ಬಂಜಾರ ಸಮುದಾಯದ ಕಲೆ ಉಳಿಸಿ ಬೆಳೆಸಿ: ಸೈನಾ ಭಗತ್‌ ಮಹಾರಾಜ

| Published : Jul 31 2025, 12:46 AM IST

ಬಂಜಾರ ಸಮುದಾಯದ ಕಲೆ ಉಳಿಸಿ ಬೆಳೆಸಿ: ಸೈನಾ ಭಗತ್‌ ಮಹಾರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕಲಾವಿದನಿಗೆ ಕಲೆ ಸಮಾಜದಲ್ಲಿ ಬೆಲೆ ತರುತ್ತವೆ. ಬಂಜಾರ ಸಮಾಜದವರು ಉತ್ತಮ ಹಾಡುಗಾರರು ಮತ್ತು ನೃತ್ಯ ಪಟುಗಳು. ಅವರ ಕಲೆ ಒಟ್ಟು ಸಮಾಜದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂದರು.

ಹಾವೇರಿ: ತಮ್ಮ ಉಡುಪು ಮತ್ತು ನೃತ್ಯದ ಮೂಲಕ ಈಗಲೂ ಅನನ್ಯತೆಯನ್ನು ಉಳಿಸಿಕೊಂಡಿರುವ ಲಂಬಾಣಿ ಜನಾಂಗ ಸದಾ ಕಷ್ಟ ಜೀವಿಗಳು. ಇಂಥ ಸಣ್ಣ ಸಮುದಾಯದ ಕಲೆ ಸಂಸ್ಕೃತಿಯನ್ನು ಬಹುಸಂಖ್ಯಾತ ಸಮಾಜದವರು ಪ್ರೀತಿ, ವಿಶ್ವಾಸದಿಂದ ಕಂಡು ಅವರ ಕಲೆಯನ್ನು ಬೆಳೆಸಬೇಕು ಎಂದು ಬಂಜಾರ ಸಮುದಾಯದ ಸಾಲೂರಮಠದ ಸೈನಾ ಭಗತ್ ಮಹಾರಾಜರು ತಿಳಿಸಿದರು.ಇಲ್ಲಿಯ ಗುರುಭವನದಲ್ಲಿ ಪೂರ್ವಿಕಾ ಬಂಜಾರ ಸಾಂಸ್ಕೃತಿಕ ಕಲಾ ಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕಲಾವಿದನಿಗೆ ಕಲೆ ಸಮಾಜದಲ್ಲಿ ಬೆಲೆ ತರುತ್ತವೆ. ಬಂಜಾರ ಸಮಾಜದವರು ಉತ್ತಮ ಹಾಡುಗಾರರು ಮತ್ತು ನೃತ್ಯ ಪಟುಗಳು. ಅವರ ಕಲೆ ಒಟ್ಟು ಸಮಾಜದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಇಂತಹ ಸಮಾಜದ ಪ್ರತಿನಿಧಿಯಾಗಿ ಗೀತಾಬಾಯಿ ಲಮಾಣಿ ತಮ್ಮ ಪೂರ್ವಿಕಾ ಕಲಾ ಸಂಸ್ಥೆಯ ಮೂಲಕ ಘನತೆ ಹೆಚ್ಚಿಸಿದ್ದಾರೆ ಎಂದರು.ಸಮಾರಂಭವನ್ನು ಉದ್ದೇಶಿಸಿ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ, ಆರ್.ಬಿ. ಪಾಟೀಲ, ಪ್ರಭಾಕರ ತಳವಾರ, ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್, ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಸಾವಕ್ಕನವರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಡವೆಪ್ಪ ಆನವಟ್ಟಿ, ದಲಿತ ನಾಯಕ ಸಂಜಯಗಾಂಧಿ ಸಂಜೀವಣ್ಣನವರ, ಚೇತನರಾಜ ಎನ್., ಮುಂತಾದವರು ಮಾತನಾಡಿದರು.ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಮೇಶ ಲಮಾಣಿ, ಗೌತಮ ಸಾವಕ್ಕನವನರವರ ಸ್ಯಾಕ್ಸೊಫೋನ್, ರೇಣುಕಾ ಗೋರಿಮಟ್ಟಿ ಅವರ ಸೋಬಾನಿ ಪದ, ಆರುಂಧತಿ ಅವರ ಜೋಗತಿ ನೃತ್ಯ, ಎಸ್. ಕುಶಾಲ ಚಿತ್ರಗಾರರ ಭಕ್ತಿಗೀತೆ, ಜ್ಯೋತಿ ಅರ್ಕಸಾಲಿ ಅವರ ಕೋಲಾಟ, ರಕ್ಷಿತಾ ಬಂಜಾರ, ಮೇಘಾ ಲಂಬಾಣಿ ಅವರುಗಳ ಲಂಬಾಣಿ ನೃತ್ಯ ಪ್ರದರ್ಶನವಾದವು. ರಾಜಾಸಾಹೇಬ ಮಾನೇಗಾರ, ಪ್ರದೀಪಗೌಡ್ರ, ನಾಗರಾಜ ಲಮಾಣಿ, ಶಾಂತಪ್ಪ ಲಮಾಣಿ, ಶೇಖಪ್ಪ ದೇವಪ್ಪ ಲಮಾಣಿ, ಹಾಲೇಶ ಗೋಪಿನಾಯಕ್, ಸುನೀಲ್ ಲಮಾಣಿ, ಯೂಸುಫ್ ಸೈಕಲ್‌ಗಾರ, ಶಿವಯೋಗಿ ಗುರ್ಜನವರ ಮುಂತಾದವರು ಇದ್ದರು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಪೂರ್ವಿಕಾ ಬಂಜಾರ ಕಲಾಸಂಸ್ಥೆಯ ಮುಖ್ಯಸ್ಥರಾದ ಗೀತಾಬಾಯಿ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತ ಹರನಗಿರಿ ಮತ್ತು ಕುಬೇರ ನಾಯ್ಕ ನಿರೂಪಿಸಿದರು. ಶಿವಪ್ಪ ಲಮಾಣಿ ವಂದಿಸಿದರು.