ಪಟ್ಟಣದ ಛತ್ರದ ಬೀದಿಯ ಶ್ರೀ ಬನ್ನಿ ಮಂಟಪ ಸೇವಾ ಸಮಿತಿ ನೂತನ ಮಂಟಪ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದಲ್ಲಿ ನೂರಾರು ವರ್ಷಗಳ ಇತಿಹಾಸದ ದೊಡ್ಡಪೇಟೆ ಬನ್ನಿಮರವನ್ನು ಸರ್ಕಾರ ದಿಂದಲೇ ವಿಜಯ ದಶಮಿಯಂದು ಅಂಬು ಹೊಡೆಯುವ ಪ್ರತೀತಿ ನಡೆಯುತ್ತಿದ್ದು ಇಂತಹ ಪವಿತ್ರ ಬನ್ನಿ ಮರದ ಸುತ್ತಾ ಮಂಟಪ ನಿರ್ಮಿಸಲು ಜೀರ್ಣೋದ್ಧಾರಕ್ಕೆ ಮುಂದಾಗಿರುವ ಸಮಿತಿಗೆ ಸಹಕಾರ ನೀಡುವುದಾಗಿ ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಛತ್ರದ ಬೀದಿಯ ಶ್ರೀ ಬನ್ನಿ ಮಂಟಪ ಸೇವಾ ಸಮಿತಿ ನೂತನ ಮಂಟಪ ನಿರ್ಮಿಸಲು ಗುರುವಾರ ಆಯೋಜಿಸಿದ್ದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬನ್ನಿ ಸೇವಾ ಸಮಿತಿಯವರು ಅದ್ಧೂರಿ ಪೂಜೆ ನೆರವೇರಿಸಿದ್ದು ಸಂತಸ ತಂದಿದೆ. ನೂರಾರು ವರ್ಷಗಳ ಇತಿಹಾಸದ ಈ ಬನ್ನಿ ಮರದ ಸುತ್ತ ಮುತ್ತ ವಿವಿಧ ಧರ್ಮಗಳ ಜನಾಂಗದವರು ವಾಸವಾಗಿ ದ್ದಾರೆ. ಬನ್ನಿ ಮರದ ಪೂಜಾ ಕೈಂಕರ್ಯಗಳಿಗೆ ಚ್ಯುತಿ ಬಾರದಂತೆ ನಡೆದಿದೆ. ಸರ್ಕಾರದ ಪ್ರತಿ ನಿಧಿ ವಿಜಯದಶಮಿಯಂದು ಅಂಬು ಹೊಡೆಯುವ ಪ್ರತೀತಿ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಜೀರ್ಣೋದ್ದಾರ ಸಮಿತಿಗೆ ನನ್ನ ಸಹಕಾರ ವಿದೆ ಎಂದು ಭರವಸೆ ನೀಡಿದರು.

ಇದೇ ಬೀದಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯವನ್ನು ಸಹ ಸಂಘಟನೆಗಳು ಮುಂದಾಗಿ ಕಲ್ಲಿನ ಕಟ್ಟಡ ನಿರ್ಮಿಸಲು ಮುಂದಾದಲ್ಲಿ ಆ ಕಾರ್ಯಕ್ಕೂ ಸಹಕಾರ ನೀಡುತ್ತೇನೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪುರಾತನ ಬನ್ನಿ ಮಂಟಪದ ಸ್ಥಳದಲ್ಲಿ ಮುಜರಾಯಿ ಇಲಾಖೆಯಿಂದ ಶ್ರೀ ಚನ್ನಕೇಶವ ಸ್ವಾಮಿ ಕರೆತಂದು ಅಂಬು ಹೊಡೆದು ಬನ್ನಿ ಮುರಿಯುವುದು ಸಂಪ್ರದಾಯ. ಈಗ ದುರಸ್ತಿ ಗೆ ಸಮಿತಿ ಮುಂದಾಗಿರುವುದಕ್ಕೆ ಭಕ್ತರ ಸಹಕಾರವೂ ಇದೆ ಎಂದರು. ಶ್ರೀ ಬನ್ನಿ ಮಂಟಪ ಸೇವಾ ಸಮಿತಿ ಅಧ್ಯಕ್ಷ ಈರಳ್ಳಿ ರಮೇಶ್ ಮಾತನಾಡಿ, ಇತಿಹಾಸದಿಂದಲೂ ತಾಲೂಕು ಆಡಳಿತದಿಂದ ಅಂಬು ಹೊಡೆಯುತ್ತಾ ಪೂಜೆ ನಡೆಸಿಕೊಂಡು ಬಂದಿದೆ ಬನ್ನಿ ಕಟ್ಟಡ ಶಿಥಿಲಗೊಂಡಿದ್ದು ಸೇವಾ ಸಮಿತಿ, ಸುತ್ತಲಿನ ಸರ್ವ ಧರ್ಮಿಯರ ಸಹಕಾರದಿಂದ ಅಂದಾಜು ₹30 ಲಕ್ಷ ವೆಚ್ಚದಲ್ಲಿ ಮಂಟಪ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.


ಜಿಪಂ ಮಾಜಿ ಸದಸ್ಯ ಶರತ್‌ ಕೃಷ್ಣಮೂರ್ತಿ ಮಾತನಾಡಿ, ಬನ್ನಿ ಮರದ ಕಟ್ಟಡ ಜೀರ್ಣೋದ್ಧಾದ ಬಗ್ಗೆ ಸಮಿತಿಯವರು ಕೈಗೊಂಡಿರುವ ನಿರ್ಣಯ ಉತ್ತಮವಾಗಿದೆ. ಧಾರ್ಮಿಕ ಕಾರ್ಯಗಳಿಗೆ ಇಲ್ಲಿನ ಎಲ್ಲ ಧರ್ಮೀಯರ ಸಹಕಾರ ಇದೆ ಎಂದರು.

ತೋಟದ ಮನೆ ಮೋಹನ್‌, ಭರತ್ ಕೆಂಪರಾಜ್, ಕಂಸಾಗರ ಸೋಮಶೇಖರ್, ಮಂಜುನಾಥ್ ,ಚೇತನ್‌ ದೇವರ ಕುರಿ, ರಾಜು, ಪ್ರದೀಪ್, ಮನು ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಮಹಿಳೆಯರು ಇದ್ದರು.19ಕೆಕೆಡಿಯು3.

ಕಡೂರು ದೊಡ್ಡಪೇಟೆಯಲ್ಲಿರುವ ಬನ್ನಿ ಮಂಟಪದ ಜೀರ್ಣೋದ್ದಾರ ಕಾರ್ಯಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು.