ಕನಕ ಭವನದ ಆವರಣದಲ್ಲಿ ನಾಟಿ ಕೋಳಿ ಬಿರಿಯಾನಿಯನ್ನು ಹಂಚಲು ಕೌಂಟರ್‌ ವ್ಯವಸ್ಥೆ ಮಾಡಲಾಗಿತ್ತು. ಆದರೂ ಬಿರಿಯಾನಿ ಪಡೆಯಲು ನೂಕು ನುಗ್ಗಲು ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬರೆದ ಹಿನ್ನೆಲೆ ಪಟ್ಟಣದಲ್ಲಿ ಕನಕ ಯುವ ಸೇನಾ ಸಮಿತಿ ಹಾಗೂ ಕುರುಬ ಸಮಾಜದಿಂದ ೨ಸಾವಿರ ಮಂದಿಗೆ ನಾಟಿ ಕೋಳಿ ಬಿರಿಯಾನಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.

ಪಟ್ಟಣದ ಹಂಗಳ ರಸ್ತೆಯ ನಿರ್ಮಾಣ ಹಂತದ ಕನಕ ಭವನದ ಆವರಣದಲ್ಲಿ ಬುಧವಾರ ಮುಂಜಾನೆಯಿಂದಲೇ ನಾಟಿ ಕೋಳಿ ಬಿರಿಯಾನಿಯನ್ನು ತಯಾರಿಸಲಾಯಿತು. ಪಟ್ಟಣದ ಕನಕದಾಸ ವೃತ್ತದಿಂದ ಕನಕ ಯುವ ಸೇನೆ ಸಮಿತಿ ಸದಸ್ಯರು ಹಾಗೂ ಕುರುಬ ಸಮಾಜದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಮೆರವಣಿಗೆ ಮೂಲಕ ಕನಕ ಭವನಕ್ಕೆ ತೆರಳಿದರು. ಈ ಸಮಯದಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಮಾಸ್‌ ಲೀಡರ್‌

ಪಟ್ಟಣದ ಕನಕ ಭವನದ ಆವರಣದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳನ್ನುದ್ದೇಶಿಸಿ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ ಮಾಸ್‌ ಲೀಡರ್‌ ಎಂದು ಹೇಳಿದರು. ನೂಕು ನುಗ್ಗಲು

ಕನಕ ಭವನದ ಆವರಣದಲ್ಲಿ ನಾಟಿ ಕೋಳಿ ಬಿರಿಯಾನಿಯನ್ನು ಹಂಚಲು ಕೌಂಟರ್‌ ವ್ಯವಸ್ಥೆ ಮಾಡಲಾಗಿತ್ತು. ಆದರೂ ಬಿರಿಯಾನಿ ಪಡೆಯಲು ನೂಕು ನುಗ್ಗಲು ಉಂಟಾಗಿತ್ತು.

ಈ ಸಮಯದಲ್ಲಿ ಕನಕ ಯುವ ಸೇನಾ ಸಮಿತಿ ಅಧ್ಯಕ್ಷ ರಘು ಎಸ್‌, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಕಿರಣ್‌ ಗೌಡ, ಮಾಜಿ ಉಪಾಧ್ಯಕ್ಷ ಜಿ.ಎಲ್.ರಾಜು, ರಾಜ್ಯ ಅಹಿಂದ ಉಪಾಧ್ಯಕ್ಷ ಪೊಲೀಸ್‌ ಪ್ರಕಾಶ್‌, ಕನಕ ಸೇನೆ ಜಿಕೆಎನ್‌ ವಿಶ್ವ, ಸಂದೀಪ್‌ ಕುಮಾರ್‌, ಸಾಗರ್‌, ಪ್ರತಾಪ್‌ ಗೌಡ, ಮಂಜು, ಪ್ರಮೋದ್‌, ಮನು, ಹೊಸೂರು ಶಿವಣ್ಣ, ಅರುಣ್‌ ಚಿಟ್ಟೆ, ಪುರಸಭೆ ಮಾಜಿ ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಮಾಜಿ ಸದಸ್ಯರಾದ ಕೆ.ಶಿವಸ್ವಾಮಿ, ದೊಡ್ಡಣ್ಣ, ಬಸವರಾಜು, ಹಾಪ್‌ ಕಾಮ್ಸ್‌ ಮಾಜಿ ಅಧ್ಯಕ್ಷ ಪುತ್ತನಪುರ ಶಿವಣ್ಣ, ಶಶಿ, ವಿಶ್ವಾಸ್‌ ಸೇರಿದಂತೆ ಕುರುಬ ಸಮಾಜದ ಮುಖಂಡರು ಹಾಗೂ ಇತರೆ ವರ್ಗದ ಸಾರ್ವಜನಿಕರು ಇದ್ದರು.