ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ: ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಎದುರಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸೋಮವಾರ ಕೆಬಿಜೆಎನ್ಎಲ್ ವಿವಿಧ ಅಧಿಕಾರಿಗಳು ಭೇಟಿ ನೀಡಿ ಧರಣಿ ಹಿಂಪಡೆಯುವಂತೆ ಧರಣಿ ನಿರತರಲ್ಲಿ ಮನವಿ ಮಾಡಿದರು.ಕೆಬಿಜೆಎನ್ಎಲ್ ಆಲಮಟ್ಟಿ ಅಣೆಕಟ್ಟು ವೃತ್ತದ ಪ್ರಭಾರ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಮನಗೌಡ ಹಳ್ಳೂರ ಮಾತನಾಡಿ, ಈಗಾಗಾಲೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ನಿಮ್ಮ ಪ್ರಮುಖ ಬೇಡಿಕೆಗಳಲ್ಲೊಂದಾದ ಗುತ್ತಿಗೆದಾರರ ಇಎಂಡಿ ಹಣ ಮರಳಿಸಲು ಆದೇಶ ಮಾಡಿದ್ದಾರೆ. ಇನ್ನಿತರ ಬೇಡಿಕೆಗಳ ಕುರಿತು ಚರ್ಚಿಸಲು ಬುಧವಾರ ಇಲ್ಲವೆ ಗುರುವಾರ ಗುತ್ತಿಗೆದಾರರ ಜತೆ ಎಂಡಿಯವರೇ ಸಭೆ ನಡೆಸುವುದಾಗಿ ಹೇಳಿದ್ದಾರೆ. ಹೀಗಾಗಿ, ಧರಣಿ ಹಿಂಪಡೆಯಲು ಮನವಿ ಮಾಡಿದರು. ಆದರೆ ಪಟ್ಟುಬಿಡದ ಧರಣಿ ನಿರತ ಗುತ್ತಿಗೆದಾರರು ಕಚೇರಿಗೆ ಬೀಗ ಹಾಕುವ ಹಾಗೂ ಅಹೋರಾತ್ರಿ ಧರಣಿ ಮಾತ್ರ ಹಿಂತೆಗೆದುಕೊಳ್ಳುತ್ತೇವೆ. ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಧರಣಿ ಸ್ಥಳಕ್ಕೆ ಬಂದು ಬೇಡಿಕೆಗಳ ಈಡೇರಿಕೆಯ ಸ್ಪಷ್ಟ ಭರವಸೆ ನೀಡುವವರಿಗೂ ಅನಿರ್ಧಿಷ್ಟ ಧರಣಿ ಮುಂದುವರೆಸುವುದಾಗಿ ಹೇಳಿದರು. ಗುತ್ತಿಗೆದಾರರ 11 ಬೇಡಿಕೆಗಳ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಂಘದ ಅಧ್ಯಕ್ಷ ಎಂ.ಎ.ಮೇಟಿ ನೀಡಿದರು.
ಧರಣಿಯಲ್ಲಿ ಅಂದಾನಯ್ಯ ಹಿರೇಮಠ, ವಿ.ಎಂ.ಹಿರೇಮಠ, ಗೋಪಾಲ ವಡ್ಡರ, ಸುರೇಶ್ ಕೋಟೆಕಲ್, ಹನುಮಂತ ಪೂಜಾರಿ, ಸುನೀಲ್ ಲಮಾಣಿ, ಮಕ್ಸೂದ ಮಕಾನದಾರ, ಎಂ.ಆರ್.ಕಮತಗಿ, ಚನ್ನಬಸು ಅಂಗಡಿ, ವಿನೋದ ಉಳ್ಳಾಗಡ್ಡಿ, ಸಂತೋಷ ಪಾಟೀಲ, ಬಸವರಾಜ ದಂಡಿನ ಬಿ.ಪಿ.ರಾಠೋಡ, ಚನ್ನಪ್ಪ ತಳವಾರ, ಸುರೇಶ ವಡ್ಡರ, ರವಿ ಇಟಗಿ, ಸುನಿಲ ಲಮಾಣಿ, ಟಿ.ಎಸ್.ಅಫಜಲಪುರ, ಲಚ್ಚಪ್ಪ ಮೆಳ್ಳಿಗೇರಿ ಇದ್ದರು.