ಗರ್ಭಿಣಿ, ಬಾಣಂತಿಯರು ಸಮತೋಲಿತ ಆಹಾರ ಸೇವಿಸಿ

| Published : Oct 01 2025, 01:00 AM IST

ಸಾರಾಂಶ

ಗರ್ಭಿಣಿ, ಬಾಣಂತಿಯರ ಆಹಾರದಲ್ಲಿ ಹೆಚ್ಚು ಪೌಷ್ಠಿಕಾಂಶ, ಸತ್ವಯುತ ಆಹಾರವನ್ನು ಸೇವನೆ ಮಾಡಬೇಕು, ಯಾವುದೇ ಕಾರಣಕ್ಕೂ ಆಹಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಜೊತೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ತನುಜಾ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ, ಯಳಂದೂರು

ಗರ್ಭಿಣಿ, ಬಾಣಂತಿಯರ ಆಹಾರದಲ್ಲಿ ಹೆಚ್ಚು ಪೌಷ್ಠಿಕಾಂಶ, ಸತ್ವಯುತ ಆಹಾರವನ್ನು ಸೇವನೆ ಮಾಡಬೇಕು, ಯಾವುದೇ ಕಾರಣಕ್ಕೂ ಆಹಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಜೊತೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ತನುಜಾ ಕರೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ ಹಾಗೂ ತಾಪಂ ವತಿಯಿಂದ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೊಟ್ಟೆಯಿಂದ ಅಮೈನೋ ಆಸಿಡ್ ಲಭಿಸುತ್ತದೆ. ಬೆಣ್ಣೆ, ಸೊಪ್ಪು ತರಕಾರಿ, ಒಣ ಹಣ್ಣುಗಳು, ಪ್ರತಿ ನಿತ್ಯ ೮ ಲೋಟಕ್ಕೂ ಹೆಚ್ಚು ನೀರು ಸೇವಿಸುವುದರಿಂದ ನಾರಿನಾಂಶ, ಪ್ರೋಟಿನ್, ಶರ್ಕರ, ಪಿಷ್ಠಾಧಿಗಳು ದೇಹಕ್ಕೆ ಲಭಿಸುತ್ತದೆ. ಈ ಬಗ್ಗೆ ವೈದ್ಯರ ಸಲಹೆಯೊಂದಿಗೆ ಆಹಾರದ ಚಾರ್ಟ್ ಮಾಡಿಕೊಂಡು ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಇದರಿಂದ ತಾಯಿ ಹಾಗೂ ಮಗು ಹೆಚ್ಚು ಆರೋಗ್ಯವಂತವಾಗಿರುತ್ತಾರೆ. ಆಹಾರದಲ್ಲಿ ಸಕ್ಕರೆ ಹಾಗೂ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು. ಅಡುಗೆ ಎಣ್ಣೆಯನ್ನು ಆದಷ್ಟು ನಿಗಧಿತವಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.ವಕೀಲ ಕಾಂತರಾಜು ಮಾತನಾಡಿ, ಹೆಣ್ಣು ಮಕ್ಕಳಿಗೆ ಕಾನೂನಿನಲ್ಲಿರುವ ವಿಶೇಷ ಸೌಲಭ್ಯಗಳು, ವರದಕ್ಷಿಣೆ ಕಾಯ್ದೆ, ಆಸ್ತಿ ಹಕ್ಕು ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಕಡ್ಡಾಯ ಶಿಕ್ಷಣ ನೀತಿ, ಸೇರಿದಂತೆ ವಿವಿಧ ಕಾನೂನುಗಳು ಇದರಡಿ ಲಭಿಸುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಸಿಡಿಪಿಒ ಜಯಶೀಲ ಮಾತನಾಡಿ, ಗರ್ಭಿಣಿ ಬಾಣಂತಿಯರಿಗೆ ಇಲಾಖೆಯ ವತಿಯಿಂದ ನೀಡಲಾಗುವ ಸೌಲಭ್ಯಗಳು, ಅಂಗನವಾಡಿ ಕಾರ್ಯಕರ್ತೆಯರ ಭಾಗವಹಿಸುವಿಕೆ, ಇಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ತಹಸೀಲ್ದಾರ್ ಎಸ್.ಎಲ್. ನಯನ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ, ಮಕ್ಕಳಿಗೆ ಅನ್ನಪ್ರಾಶನ ಹಾಗೂ ಅಕ್ಷರಭ್ಯಾಸ ಮಾಡಿಸಿ ಮಾತನಾಡಿದರು. ಇಲಾಖೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಸುರೇಶ್ ಮಾತನಾಡಿದರು. ಇಲಾಖೆಯ ಮೇಲ್ವಿಚಾರಕಿ ಸರಸ್ವತಿ, ಸುಮಿತ್ರ ಪಾಟೀಲ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅಲ್ಮಾಜ್ ಬೇಗ ಪಪಂ ಆರೋಗ್ಯಾಧಿಕಾರಿ ರಾಘವೇಂದ್ರ, ತಾಪಂನ ಸಚಿನ್, ಪ್ರೇಮಾ, ಅನಿತಾ, ರಾಣಿ, ಭಾಗ್ಯ, ಕೆ. ಮೀನಾಕ್ಷಿ, ಎಂ. ಮೀನಾಕ್ಷಿ, ಸೌಭಾಗ್ಯ ಇದ್ದರು.