ಸಾರಾಂಶ
ತುರ್ತು ಚಿಕಿತ್ಸೆಗಾಗಿ ಕಿಕ್ಕೇರಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದೆ ತುರ್ತು ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತರಾದರು.
ಕಿಕ್ಕೇರಿ: ತೋಟದಲ್ಲಿದ್ದ ಸೇವಂತಿಗೆ ಹೂವು ಕೀಳಲು ತೆರಳಿದ್ದಾಗ ವಿಷಪೂರಿತ ಹಾವು ಕಡಿದು ರೈತ ಮಹಿಳೆ ಸಾವಿಗೀಡಾಗಿರುವ ಘಟನೆ ಮರಿಯನ ಹೊಸೂರು ಗ್ರಾಮದಲ್ಲಿ ನಡೆದಿದೆ. ರೈತ ಕೆಂಪೇಗೌಡರ ಪತ್ನಿ ಗೌರಮ್ಮ(45) ಮೃತ ಮಹಿಳೆ. ತಮ್ಮ ತೋಟದಲ್ಲಿ ಸೇವಂತಿಗೆ ಹೂವು ಬೆಳೆದಿದ್ದರು. ಆಯುಧಪೂಜೆ ಹಬ್ಬಕ್ಕಾಗಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಮಂಗಳವಾರ ತಮ್ಮ ತೋಟದಲ್ಲಿ ಸೇವಂತಿಗೆ ಹೂವು ಕೀಳಲು ಬೆಳಗ್ಗೆ ತೆರಳಿದ್ದರು. ಹೂವು ಕೀಳುವಾಗ ಮುಖದ ಮೂಗಿನ ಭಾಗಕ್ಕೆ ವಿಷಪೂರಿತ ಹಾವು ಕಡಿದಿದೆ. ತೀವ್ರ ಅಸ್ವಸ್ಥಳಾಗಿರುವುದನ್ನು ಕಂಡು ಈಕೆಯನ್ನು ಸಂಬಂಧಿಕರು ನೋಡಿದ್ದಾರೆ.
ತುರ್ತು ಚಿಕಿತ್ಸೆಗಾಗಿ ಕಿಕ್ಕೇರಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದೆ ತುರ್ತು ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತರಾದರು. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಮೃತ ಮಹಿಳೆಗೆ ಪತಿ, ನಾಲ್ವರು ಪುತ್ರಿಯರು ಇದ್ದಾರೆ.