ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಥಸಪ್ತಮಿ ಅಂಗವಾಗಿ ಫೆ.5ರಂದು ನಡೆಯಲಿರುವ ಐತಿಹಾಸಿಕ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವದ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ.ಅಂದು ಮುಂಜಾನೆ ಸೂರ್ಯ ಉದಯಕ್ಕೂ ಮುನ್ನ ದೇಗುಲದಲ್ಲಿನ ಸೂರ್ಯ ಮಂಡಲ ಹಾಗೂ ಗಜಲಕ್ಷ್ಮೀ ರಥಗಳು ವಿಶೇಷವಾಗಿ ಅಲಂಕೃತಗೊಂಡು ದೇವರ ಅನುಷ್ಠಾನದ ಬಳಿಕ ಪೂಜೆಗೆ ಒಳಪಟ್ಟು ನಂತರ ಪಟ್ಟಣದ ರಾಜ ಬೀದಿಗಳಾದ ಪೂರ್ಣಯ್ಯ ಬೀದಿ, ಉತ್ತರಾದಿ ಮಠದ ರಸ್ತೆಯ ಮೂಲಕ ಪಟ್ಟಣದ ಮುಖ್ಯಪೇಟೆ ಬೀದಿ ಮಾರ್ಗವಾಗಿ ಭವ್ಯರಥಗಳು ಮೆರವಣಿಗೆ ರೂಪದಲ್ಲಿ ಸಂಚರಿಸಲಿದೆ.
ನಂತರ ಮಧ್ಯಾಹ್ನದ ವೇಳೆಗೆ ವೇದ ಮಂತ್ರ ಪಠಣೆಯೊಂದಿಗೆ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ವಜ್ರ ವೈಡೂರ್ಯ ರತ್ನ ಖಚಿತ ಆಭರಣಗಳಿಂದ ಅಲಂಕೃತಗೊಂಡ ಶ್ರೀ ರಂಗನಾಯಕಿ ಅಮ್ಮನವರ ಸಮೇತ ವಿರುವ ಶ್ರೀರಂಗನ ಉತ್ಸವ ಮೂರ್ತಿಯನ್ನು ವಿವಿಧ ಬಗೆಯ ಬಣ್ಣದ ಹೂಗಳು ಹಾಗೂ ರೇಷ್ಮೆ ಬಟ್ಟೆಗಳಿಂದ ಸರ್ವಾಲಕೃಂತಗೊಂಡ ಬ್ರಹ್ಮರಥೋತ್ಸವದಲ್ಲಿ ಪ್ರತಿಷ್ಠಾಪಿಸಲಿದ್ದರು, ಈ ಎಲ್ಲಾ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ.ದೇವಾಲಯದ ಸುತ್ತಲೂ ಒಂದು ಸುತ್ತು ಭಕ್ತರ ಸಾನಿಧ್ಯದಲ್ಲಿ ರಥೋತ್ಸವನ್ನು ಎಳೆಯುವ ಮೂಲಕ ಮೆರವಣಿಗೆ ಮಾಡಲಾಗುತ್ತದೆ. ರಾಜ್ಯದ ಮೂಲೆಗಳಿಂದ ಸಹಸ್ರಾರು ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಜೊತಗೆ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ದಾನಿಗಳಿಂದ ಅನ್ನ ಸಂತರ್ಪಣೆ ಕೂಡ ನಡೆಸಲು ಸಿದ್ದತೆ ನಡೆಸಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಉಮಾ ತಿಳಿಸಿದರು.
ಇಂದು ಕಿವಿ, ಮೂಗು, ಗಂಟಲು, ತಪಾಸಣೆ ಶಿಬಿರಹಲಗೂರು: ಚನ್ನಪಟ್ಟಣ ರಸ್ತೆಯ ಹಲಗೂರು ಲಯನ್ಸ್ ಕ್ಲಬ್ ಭವನದಲ್ಲಿ ಜ.31ರಂದು ಉಚಿತ ಕಿವಿ ಮೂಗು ಗಂಟಲು ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಹಲಗೂರು ಲಯನ್ಸ್ ಕ್ಲಬ್ ಮತ್ತು ಡಿಆರ್‌ಎಂ ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್ ಮಂಡ್ಯ ಸಹಯೋಗದೊಂದಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಶಿಬಿರದಲ್ಲಿ ನುರಿತ ವೈದ್ಯಾಧಿಕಾರಿಗಳಾದ ಡಾ.ಅರ್ಮಿನಾ ಫಾತಿಮಾ ತಪಾಸಣೆ ನಡೆಸಲಿದ್ದಾರೆ. ಹಲಗೂರು ಹೋಬಳಿ ಜನತೆ ಶಿಬಿರದ ಸದ್ಬಳಕೆ ಮಾಡಿಕೊಳ್ಳುವಂತೆ ಸಂಸ್ಥೆ ಅಧ್ಯಕ್ಷ ಎನ್.ಕೆ.ಕುಮಾರ್ ತಿಳಿಸಿದ್ದಾರೆ.