ಉದ್ಯೋಗಕ್ಕೆ ಸೇರಲು ವ್ಯಕ್ತಿತ್ವ ಮುಖ್ಯ: ಡಾ. ಅಜಿತ ಪ್ರಸಾದ

| Published : Mar 13 2024, 02:09 AM IST

ಉದ್ಯೋಗಕ್ಕೆ ಸೇರಲು ವ್ಯಕ್ತಿತ್ವ ಮುಖ್ಯ: ಡಾ. ಅಜಿತ ಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗ ಗಿಟ್ಟಿಸಿಕೊಳ್ಳಲು ಕೇವಲ ವಿದ್ಯಾರ್ಹತೆ ಸಾಲದು. ಒಳ್ಳೆಯ ನಡತೆ, ವ್ಯಕ್ತಿತ್ವ, ನೈತಿಕತೆ ಇದ್ದರೆ ಉದ್ಯೋಗವೇ, ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಧಾರವಾಡ:

ಉದ್ಯೋಗ ಗಿಟ್ಟಿಸಿಕೊಳ್ಳಲು ಕೇವಲ ವಿದ್ಯಾರ್ಹತೆ ಸಾಲದು. ಒಳ್ಳೆಯ ನಡತೆ, ವ್ಯಕ್ತಿತ್ವ, ನೈತಿಕತೆ ಇದ್ದರೆ ಉದ್ಯೋಗವೇ, ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಜೆಎಸ್ಸೆಸ್‌ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಬಾಷ್ ಬ್ರಿಡ್ಜ್ ಮತ್ತು ಜನತಾ ಶಿಕ್ಷಣ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ನಿರ್ವಹಿಸುತ್ತಿರುವ ಕೆಲಸದಲ್ಲಿ ಪ್ರಾಮಾಣಿಕತೆ, ನಂಬಿಕೆ, ಪರಿಶ್ರಮ ಹಾಗೂ ಸಾಧಿಸುವ ಛಲವಿದ್ದಾಗ ಮಾತ್ರ ನಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಮೊದಲು ಉದ್ಯೋಗ ಅರಸಿಕೊಂಡು ಹೋಗುವ ಕಾಲಮಾನವಿತ್ತು. ಆದರೆ, ಈಗ ಉದ್ಯೋಗದಾತರೇ ಉದ್ಯೋಗಮೇಳಗಳಲ್ಲಿ ಭಾಗವಹಿಸಿ ನಿಮ್ಮನ್ನು ಉದ್ಯೋಗಕ್ಕೆ ಆಹ್ವಾನಿಸುತ್ತಿದ್ದಾರೆ. ಇಂತಹ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಸಂದರ್ಶನ ನೀಡುವ ಮುನ್ನ ನಿಮ್ಮ ಅಗತ್ಯತೆಗಳನ್ನು ಮನಗಂಡು, ಕೌಶಲ್ಯ ಬೆಳೆಸಿಕೊಳ್ಳಿ. ಸರಿಯಾದ ಸಮವಸ್ತ್ರ ನಿಮ್ಮದಾಗಿರಲಿ, ನಮ್ಮ ಗುರಿ ಹಾಗೂ ಮಾತಿನಲ್ಲಿ ಸ್ಪಷ್ಟತೆಯಿರಲಿ. ಯಾವುದೇ ಹಿಂಜರಿಕೆಯಿಲ್ಲದೇ ಸಂದರ್ಶನ ನೀಡಿ ಎಂದರು.

ಬಾಷ್ ಬ್ರಿಡ್ಜ್‌ನ ಉದ್ಯೋಗಾಧಿಕಾರಿ ಖಲೀಮ್ ಮಾತನಾಡಿ, ಉದ್ಯೋಗಾವಕಾಶಗಳು ಹೇರಳವಾಗಿವೆ. ನಮ್ಮ ಸುತ್ತಮುತ್ತಲಿ ಆರಾಮದಾಯಕ ವಲಯದಲ್ಲಿಯೇ ಉದ್ಯೋಗವನ್ನು ಅರಸುತ್ತಾ ಹೋದರೆ, ನಿಮಗೆ ಉದ್ಯೋಗ ದೊರಕುವುದು ಕಷ್ಟಕರ. ಕಾರಣ ನಮಗೆ ಸಿಗುವ ಉದ್ಯೋಗವಲಯದಲ್ಲಿಯೇ ಆಸಕ್ತಿವಹಿಸಿ ದುಡಿದು ಅದನ್ನೆ ನಮ್ಮ ಆರಾಮದಾಯಕ ವಲಯವನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು.

ಎಲ್.ಸಿ.ಸಿ ಧಾರವಾಡದ ಮಹೇಶ ಭಟ್ ಮಾತನಾಡಿ, ಇಂದು ಉದ್ಯೋಗ ಪ್ರತಿಯೊಬ್ಬರಿಗೂ ಅಗತ್ಯವಾದ ಅಂಶ. ಆದರೆ, ಉದ್ಯೋಗ ಪ್ರಾಪ್ತವಾಗಬೇಕಾದರೆ ಅದರದೇ ಆದ ಮಾನದಂಡಗಳಿವೆ. ಯಾವ ಉದ್ಯೋಗ ಹೆಚ್ಚಲ್ಲ, ಕಡಿಮೆಯೂ ಅಲ್ಲ. ನಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ಅದರ ಫಲಿತಾಂಶವಿರುತ್ತದೆ. ಸಂದರ್ಶನ ಎದುರಿಸುವುದು ಹೇಗೆ, ಸಂದರ್ಶನ ನಡೆಯುವಾಗ ಏನೇಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು? ಉದ್ಯೋಗದ ಆಯ್ಕೆ ಹಾಗೂ ವೇತನ ಹೇಗಿರಬೇಕು ಎಂದು ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಜೆ.ಎಸ್.ಎಸ್. ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಮಹಾವಿರ ಉಪಾದ್ಯೆ ಇದ್ದರು.

ಬಾಷ್ ಕಂಪನಿಯ ಕೋ-ಆರ್ಡಿನೇಟರ್ ಸುಧೀರ ಪಿಡ್ಡಿ ನಿರೂಪಿಸಿದರು. ಮೇಳದಲ್ಲಿ 30 ಕಂಪನಿಗಳು, 1500ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.