ಸಾರಾಂಶ
ಒಂದು ಸಾವಿರ ರುಪಾಯಿಗೆ 8 ಶರ್ಟ್, ಸಾವಿರಕ್ಕೆ 4 ಪ್ಯಾಂಟ್, 1 ಸಾವಿರ ರು.ಗೆ ಎರಡು ಜತೆ ಶೂ ಆಫರನ್ನು ಮಾಲೀಕ ನೀಡಿದ್ದಾರೆ
ಕೊಪ್ಪಳ: ನಗರದಲ್ಲಿ ಹೊಸದಾಗಿ ಪ್ರಾರಂಭವಾದ ಅಂಗಡಿ ಆಫರ್‌ಗಾಗಿ ಜನತೆ ಮುಗಿಬಿದ್ದ ಘಟನೆ ಜರುಗಿದೆ. ಜನರ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ಘಟನೆ ಜರುಗಿದೆ.
ನಗರದ ಲೇಬರ್ ಸರ್ಕಲ್‌ನಲ್ಲಿ ಆಫರ್ಸ ಟ್ರೆಂಡ್ಸ್ ಎನ್ನುವ ಬಟ್ಟೆ ಅಂಗಡಿ ಆರಂಭವಾಗಿದೆ. ಆರಂಭದ ದಿನವೇ ಅಂಗಡಿಯವನು ನೀಡುವ ಆಫರ್ ನಲ್ಲಿ ಖರೀದಿಗೆ ಜನತೆ ಮುಗಿಬಿದ್ದಿದ್ದಾರೆ. ಒಂದು ಸಾವಿರ ರುಪಾಯಿಗೆ 8 ಶರ್ಟ್, ಸಾವಿರಕ್ಕೆ 4 ಪ್ಯಾಂಟ್, 1 ಸಾವಿರ ರು.ಗೆ ಎರಡು ಜತೆ ಶೂ ಆಫರನ್ನು ಮಾಲೀಕ ನೀಡಿದ್ದಾರೆ. ಮಾಲೀಕ ನೀಡಿರುವ ಆಫರ್ ಗೆ ಅಪಾರ ಪ್ರಮಾಣದಲ್ಲಿ ಜನತೆ ಆಗಮಿಸಿ ಖರೀದಿಗೆ ಮುಗಿಬಿದ್ದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದ ಘಟನೆ ಜರುಗಿದೆ.