ಸಂಘ ಮಂಜುಳ, ಮಂಜಮ್ಮ ಮತ್ತಿತರರು ನಾಯಕತ್ವ ವಹಿಸಿದ್ದರು.ಯೋಜನೆ ನೌಕರರಿಗೆ ಕನಿಷ್ಠ ವೇತನ ನೀಡಿ
ಸರ್ಕಾರಗಳ ನಿರಂತರ ನಿರ್ಲಕ್ಷ್ಯ ಮತ್ತು ಶೋಷಣೆಯ ವಿರುದ್ಧ ಕೆಲಸಗಳನ್ನು ಸ್ಥಗಿತಗೊಳಿಸಿ ಕನಿಷ್ಠ ಕೂಲಿ ಮತ್ತು ಸಾಮಾಜಿಕ ಭದ್ರತೆಗಾಗಿ ಅಂಗನವಾಡಿ ಮತ್ತು ಬಿಸಿಯೂಟ ಸಾವಿರಾರು ನೌಕರರು ನಗರದ ಟೌನ್ ಹಾಲ್ ನಿಂದ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.